News Karnataka Kannada
Friday, April 26 2024
ಮಂಗಳೂರು

ಬಂಟ್ವಾಳ :ಬ್ರಹ್ಮಕಲಶದ ಹೊಸ್ತಿಲಲ್ಲಿರುವ ಎಲ್ಲಾ ಕ್ಷೇತ್ರಗಳ ಸಂಪರ್ಕ ರಸ್ತೆಗಳನ್ನು ಆದ್ಯತೆಯ ನೆಲೆಯಲ್ಲಿ ಅಭಿವೃದ್ಧಿ

Rajesh Naik.
Photo Credit : News Kannada
ಬಂಟ್ವಾಳ : ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 35ದೇವಸ್ಥಾನಗಳು ಬ್ರಹ್ಮಕಲಶದ ಹೊಸ್ತಿಲಲ್ಲಿದ್ದು, ಅಂತಹ ಎಲ್ಲಾ ಕ್ಷೇತ್ರಗಳ ಸಂಪರ್ಕ ರಸ್ತೆಗಳನ್ನು ಆದ್ಯತೆಯ ನೆಲೆಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಕ್ಷೇತ್ರದ ಜನರ 9 ವರ್ಷಗಳ  ಪ್ರೀತಿ, ವಿಶ್ವಾಸದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.ಸಜೀಪಮುನ್ನೂರು ಗ್ರಾಮದ 5 ರಸ್ತೆಗಳಿಗೆ ಒಟ್ಟು 1.65 ಕೋ.ರೂ. ವೆಚ್ಚದಲ್ಲಿ ನಡೆದ ಕಾಂಕ್ರೀಟ್ ಕಾಮಗಾರಿಗಳನ್ನು ಉದ್ಘಾಟಿಸಿ ಬಳಿಕ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಗುಳಿಯ ದೇವಸ್ಥಾನ ಹಾಗೂ ಸ್ಥಳೀಯ ಬಿಜೆಪಿ ಸಮಿತಿಯ ವತಿಯಿಂದ ಶಾಸಕರು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಗುತ್ತಿಗೆದಾರ ಧೀರಜ್ ನಾಯ್ಕ್ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ರವೀಂದ್ರ ಕಂಬಳಿ, ಸಜೀಪಮಾಗಣೆಯ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಮುಂಬಯಿನ ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಸಂಕೇಶ, ಗ್ರಾ.ಪಂ.ಸದಸ್ಯರಾದ ನವೀನ್ ಅಂಚನ್ ಶಾಂತಿನಗರ, ಸುಮತಿ ಎಸ್.ಖಂಡಿಗ, ಸುಂದರ, ರಾಜೇಶ್ ಮರ್ತಾಜೆ, ಅನಿತಾ, ಗಣೇಶ್ ಕುಲಾಲ್, ಸಂದೀಪ್ ಎಚ್, ಚಂದ್ರಕಲಾ, ದಯಾಲಕ್ಷ್ಮೀ, ಸರೋಜಿನಿ, ಮುಗುಳಿಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ತಾ.ಪಂ.ಮಾಜಿ ಅಧ್ಯಕ್ಷ ಯಶವಂತ ದೇರಾಜೆಗುತ್ತು, ಗುತ್ತಿಗೆದಾರ ಧೀರಜ್ ನಾಯ್ಕ್, ಪ್ರಮುಖರಾದ ಚರಣ್ ಜುಮಾದಿಗುಡ್ಡೆ, ಎಂ.ಕೃಷ್ಣಶ್ಯಾಮ್, ಅರವಿಂದ ಭಟ್ ಆಲಾಡಿ, ರಮಾನಾಥ ರಾಯಿ, ಸುದರ್ಶನ್ ಬಜ, ರೂಪೇಶ್ ಆಚಾರ್ಯ, ಯಶವಂತ ನಾಯ್ಕ್ ನಗ್ರಿ, ವಿನೋದರಾಜ್ ಮುಗುಳಿಯ, ಸೋಮಶೇಖರ್ ಆಲಾಡಿ, ಹರಿಪ್ರಸಾದ್, ದೇವಪ್ಪ, ಇದಿನಬ್ಬ ನಂದಾವರ, ಇಸ್ಮಾಯಿಲ್, ಸುಷ್ಮಾ ಚರಣ್, ಸೀತಾರಾಮ ಅಗೋಳಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ಮುಂಬಯಿ ಪನ್ವೇಲ್ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ದಳಂದಿಲ ಪ್ರಸ್ತಾವನೆಗೈದರು. ಸಜೀಪಮುನ್ನೂರು ಗ್ರಾ.ಪಂ.ಸದಸ್ಯ  ಪ್ರವೀಣ್ ಗಟ್ಟಿ ಸ್ವಾಗತಿಸಿದರು. ದಿನಕರ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು