News Karnataka Kannada
Friday, April 26 2024
ಮಂಗಳೂರು

ಧರ್ಮಸ್ಥಳದ ನೀರಿನ ಘಟಕ ಸಂಪೂರ್ಣ ಸೋಲಾರ್‌ನಿಂದಲೇ ನಡೆಸುವ ಹೊಸ ಪ್ರಯತ್ನ

New Project 2021 09 28t134941.288
Photo Credit :

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆಯ ಮೂಲಕ ನಡೆಸಲ್ಪಡುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಂಪೂರ್ಣ ಸೆಲ್ಕೋ ಸೋಲಾರ್‌ನಿಂದಲೇ ನಡೆಸುವ ಹೊಸ ಪ್ರಯತ್ನಕ್ಕೆ ಹೆಜ್ಜೆ ಇಡಲಾಗಿದ್ದು, ಈ ವಿನೂತನ ಮಾದರಿ ಕಾರ್ಯಕ್ರಮಕ್ಕೆ ಸೋಮವಾರದದಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ | ಡಿ . ವೀರೇಂದ್ರ ಹೆಗ್ಗಡೆಯವರ ಸಮಕ್ಷಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ | ಎಲ್ . ಹೆಚ್ . ಮಂಜುನಾಥ್ ರವರು ಹಾಗೂ Social Alptha & Director Sustain Plusನ ಸಿ.ಇ.ಓ. ಮನೋಜ್ ಕುಮಾರ್ ಮತ್ತು ಸೆಲ್ಕೋ ಫೌಂಡೇಶನ್ ಅಧ್ಯಕ್ಷ ಹರೀಶ್ ಹಂದೆ ಒಪ್ಪಂದ ಪತ್ರಗಳ ವಿನಿಮಯ ಮಾಡಿಕೊಂಡರು.

ಧರ್ಮಸ್ಥಳದ ಬೀಡಿನಲ್ಲಿ ಈ ಕಾರ್ಯಕ್ರಮ ನಡೆಯಿತು.

ಯೋಜನೆಯು ಗುರುತಿಸಿರುವ ಸೋಲಾರ್ ಅಳವಡಿಸಬಹುದಾದ 40 ಘಟಕಗಳಲ್ಲಿ ಪ್ರತೀ ತಿಂಗಳು ಸುಮಾರು ರೂ 2 ಲಕ್ಷ ಮೊತ್ತದ ವಿದ್ಯುತ್ ಬಿಲ್ ಬರುತ್ತಿದ್ದು , ವಾರ್ಷಿಕ ಸುಮಾರು ರೂ . 24 ಲಕ್ಷ ಬರುತ್ತಿದೆ . ಉಚಿತ ಸೋಲಾರ್ ಅಳವಡಿಸಿರುವುದರಿಂದ ಮೊದಲನೇ ವರ್ಷವೇ ವಿದ್ಯುತ್ ಬಿಲ್ 24 ಲಕ್ಷ ಉಳಿತಾಯವಾಗಲಿದ್ದು , 2 ನೇ ವರ್ಷದಿಂದ ವಾರ್ಷಿಕ ಕಳೆದು ಸುಮಾರು ನಿರ್ವಹಣಾ ವೆಚ್ಚ ( AMC ) ರೂ . 21 ಲಕ್ಷ ಮೊತ್ತ ಉಳಿತಾಯವಾಗಲಿದೆ. ಇದಲ್ಲದೇ ಸೋಲಾರ್ ಅಳವಡಿಸುವುದರಿಂದ ಪದೇ ಪದೇ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಘಟಕಗಳ ಕಾಯಿನ್ ಬಾಕ್ಸ್ , ಡಿಸ್ಪೆನ್ಸ್‌ ಹಾಗೂ ಒಟ್ಟು ಘಟಕಗಳನ್ನು 24 ಗಂಟೆಯೂ ಚಲಾವಣೆಯಲ್ಲಿಟ್ಟು ತಡೆರಹಿತವಾಗಿ ಶುದ್ಧನೀರು ವಿತರಿಸಲು ಸಹಾಯಕವಾಗಲಿದೆ ಹಾಗೂ ಜನರಿಗೆ ನಿರಂತರ ಸೇವೆ ನೀಡಲು ಅನುಕೂಲವಾಗಲಿದೆ ಎಂದು ಡಾ. ಹೆಗ್ಗಡೆಯವರು ವಿವರಿಸಿದರು.

ಡಾ | ಡಿ . ವೀರೇಂದ್ರ ಹೆಗ್ಗಡೆಯವರ ಆಶಯದಂತೆ 2009 ರಿಂದ ಯೋಜನೆಯ ವತಿಯಿಂದ ಶುದ್ಧಗಂಗಾ ಎನ್ನುವ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಯಿತು. ಇದರಂತೆ ರಾಜ್ಯದಾದ್ಯಂತ ಇದುವರೆಗೆ 321 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಬಡವರಿಗೂ ಶುದ್ಧನೀರು ತಲುಪಬೇಕೆನ್ನುವ ಪೂಜ್ಯರ ಅಪೇಕ್ಷೆಯಂತೆ ಅತ್ಯಂತ ಕಡಿಮೆ ದರದಲ್ಲಿ ಶುದ್ಧನೀರನ್ನು ಈ ಘಟಕಗಳ ಮೂಲಕ ನೀಡಲಾಗುತ್ತಿದೆ. ಪ್ರಸ್ತುತ ಸುಮಾರು 81,000 ಜನ ಬಳಕೆದಾರರು ಪ್ರತಿ ನಿತ್ಯ 16,20,000 ಲೀಟರ್ ಶುದ್ಧನೀರನ್ನು ಈ ಘಟಕಗಳ ಮೂಲಕ ಪಡೆಯುತ್ತಿದ್ದಾರೆ. ಕಡಿಮೆ ಮೊತ್ತದಲ್ಲಿ ನಿರಂತರ ಹಾಗೂ ಗುಣಮಟ್ಟದ ಸೇವೆಯನ್ನು ನೀಡುತ್ತಿರುವ ಈ ಘಟಕಗಳು ಸ್ಥಳೀಯಾಡಳಿತ ಹಾಗೂ ಜನ ಸಾಮಾನ್ಯರಿಂದ ಮೆಚ್ಚುಗೆಯನ್ನು ಗಳಿಸಿವೆ. ಇದಕ್ಕಾಗಿ ಹಲವಾರು ಕಡೆ ಶಾಸಕರು, ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮ ಹಾಗೂ ಸ್ಥಳೀಯಾಡಳಿತದ ಸಹಯೋಗವೂ ಸಿಕ್ಕಿರುತ್ತದೆ. ಶುದ್ಧಗಂಗಾ ಘಟಕಗಳ ನಿರಂತರ ನಿರ್ವಹಣೆಗಾಗಿ ಯೋಜನೆಯ ಸುಮಾರು 25 ಮೇಲ್ವಿಚಾರಕರು ಹಾಗೂ 338 ಪ್ರೇರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಘಟಕಗಳ ಸುಸೂತ್ರ ನಿರ್ವಹಣೆಗಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯಲ್ಲಿ ಅನುಭವವಿರುವ ಅಕ್ವಾಸಫಿ ಹಾಗೂ ಅಕ್ವಾಶೈನ್ ಕಂಪೆನಿಗಳೊಂದಿಗೆ ನಿರ್ವಹಣಾ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ . ಇದರಿಂದ ಘಟಕಗಳ ನಿರ್ವಹಣೆ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ . ಘಟಕಗಳ ನಿರ್ವಹಣೆಯಲ್ಲಿ ಕಾರ್ಯಕರ್ತರ ಸಂಬಳ , ಬಿಡಿಭಾಗಗಳು , ವಿದ್ಯುತ್ ಬಿಲ್ ಹಾಗೂ ವಾರ್ಷಿಕ ನಿರ್ವಹಣಾ ವೆಚ್ಚ (AMC) ಪ್ರಮುಖ ಖರ್ಚಿನ ಭಾಗಗಳಾಗಿರುತ್ತವೆ. ಹೀಗೆ ಪ್ರತೀ ವರ್ಷ ಒಟ್ಟು ಸುಮಾರು ರೂ . 6.00 ಕೋಟಿ ಖರ್ಚು ತಗಲುತ್ತಿದೆ. ಈ ಪೈಕಿ ಪ್ರತೀ ವರ್ಷ ಘಟಕಗಳ ವಿದ್ಯುತ್ ವೆಚ್ಚವೇ ರೂ. 1.14 ಕೋಟಿ ರೂ. ಬರುತ್ತಿದೆ . ರಾಜ್ಯದಾದ್ಯಂತ ಕಡುಬಡವರಿಗೂ ಅತೀ ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿರುವ ಯೋಜನೆಯ ಈ ಮಹತ್ವಾಕಾಂಕ್ಷೆ ಕಾರ್ಯಕ್ರಮವನ್ನು ಗಮನಿಸಿ ಸೆಲ್ಕೋ ಪೌಂಡೇಶನ್ ಇದೀಗ ಆಯ್ದ 40 ಶುದ್ಧಗಂಗಾ ಘಟಕಗಳಿಗೆ ಉಚಿತ ಸೋಲಾರ್ ಇನ್ವರ್ಟ‌್ರಗಳನ್ನು ಅಳವಡಿಸಲು ಇಚ್ಚಿಸಿರುತ್ತಾರೆ. ಪ್ರತೀ ಘಟಕಕ್ಕೆ ಸುಮಾರು ಲಕ್ಷ ವೆಚ್ಚವಾಗುವ ಯೋಜನೆಯಂತೆ ಘಟಕಗಳಿಗೆ ರೂ. 2.40 ಕೋಟಿ ವೆಚ್ಚ ತಗುಲಲಿದೆ. ಈ ವೆಚ್ಚವನ್ನು ಪೂರ್ತಿಯಾಗಿ ಸೆಲ್ಕೋ ಫೌಂಡೇಶನ್ ಭರಿಸಲಿದೆಯಲ್ಲದೇ ಮುಂದಿನ ಒಂದು ವರ್ಷದವರೆಗೆ ನಿರ್ವಹಣೆಯನ್ನು ಉಚಿತವಾಗಿ ಮಾಡಲಿದ್ದಾರೆ ಎಂದು ಶ್ರೀ ಕ್ಷೇತ್ರ ಧ.ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಹೆಚ್. ಮಂಜುನಾಥ ವಿವರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು