News Karnataka Kannada
Friday, April 19 2024
Cricket
ಮಂಗಳೂರು

ವ್ಯವಸ್ಥಿತವಾಗಿ ಸಂಪನ್ನಗೊಂಡ ಶ್ರಮಿಕ ಉದ್ಯೋಗ ಮೇಳ

Belthangady (1)
Photo Credit :

ಬೆಳ್ತಂಗಡಿ : ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಶ್ರಮಿಕ ಸೇವಾ ಟ್ರಸ್ಟ್ ವತಿಯಿಂದ, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಾರ್ಗದರ್ಶನದಲ್ಲಿ ಉಜಿರೆಯ ಎಸ್ ಡಿಎಂ ಕಾಲೇಜು ಹಾಗೂ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಸಹಯೋಗದಲ್ಲಿ 2 ದಿನದ ಶ್ರಮಿಕ ಬೃಹತ್ ಉದ್ಯೋಗ ಮೇಳ ನಡೆಯಿತು.

2 ದಿನದ ಉದ್ಯೋಗ ಮೇಳದಲ್ಲಿ 87 ಕಂಪೆನಿಗಳು ಭಾಗವಹಿಸಿದ್ದು, ಅವುಗಳಲ್ಲಿ 64 ಕಂಪೆನಿಗಳು 963 ವಿದ್ಯಾರ್ಥಿಗಳನ್ನು ಶಾರ್ಟ್ ಲಿಸ್ಟ್ ಗೊಳಿಸಿ, 301 ವಿದ್ಯಾರ್ಥಿಗಳನ್ನು ವಿವಿಧ ಕಂಪೆನಿಗಳಿಗೆ ಆಯ್ಕೆಗೊಳಿಸಲಾಗಿದೆ.

ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಮುಂದಿನ ಸಂದರ್ಶನಕ್ಕೆ ಅಗತ್ಯವಿರುವ ಸಹಕಾರವನ್ನು ಶ್ರಮಿಕ ಟ್ರಸ್ಟ್ ಮೂಲಕ ನೀಡಲಾಗುವುದೆಂದು ಶಾಸಕ ಹರೀಶ್ ಪೂಂಜ ಹೇಳಿದರು.

ಎಸ್ ಡಿ ಎಂ ಕಾಲೇಜಿನಲ್ಲಿ ನಡೆದ ಮೊದಲ ದಿನದ ಆನ್ಲೈನ್ ಇಂಟರ್ವ್ಯೂನಲ್ಲಿ ಅಮೆಜಾನ್, ಟೊಯಟೊ ಕಿರ್ಲಾಸ್ಕರ್, ಒರಾಕಲ್ ನಂತಹ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಿದ್ದವು. ಬೃಹತ್ ಉದ್ಯೋಗ ಮೇಳದಲ್ಲಿ 1269 ಉದ್ಯೋಗಾಂಕ್ಷಿಗಳು ನೋಂದಾವಣಿ ಮಾಡಿದ್ದು, ಭಾಗವಹಿಸಿದ ಕಂಪೆನಿಗಳಲ್ಲಿ ಬೈಜುಸ್ ಕಂಪೆನಿಯು 10 ಲಕ್ಷ ಪ್ಯಾಕೇಜ್ ಹಾಗೂ ಎಕ್ಸ್ಟ್ರಾ ಮಾರ್ಕ್ಸ್ ಕಂಪೆನಿಯು 5 ಲಕ್ಷ ಪ್ಯಾಕೇಜ್ ನ ಆಫರ್ ನೀಡಿದ್ದು ವಿಶೇಷವಾಗಿತ್ತು.

ಉದ್ಯೋಗ ಮೇಳದ ಪೂರ್ವಭಾವಿಯಾಗಿ ಅಳದಂಗಡಿ ಪ್ರಥಮ ದರ್ಜೆ ಕಾಲೇಜು, ಬೆಳ್ತಂಗಡಿ ವಾಣಿ ಕಾಲೇಜು,ಉಜಿರೆ ಎಸ್ ಡಿ ಎಂ ಕಾಲೇಜು ಹಾಗೂ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಒರಿಯೆಂಟೇಶನ್ ಹಾಗೂ ಟ್ರೈನಿಂಗ್ ಕಾರ್ಯಕ್ರಮ ಆಳ್ವಾಸ್ ತಂಡದಿಂದ ನೀಡಲಾಗಿತ್ತು. ಉದ್ಯೋಗ ಸಂದರ್ಶನದಲ್ಲಿ ಬರವಣಿಗೆ, ಆನ್ಲೈನ್, ಜಿಡಿ ಹಾಗೂ ಮುಖತಃ ಇಂಟರ್ವ್ಯೂ ನಡೆಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು