News Karnataka Kannada
Friday, March 29 2024
Cricket
ಮಂಗಳೂರು

ಉತ್ತಮ ಪರಂಪರೆ, ಧರ್ಮ, ಸಂಸ್ಕೃತಿಯನ್ನು ದ.ಕ. ಜಿಲ್ಲೆಯ ಜನರು ಕಾಪಾಡಿಕೊಂಡು ಬಂದಿದ್ದಾರೆ: ಡಿ.ಕೆ.ಶಿವಕುಮಾರ್

Photo Credit : News Kannada

ಬಂಟ್ವಾಳ : ಎಲ್ಲಾ ಧರ್ಮದ ಜನರಿಗೂ ಬದುಕಲು ಅವಕಾಶ ನೀಡಿದ ಅವಿಭಜಿತ ದ.ಕ. ಜಿಲ್ಲೆ ಪವಿತ್ರವಾದ ಜಿಲ್ಲೆ. ಸಂಸ್ಕೃತಿ, ಶಿಕ್ಷಣ, ಧರ್ಮಕ್ಷೇತ್ರಗಳಿಗಳಿಗೆ ಹೆಸರುವಾಸಿಯಾದ ಈ ಜಿಲ್ಲೆಯಲ್ಲಿ ಉತ್ತಮ ಪರಂಪರೆ, ಧರ್ಮ, ಸಂಸ್ಕೃತಿಯನ್ನು ಇಲ್ಲಿನ ಜನರು ಕಾಪಾಡಿಕೊಂಡು ಬಂದಿದ್ದಾರೆ. ಇಲ್ಲಿನ ಜನ ಇಡೀ ರಾಜ್ಯಕ್ಕೆ ಮಾರ್ಗದರ್ಶಕರು, ಜಾತಿ, ಧರ್ಮದ ಭೇದ ಬಿಟ್ಟು ಒಗ್ಗಟ್ಟಿನಿಂದ ಬದುಕುತ್ತಿದ್ದೀರಿ. ಈಗ ಕೆಲವಡೆ ಸ್ವಲ್ಪ ವ್ಯತ್ಯಾಸ ಕಂಡು ಬರುತ್ತಿದ್ದರೂ ಅಂತಿಮವಾಗಿ ನಂಬಿಕೆ, ಪ್ರೀತಿ, ವಿಶ್ವಾಸ ಮಾತ್ರ ಉಳಿದು ಮಾನವ ಧರ್ಮಕ್ಕೆ ಜಯವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಪಂಜಿಕಲ್ಲು ‌ಗ್ರಾಮದ ಬಾಲೇಶ್ವರ ಬಳಿ ಶಿಲಾಮಯವಾಗಿ ನಿರ್ಮಾಣಗೊಂಡಿರುವ ಭಗವಾನ್ ಶ್ರೀ ಆದಿನಾಥ ಸ್ವಾಮಿ ಬಸದಿಯಲ್ಲಿ ನೂತನ ಏಕಶಿಲಾ ಮಾನಸ್ತಂಭೋಪರಿ ಚತುರ್ಮುಖ 1008 ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ , ಪ್ರತಿಷ್ಠಾ ಮಹೋತ್ಸವದಲ್ಲಿ ಸೋಮವಾರ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು‌ ಮಾತನಾಡಿದರು.
ಅಧ್ಬುತವಾದ ಬಸದಿ ಇಲ್ಲಿ ನಿಮಾಣಗೊಂಡಿದೆ. ಇಂತಹ ಪವಿತ್ರ ಕಾರ್ಯಕ್ಕೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಆದಿನಾಥ ಸ್ವಾಮೀ ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ಶುಭ ಕೋರಿದ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದೇ ವಿಶೇಷ ವಿಮಾನದ ಮೂಲಕ ಆಗಮಿಸಿರುವುದಾಗಿ ತಿಳಿಸಿದರು.

ಮಾಜಿ ಸಚಿವ ರಮಾನಾಥ ರೈ ಅತಿಥಿ‌ಸ್ಥಾನದಿಂದ ಮಾತನಾಡಿ, ಜೈನ ಸಮುದಾಯ ಚಿಕ್ಕ ಸಮಾಜವಾದರೂ ಬಲಿಷ್ಠವಾಗಿದೆ. ವರ್ತಮಾನ ಕಾಲದಲ್ಲಿ ಅಹಿಂಸಾ ಪರಮೋ ಧರ್ಮದ ಸಿದ್ಧಾಂತ ಅಗತ್ಯವಿದ್ದು, ಭವಿಷ್ಯದಲ್ಲಿ ಅಹಿಂಸಾ ಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದರು.
ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ಅವರು ಆರ್ಶೀವಚನಗೈದರು.

ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ಸುರೇಂದ್ರಕುಮಾರ್ ಸಭಾಧ್ಯಕ್ಷತೆ ವಹಿಸಿದ್ದರು. ವಿ.ಪ.ಸದಸ್ಯ‌ರಾದ ಮಂಜುನಾಥ ಭಂಡಾರಿ,ಮಾಜಿ ಸಚಿವ ಅಭಯಚಂದ್ರ ಜೈನ್, ಜೀರ್ಣೋದ್ದಾರ , ಪಂಚಕಲ್ಯಾಣ ಮಹೋತ್ಸವ ಸಮಿತಿ‌ ಕಾರ್ಯದರ್ಶಿ ದೇವಕುಮಾರ್, ಭಾರತೀಯ ಜೈನ್ ಮಿಲನ್ ನ ಮಂಗಳೂರು ವಿಭಾಗದ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ,ಜಿಲ್ಲಾ ಯುವಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ವೇದಿಕೆಯಲ್ಲಿದ್ದರು.

ಪಂಚಕಲ್ಯಾಣ ಮಹೋತ್ಸವ ಸಮಿತಿ‌ ಅಧ್ಯಕ್ಷ ಸುದರ್ಶನ್ ಜೈನ್ ಪ್ರಸ್ತಾವನೆಗೈದು, ಸ್ವಾಗತಿಸಿದರು.ಪತ್ರಕರ್ತೆ ನಮಿತಾ ಜೈನ್ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.

ಆದಿನಾಥ ತೀರ್ಥಂಕರರ ಪ್ರತಿಷ್ಠೆ:
ಸೋಮವಾರ ಬಸದಿಯಲ್ಲಿ ೧೦೦೮ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಪ್ರತಿಷ್ಠೆ, ನಯನೋನ್ಮಿಲನ, ಕೇವಲಜ್ಞಾನ ಕಲ್ಯಾಣ ಮಹೋತ್ಸವ, ಮುಖವಸ್ತ್ರ ಉದ್ಘಾಟನೆ, ಮೇಗಿನನೆಲೆ ೧೦೦೮ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಿಂಬ ಪ್ರತಿಷ್ಠಾ ವಿಧಾನ, ಮುಖವಸ್ತ್ರ ಉದ್ಘಾಟನೆ, ೫೪ ಕಲಶ ಅಭಿಷೇಕ, ಮಾನಸ್ತಂಭೋಪರಿ ಶ್ರೀ ಆದಿನಾಥ ತೀರ್ಥಂಕರರ ಚತುರ್ಮುಖ ಬಿಂಬ ಪ್ರತಿಷ್ಠೆ, ೧೦೮ ಕಲಶಾಭಿಷೇಕ, ೧೨.೩೫ಕ್ಕೆ ಶಿಖರಾರೋಹಣ, ಶ್ರೀ ಬಲಿ ವಿಧಾನ, ಯಾಗಮಂಡಲಾರಾಧನೆ, ಮಧ್ಯಾಹ್ನ ಸಮವಸರಣ ಪೂಜೆ, ಶ್ರೀ ಸಿದ್ಧಚಕ್ರಯಂತ್ರಾರಾಧನೆ, ಭಗವಾನ್ ಶ್ರೀ ಆದಿನಾಥ ಸ್ವಾಮಿಗೆ ೧೦೦೮ ಕಲಶಮಹಾಭಿಷೇಕ ಮಹೋತ್ಸವ. ಸಂಜೆ ವೈಭವದ ಅಗ್ರೋದಕ ಮೆರವಣಿಗೆಯು ನಡೆಯಿತು. ಈ ಎಲ್ಲಾ ವೈಧಿಕ ವಿಧಿವಿಧಾನಕ್ಕೆ 108 ಅಮೋಘಕೀರ್ತಿ ಮುನಿ ಮಹಾರಾಜರು, ಅಮರಕೀರ್ತಿ ಮುನಿ ಮಹಾರಾಜರು,105 ಕುಲ್ಲಕ್ ನಿರ್ವಾಣ್ ಸಾಗರ ಮಹಾರಾಜರ ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮಿ ಗಳು ಸೇರಿಂದಂತೆ ಸಾವಿರಾರು ಮಂದಿ ಶ್ರಾವಕ, ಶ್ರಾವಕಿಯರು ಸಾಕ್ಷಿಗಳಾದರು.ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ಸಂಗಮ ಹಾಗೂ ನೃತ್ಯ‌ರೂಪಕ “ಸತ್ಯ ಮೇವ ಜಯತೆ ಹಾಗೂ ಜಿನಗಾನ ವಿಶಾರದೆ ಜಯಶ್ರೀ ಡಿ ಜೈನ್ ಹೊರನಾಡು ಇವರಿಂದ ಸಂಗೀತ ಪೂಜಾಷ್ಠಕ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು