ಮಂಗಳೂರು : ತಲಪಾಡಿ ಚೆಕ್ ಪೋಸ್ಟ್ ಕಡೆಯಿಂದ ತಂಗಿಯೊಂದಿಗೆ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಸ್ಕೂಟರ್ ಸವಾರನೊಬ್ಬ ಕೈ ಹಿಡಿದೆಳೆದು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಸಿಸಿಟಿವಿ ಆಧಾರದಲ್ಲಿ ಪೊಲೀಸರು ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದಾರೆ.
ತಲಪಾಡಿ ಅಲಂಕಾರ ಗುಡ್ಡೆಯಿಂದ ಸಂತ್ರಸ್ತೆ 14ವರ್ಷದ ಬಾಲಕಿ ತನ್ನ ತಂಗಿಯೊಂದಿಗೆ ಇಂದು ಬೆಳಿಗ್ಗೆ ತಲಪಾಡಿ ಚೆಕ್ ಪೋಸ್ಟ್ ದಾರಿಯಾಗಿ ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಸ್ಕೂಟರ್ ನಲ್ಲಿ ಬಂದಿದ್ದ ಬರ್ಮುಡಾ ಧರಿಸಿದ್ದ ಯುವಕನೊಬ್ಬ ಬಾಲಕಿಯ ಕೈಯನ್ನು ಎಳೆದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ .
ಈ ವೇಳೆ ಅಕ್ಕ ತಂಗಿ ವಿರೋಧ ವ್ಯಕ್ತ ಪಡಿಸಿದಾಗ ಅಲ್ಲಿಂದ ಸ್ಕೂಟರ್ ಸಮೇತ ಪರಾರಿಯಾಗಿದ್ದಾನೆ .ಘಟನೆಯಿಂದ ಹೆದರಿದ ಬಾಲಕಿ ಸ್ಥಳೀಯರಲ್ಲಿ ವಿಚಾರ ತಿಳಿಸಿದ್ದಾಳೆ .ರಸ್ತೆಯಲ್ಲಿದ್ದ ಸಿಸಿಟಿವಿ ಫೂಟೇಜ್ ನಲ್ಲಿ ಆರೋಪಿಯ ಸ್ಕೂಟರಲ್ಲಿ ತೆರಳುತ್ತಿರುವ ದೃಶ್ಯ ದಾಖಲಾಗಿದೆ ಉಳ್ಳಾಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸಂದೀಪ್ ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಆರೋಪಿಯ ಶೋಧ ಕಾರ್ಯ ನಡೆಸುತ್ತಿದ್ದಾರೆ .