ಮಂಗಳೂರು : ಸರಕಾರಿ ಬಸ್ ನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ವಾಜಿದ್ ಎ ಜಮಖಾನಿ ಎನ್ನುವವನಾಗಿದ್ದು, ಹಾವೇರಿ ಜಿಲ್ಲೆಯವನೆಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಸುಳ್ಯ ದಿಂದ ಮಂಗಳೂರಿಗೆ ಸರಕಾರಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಸೀಟಿನ ಪಕ್ಕದಲ್ಲಿ ಕುಳಿತ ವಾಜಿದ್ ಅಸಭ್ಯವಾಗಿ ವರ್ತಿಸಿ ಮಾನಹಾನಿ ಮಾಡಿ ಕಿರುಕುಳ ನೀಡಿದ್ದಾನೆ ಎಂದು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.