News Karnataka Kannada
Saturday, April 27 2024
ಮಂಗಳೂರು

ಬಂಟ್ವಾಳ: ನಾಗಮಜ್ಜಿಯ ಮನೆ ನಿರ್ಮಾಣದ ಕನಸು ಸಾಕರ

Karwar: Make community health officers permanent as per central government guidelines
Photo Credit :
ಬಂಟ್ವಾಳ: ಇಬ್ಬರು ಪತ್ರಕರ್ತರಿಂದ ಆರಂಭಗೊಂಡ ಮನೆ ನಿರ್ಮಾಣ ಕಾರ್ಯ, ದಾನಿಗಳ ನೆರವು, ಸಂಘಟನೆಗಳ ಸಹಕಾರದಿಂದಾಗಿ ಇಂದು ಸಂಪೂರ್ಣಗೊಂಡು ಕುಸಿಯುವ ಹಂತದ ಮನೆಯಲ್ಲಿ ವಾಸಿಸುತ್ತಿದ್ದ ಬಡಕುಟುಂಬಕ್ಕೆ ಆಸರೆ ನೀಡಿದೆ. ಕಳ್ಳಿಗೆ ಗ್ರಾಮದ ಜಾರಂದಗುಡ್ಡೆಯ ನಾಗಮಜ್ಜಿಯ ಮನೆ ನಿರ್ಮಾಣದ ಕನಸು ಇದೀಗ ಸಾಕರಗೊಂಡು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪತ್ರಕರ್ತರು ವರದಿಗಾರಿಕೆಗೆ ಮಾತ್ರವಲ್ಲದೆ ಸಮಾಜದಲ್ಲಿ  ನೊಂದವರ ನೋವಿಗೂ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ.
ನಾಗಮಜ್ಜಿಗೆ ಮನೆ ಕಟ್ಟೋಣ ಅಭಿಯಾನ: 
ಯಾವುದೇ ಆರ್ಥಿಕ ಬಂಡವಾಳವಿಲ್ಲದೆ ಶೂನ್ಯ ಮೊತ್ತದಿಂದ ಆರಂಭಗೊಂಡ ಮನೆ ನಿರ್ಮಾಣ ಕಾರ್ಯಕ್ಕೆ ಪತ್ರಕರ್ತರಾದ ಸಂದೀಪ್ ಸಾಲ್ಯಾನ್ ಹಾಗೂ ಮೋಹನ್ ದಾಸ್ ಮರಕಡ ಚಾಲನೆ ನೀಡಿದ್ದರು. ಅಭಿಯಾನದ ಅಂಗವಾಗಿ ಮನೆಗೊಂದು ಕಲ್ಲು ನೀಡೋಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಯಿತು. ಅಪಾರ ಸ್ಪಂದನೆ ಸಿಕ್ಕಿ ಮನೆಗೆ ಬೇಕಾಗುವ ಕಲ್ಲು ಸಂಗ್ರಹವಾಯಿತು. ಇದೇ ಸಂದರ್ಭ ಜೆಸಿಐ ಬಂಟ್ವಾಳ ಸಂಸ್ಥೆ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಿ ಸದಸ್ಯರ ಸಹಕಾರದಿಂದ ಸಿಮೆಂಟ್ ಸಂಗ್ರಹಣೆಯೂ ಸಾಧ್ಯವಾಯಿತು. ದಾನಿಗಳು ಮರಳು, ಸಿಮೆಂಟ್ ಖರೀದಿಗೆ ನೆರವು ಆರ್ಥಿಕ ನೆರವು ನೀಡಿದರು. ವಿವಿಧ ಸಂಘಟನೆಗಳ ಸಹಕಾರದಿಂದ ಶ್ರಮದಾನದ ಕೆಲಸವೂ ನಡೆಯಿತು.
ಈ ವೇಳೆ ಅಶ್ವಿನ್ ಮುಂಡಾಜೆ ಎನ್ನುವ ಸ್ಥಳೀಯ ಯುವ ಗುತ್ತಿಗೆದಾರರು ಮನೆ ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಿದ ಹಿನ್ನಲೆಯಲ್ಲಿ ಕೇವಲ 6 ತಿಂಗಳಿನಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.  ಪಂಚಾಂಗ ಹಾಗೂ ಗೋಡೆ ಕೆಲಸವನ್ನು ಅಶ್ವಿನ್ ಅವರು ತಮ್ಮ ಕಾರ್ಮಿಕರ ಮೂಲಕ ಉಚಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಉಳಿದ ಕೆಲಸವನ್ನು ರಿಯಾಯಿತಿ ದರದಲ್ಲಿ ನಿರ್ವಹಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಹಕಾರವೂ ಮನೆ ನಿರ್ಮಾಣ ಕಾರ್ಯಕ್ಕೆ ಸಿಕ್ಕಿದೆ. ಸ್ವತಃ ಮನೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಯೋಜನೆಯ ಅಧಿಕಾರಿಗಳು ತ್ವರಿತವಾಗಿ ಆರ್ಥಿಕ ನೆರವು ಹಸ್ತಾಂತರಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗೆಡೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಜಿ ಸಚಿವ ಬಿ.ರಮನಾಥ ರೈ ಯವರು ತನ್ನ ಹುಟ್ಟು ಹಬ್ಬದ ಪ್ರಯುಕ್ತ ಸಿಮೆಂಟ್ ಹಾಗೂ ಆರ್ಥಿಕ ನೆರವನ್ನು ನೀಡಿದ್ದಾರೆ. ಇದೇ ರೀತಿ ಹಲವಾರು ದಾನಿಗಳು, ಸಂಘ ಸಂಸ್ಥೆಗಳು ಕೊಡುಗೆಗಳನ್ನು ನೀಡಿದೆ.
ಡಿ.26ಕ್ಕೆ ಗೃಹಪ್ರವೇಶ:
ಡಿ.26 ರಂದು ಭಾನುವಾರ ಬೆಳಿಗ್ಗೆ 8.05 ರ ಶುಭ ಮುಹೂರ್ತದಲ್ಲಿ ಗೃಹಪ್ರವೇಶ ನಡೆಯಲಿದೆ.‌ ಮಧ್ಯಾಹ್ನ 12 ಗಂಟೆಗೆ ಕೃತಜ್ಞತಾ ಸಭೆ ನಡೆಯಲಿದೆ. ಗಣ್ಯರು ಸಹಿತ ದಾನಿಗಳು ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಳೆದ ಜೂ.11ಕ್ಕೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು ಕೇವಲ 6 ತಿಂಗಳಿನಲ್ಲಿ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು