News Karnataka Kannada
Friday, April 26 2024
ಮಂಗಳೂರು

ಡಾ. ಟಿ ಎನ್ ತುಳಪುಳೆ ಓರ್ವ ಶ್ರೇಷ್ಠ ಹೃದಯವಂತ ವೈದ್ಯ

Belthangady
Photo Credit :

ಬೆಳ್ತಂಗಡಿ: ಬೆಳ್ತಂಗಡಿ ಜೇಸೀ ಭವನದಲ್ಲಿ ಜ.17 ರಂದು ನಿಧನರಾದ ವೈದ್ಯ ವಿಶಾರದ, ಸಾಹಿತಿ, ಬಹುಭಾಷಾ ಪಂಡಿತ ಡಾ. ಟಿ ಎನ್ ತುಳಪುಳೆಯವರಿಗೆ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನುಡಿನಮನ ಸಲ್ಲಿಕೆಯ ಶ್ರದ್ಧಾಂಜಲಿ ಸಭೆ ನಡೆಯಿತು. ಮೊದಲಿಗೆ ಅಗಲಿದ ಚೇತನಕ್ಕೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್ ರವರು ಮಾತಾನಾಡುತ್ತಾ, ಡಾ. ಟಿ ಎನ್ ತುಳಪುಳೆಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರೂ. ಐವತ್ತು ಸಾವಿರದ ದತ್ತಿನಿಧಿ ಸ್ಥಾಪಿಸಿರುವುದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಬಹಳ ದೊಡ್ಡ ಕೊಡುಗೆ ಎಂದು ದಿವಂಗತರ ಸಾಧನೆಗಳನ್ನು ಉಲ್ಲೇಖಿಸಿ ನುಡಿನಮನ ಸಲ್ಲಿಸಿದರು.

ನಿವೃತ್ತ ಪ್ರಾಧ್ಯಾಪಕ , ಸಾಹಿತಿ ಪ್ರೊ. ಎನ್ ಜಿ ಪಟವರ್ಧನ್ ರವರು ಮಾತನಾಡುತ್ತಾ , ಡಾ.ತುಳಪುಳೆಯವರು ಲೇಖಕರು ಮತ್ತು ಜ್ಯೋತಿಷಿಗಳು. ಅವರ ಬರಹಗಳು ಆಳವಾದ ಅಧ್ಯಯನ ಮಾಡಿದ ವಿದ್ವತ್ಪೂರ್ಣ ಬರಹಗಳು. ಅವರ ವಾಂಛಾ ಕಲ್ಪತರು ಒಂದು ಶ್ರೇಷ್ಠ ಕೃತಿ. ಭಾಗವತರಾಗಿ, ಹರಿದಾಸರಾಗಿ ಪ್ರಸಿದ್ಧರಾಗಿದ್ದು, ವೈಯಕ್ತಿಕವಾಗಿ ಮನೆಯಲ್ಲೇ ಬಹಳ ದೊಡ್ಡ ಗ್ರಂಥ ಭಂಡಾರ ಹೊಂದಿದ್ದ ತುಳಪುಳೆಯವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಡಾ. ತುಳಪುಳೆಯವರು ಬೆಳ್ತಂಗಡಿಯ ಜ್ಞಾನದ, ಸುಜ್ಞಾನದ ಬೆಳಕು. ಇವರದು ಆದರ್ಶ ಮತ್ತು ಸಾಧನೆಯ ಬದುಕು. ಇವತ್ತು ಬುದ್ಧಿವಂತರು, ವಿದ್ಯಾವಂತರು, ಚಿಂತಕರು, ವಿಚಾರವಂತರು ಇದ್ದಾರೆ. ಆದರೆ ಹೃದಯವಂತರು ಬೇಕಾಗಿದ್ದಾರೆ. ಇಂತಹ ಕಾಲಮಾನದಲ್ಲಿ ಬದುಕಿದ ತುಳಪುಳೆಯವರು ಓರ್ವ ಶ್ರೇಷ್ಠ ಹೃದಯವಂತ ಸರಸ್ವತಿಯ ವರಪುತ್ರರು. ಇವರು ದೇಹ, ಮನಸ್ಸು ಮತ್ತು ಮಾತುಗಳ ಶೌಚವನ್ನು ಕಾಪಾಡಿಕೊಂಡು ಬದುಕಿದ ಸರಳ,ಸಾತ್ವಿಕ ಮತ್ತು ಸಚ್ಚಾರಿತ್ರ್ಯವಂತರು. ವೈದ್ಯರಾಗಿ ವೃತ್ತಿ ಧರ್ಮ ಪಾಲನೆ ಮಾಡಿ ವೈದ್ಯ ವೃತ್ತಿಗೆ ನ್ಯಾಯ ನೀಡಿದ ಅನುಕರಣೀಯರು ಎಂದು ನಿವೃತ್ತ ಪ್ರಾಂಶುಪಾಲರಾದ ಬೆಳ್ತಂಗಡಿಯ ಕೃಷ್ಣಪ್ಪ ಪೂಜಾರಿಯವರು ತನ್ನ ನುಡಿನಮನ ಮಾತುಗಳಲ್ಲಿ ಡಾ. ತುಳಪುಳೆಯವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದರು.

ಸಭೆಯಲ್ಲಿ ಸಂಪಾದಕ ದೇವಿಪ್ರಸಾದ್ , ನಿವೃತ್ತ ಪ್ರಾಚಾರ್ಯರಾದ ಗಣಪತಿ ಭಟ್ ಕುಳಮರ್ವ, ವಾಣಿ ಕಾಲೇಜಿನ ಪ್ರಾಚಾರ್ಯರಾದ ಡಿ. ಯದುಪತಿ ಗೌಡ, ನಿವೃತ್ತ ಶಿಕ್ಷಕರಾದ ಗೋವಿಂದ ದಾಮ್ಲೆ, ಮೃತರ ಮನೆಯವರಾದ ಡಾ. ಎನ್ ಎಂ ತುಳಪುಳೆ ಮೊದಲಾದವರು ನುಡಿನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರು ಮತ್ತು ಬೆಳ್ತಂಗಡಿ ಮಂಜುಶ್ರೀ ಜೆಸಿಐನ ಕಾರ್ಯದರ್ಶಿಗಳೂ ಆದ ಜೇಸೀ ಶಂಕರ್ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಬೆಳಾಲು ಶ್ರೀ ಧ.ಮ. ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಚೊಕ್ಕಾಡಿಯವರು ಕಾರ್ಯಕ್ರಮ ಸಂಯೋಜಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು