News Kannada
Wednesday, December 07 2022

ಮಂಗಳೂರು

ನೂತನ ಅಂಬೇಡ್ಕರ ಭವನ ಉದ್ಘಾಟನೆಗೆ ದಲಿತ ಸಂಘಗಳಿಂದ ಮನವಿ

Photo Credit :

ಮಂಗಳೂರು :  ನಗರದ ಹೃದಯ ಭಾಗದಲ್ಲಿರುವ ಉರ್ವಸ್ಟೋರ್ನಲ್ಲಿ ಅಂದಾಜು 18 ಕೋಟಿ ರೂ. ವೆಚ್ಚದಲ್ಲಿ ನಿಮರ್ಾಣವಾಗಿರುವ ಅಂಬೇಡ್ಕರ ಭವನ ಉದ್ಘಾಟನೆಗೆ ಜಿಲ್ಲಾಡಳಿತ ಮೀನಮೇಷ ಎನಿಸುತ್ತಿದೆ. ಮನವಿ ಮಾಡಿದರು ಅಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ ಭವನ ನಿಮರ್ಾಣವಾಗಿ ಎರಡು ವರ್ಷಗಳು ಕಳೆದಿವೆ. ಈ ವರೆಗೆ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದು ಸಂವಿಧಾನ ಶಿಲ್ಪಿ ಅಂಬೇಡ್ಕರಗೆ ಮಾಡುವ ಅವಮಾನ. ದಲಿತ ಸಂಘಟನೆ ಹಲವಾರು ಈ ಬಗ್ಗೆ ಜಿಲ್ಲಾಡತಕ್ಕೆ ಮನವಿ ಸಲ್ಲಿಕೆ ಮಾಡಿ ಗಮನ ಹರಿಸಿದರು ಪ್ರಯೋಜನವಾಗಿಲ್ಲ. ಕುಂಟು ನೆಪ ಹೇಳುತ್ತಾ ಅಕಾರಿಗಳು ಕಾಲಕಳೆಯುತ್ತಿದ್ದಾರೆ. ಇದರಿಂದ ನೂತನ ಭವನ ಬಿಕೋ ಎನ್ನುತ್ತಿದೆ ಎಂದು ದೂರಿದರು.

ಇನ್ನೂ ಕಳೆದ ಹಲವಾರು ದಶಕಗಳಿಂದ ಭೂಮಿ ಹಕ್ಕಿಗಾಗಿ ದಲಿತ ಸಂಘಟನೆಗಳು ಹೋರಾಟ ನಡೆಸಿದ -ಲವಾಗಿ ಡಿ.ಸಿ ಮನ್ನಾ ಭೂಮಿ  ಹಂಚಿಕೆಗೆ 2017 ರಲ್ಲಿ ನಿವೇಶನ ರಹಿತರಿಂದ ಅಜರ್ಿ ಸ್ವೀಕರಿಸಲಾಗಿದೆ. ಪ್ರತಿಯೊಂದು ತಾಲೂಕಿನಿಂದ ಪ್ರತ್ಯೇಕವಾಗಿ ಅಜರ್ಿ ಸಲ್ಲಿಕೆಯಾಗಿವೆ. ಇದು ವರೆಗಳು ವಿಲೇವಾರಿಯಾಗಿಲ್ಲ. ಕಚೇರಿಗಳಲ್ಲಿ ಕಡತಗಳು ಧೂಳು ತಿನ್ನುತ್ತೀವೆ. ಇನ್ನೊಂದೆಡೆ ಇದಕ್ಕೆ ಅಡ್ಡಿ ಪಡಿಸುವ ಉದ್ದೇಶದಿಂದ ಭೂ ಕಂದಾಯ ಅನಿಯಮ 1966 ಅನ್ವಯ ವಿತರಣೆಗೆ ಸಕರ್ಾರಕ್ಕೆ ಪ್ರಸ್ತಾವಣೆ ಕಳಿಹಿಸಿ ಗೊಂದಲ ನಿಮರ್ಾಣ ಮಾಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಡಿಸಿ ಮನ್ನಾಭೂಮಿ ದಕ್ಷಿಣಕನ್ನಡ, ಉಡುಪಿ ಜಿಲ್ಲೆಗೆ ಮಾತ್ರ ಸಿಮೀತವಾಗಿದೆ. ಹಿಂದಿನ ಜಿಲ್ಲಾಕಾರಿಗಳು ಅನುಸರಿಸಿದ ಕ್ರಮವನ್ನು ಅನುಸರಿಸದೇ ರಾಜ್ಯ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನವಶ್ಯಕ ಕಾಲ ಹರಣ ಮಾಡಲಾಗುತ್ತಿದೆ. ಹೀಗೆ ನಿರ್ಲಕ್ಷ್ಯ ಮುಂದು ವರೆದಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಧ್ಯೇಯದೊಂದಿಗೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡರಾದ ಎಂ.ದೇವರಾಜ, ರಮೇಶ ಕೋಟ್ಯಾನ್, ಅಶೋಕ ಕೊಂಚಾಡಿ, ಜಿಲ್ಲಾ ಮುಖಂಡರಾದ ಜಗದೀಶ ಪಾಂಡವೇಶ್ವರ, ಚಂದ್ರಕುಮಾರ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
See also  ರಾತ್ರಿ ವೇಳೆ ಒಂಟಿಯಾಗಿ ಮನೆಯಲ್ಲಿದ್ದ ಅಜ್ಜಿಯ ಬಾಯಿಗೆ ಬಟ್ಟೆ ತುರುಕಿ ಚಿನ್ನ ದರೋಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು