News Karnataka Kannada
Tuesday, April 23 2024
Cricket
ಮಂಗಳೂರು

ವಗ್ಗ ವಲಯ ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Vagga
Photo Credit :

ಬಂಟ್ವಾಳ :  ಜೀವನಮಟ್ಟ ಸುಧಾರಣೆಯ‌ ಜೊತೆಗೆ ಸಾಮಾಜಿಕ ಪರಿವರ್ತನೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉದ್ಧೇಶ ವಾಗಿದ್ದು, ಸ್ವಸಹಾಯ ಗುಂಪುಗಳ  ಮೂಲಕ ಇದು ಸಾಕಾರಗೊಳ್ಳುತ್ತಿದೆ ಎಂದು  ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬಂಟ್ವಾಳ ತಾಲೂಕು ಇದರ ವತಿಯಿಂದ ವಗ್ಗ ವಲಯ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇದರ ಸಹಕಾರದಲ್ಲಿ ಮಂಗಳವಾರ ಪೂಂಜಾಲಕಟ್ಟೆಬಂಗ್ಲೆ ಮೈದಾನದಲ್ಲಿ ನಡೆದ  ವಗ್ಗ ವಲಯ ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಾಧನಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯಲ್ಲಿ ಸ್ವಯಂ ಪರಿವರ್ತನೆ ಆಗಬೇಕು ಎನ್ನುವ ನಿಟ್ಟಿನಲ್ಲಿ  ಯೋಜನೆ ನಿರಂತರವಾಗಿ ಕಾಯನಿರ್ವಹಿಸುತ್ತಿದ್ದು, ರಾಜ್ಯಾದ್ಯಂತ 48 ಲಕ್ಷ ಸದಸ್ಯರು ಸ್ವಸಹಾಯ ಗುಂಪುಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ  ನಡೆಯುವ ಅನ್ನದಾನ, ವಿದ್ಯಾದಾನ, ಔಷಧ ದಾನ,‌ ಅಭಯದಾನದಂತಹಾ ನಾಲ್ಕು‌ಬಗೆಯ ದಾನಗಳು ಜನರ ಜೀವನಮಟ್ಟ ಸುಧಾರಣೆಗೆ ನೆರವಾಗುತ್ತಿದೆ ಎಂದರು.

ಪ್ರಜೆಗಳು ಎಷ್ಟು ಜವಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೋ, ಆಗ ಆಡಳಿತ ವ್ಯವಸ್ಥೆಯೂ ಸುಧಾರಣೆಯಾಗುತ್ತದೆ ಇದನ್ನು ಮನನ ಮಾಡಿಕೊಂಡು‌ ಜೀವನದಲ್ಲಿ ಯಶಸ್ವಿಯಾಗುವಂತೆ ಮಹಿಳೆಯರಿಗೂ ಕರೆ ನೀಡಿದರು. ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿಯವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದೇಶದಾದ್ಯಂತ ವಿಸ್ತಾರ ಗೊಳ್ಳಲಿ ಎಂದರು.

ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿ, ಧರ್ಮಸ್ಥಳ‌ಯೋಜನೆಯ ಸ್ವಸಹಾಯ ಗುಂಪುಗಳು ಅತ್ಯಂತ ‌ಪಾರದರ್ಶಕ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ‌ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಮಾತನಾಡಿ, ಅಂಗನವಾಡಿ ಕೇಂದ್ರಗಳ ಸ್ತ್ರೀ ಶಕ್ತಿ ಗುಂಪು ಯೋಜನೆಗೆ ಧರ್ಮಸ್ಥಳ ಯೋಜನೆಯ  ಸ್ವಸಹಾಯ ಗುಂಪುಗಳೇ ಪ್ರೇರಣೆ ಎಂದರು.

ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಲ್. ಎಚ್.‌ ಮಂಜುನಾಥ್‌ ಮಾತನಾಡಿ,  ರಾಜ್ಯದಲ್ಲಿ 39 ಸಾವಿರ ಮಂದಿ ಕೋರೋನಾದಿಂದ  ಮೃತರಾಗಿದ್ದು, ಈ ಕುಟುಂಬಗಳಿಗೆ 229 ಕೋಟಿ ರೂ ವಿಮೆಯ ನೆರವು ನೀಡಲಾಗಿದ್ದು, ಬಂಟ್ವಾಳದಲ್ಲಿ  ಯೋಜನೆಯ ಚಟುವಟಿಕೆಗಳು ಮಾದರಿಯಾಗಿ ನಡೆಯುತ್ತಿದೆ ಎಂದರು.

ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ  ಹರ್ಷಿಣಿ ಪುಷ್ಪಾನಂದ  ಶುಭಹಾರೈಸಿದರು. ವಗ್ಗ ವಲಯದ ನಿರ್ಗಮಿತ ಅಧ್ಯಕ್ಷ ಸುಂದರ ಪೂಜಾರಿ , ನೂತನ ಅಧ್ಯಕ್ಷ ಚಿದಾನಂದ ರೈ ಕಕ್ಯ ಮಾತನಾಡಿದರು.

ಮಾಜಿ ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಎಸ್ ಬಿ ಐ ಮಂಗಳೂರು ವಲಯ ಜನರಲ್ ಮ್ಯಾನೇಜರ್  ರಾಜೇಶ್ ಗುಪ್ತ, ಮಾಜಿ ಜಿ.ಪಂ.ಸದಸ್ಯ ಪದ್ಮಶೇಖರ್ ಜೈನ್,ವಗ್ಗ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಹರೀಂದ್ರ ಪೈ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ  ಎ.ಸಿ.ಭಂಡಾರಿ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ  ರೊನಾಲ್ಡ್ ಡಿಸೋಜ, ಪ್ರಮುಖರಾದ ಬಾಲಕೃಷ್ಣ ಆಳ್ವ,  ಮಾಧವ ಒಳವೂರು, ಮಾಧವ ಪೂಜಾರಿ, ಚಿದಾನಂದ ರೈ ಕಕ್ಯ, ಮಾಣಿಕ್ಯರಾಜ್ ಜೈನ್, ಮಾಯಿಲಪ್ಪ ಸಾಲಿಯಾನ್ , ಪ್ರಕಾಶ್ ಕಾರಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ.  ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ‌ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು