ಎಲ್ಲರೂ ಚೆನ್ನಾಗಿರಬೇಕು ಎಲ್ಲರಿಗೂ ಒಳ್ಳೇದು ಮಾಡಬೇಕೆಂದು ಅನಿಸುದು ಸಹಜ ಆದ್ರೆ ಅಂತ ಮನಸ್ಸಿರುದು ತುಂಬಾ ಕಡಿಮೆ ಅಂತದ್ರಲ್ಲಿ “ಚೇತನ್ ಕುಮಾರ್ ” ಒಬ್ಬ ಬಹಳ ಸ್ವಚ್ಛ,ನಿಷ್ಕಲ್ಮಶ, ಪರೋಪಕಾರಿ ಮನುಷ್ಯ ಇಂದು ತನ್ನ ಪರೋಪಕಾರಿ ಮನೋಭಾವದಿಂದ ಸಾವು ಬದುಕಿ ನಡುವೆ ಹೊರಡ್ತಿದ್ದಾನೆ, ನಿಮ್ಮೆಲ್ಲರ ಸಹಾಯ, ಸಹಕಾರ ದೊರೆತರೆ ನನ್ನ ಸ್ನೇಹಿತ ಖಂಡಿತ ಗುಣಮುಖರಾಗಿ ಮರಳುವ ವಿಶ್ವಾಸ ವಿದೆ.
ಇವತ್ತು ಬೆಳಿಗ್ಗೆ ತನ್ನ ಬಸ್ ಕ್ಲೀನರ್ ಕೆಲಸಕ್ಕೆ ಜೋಕಟ್ಟೆ ಯ ತನ್ನ ಮನೆಯಿಂದ ಹೊರಟಾಗ,ರೈಲ್ವೆ ಹಳಿಯಲ್ಲಿ ಒಂದು ಆಡಿನ ಮರಿ ಸಿಲುಕಿರುದನ್ನು ಕಂಡು ಆ ಆಡಿನ ಮರಿಯ ಜೀವವನ್ನು ಕಾಪಾಡಲು ಹೋಗಿ ತನ್ನ ಜೀವವನ್ನು ಅಪಾಯಕ್ಕೆ ತಂದು ಕೊಂಡಿದ್ದಾನೆ, ಆಡಿನ ಮರಿಯನ್ನು ಕಾಪಾಡುವಾಗ ಅಕಸ್ಮಾತ್ ಆಗಿ ಬಂದಂತ ರೈಲು ತನ್ನ ಕಾಲಮೇಲೆ ಚಳಿಸಿ ಎರಡೂ ಕಾಲುಗಳನ್ನು ತುಂಡರಿಸಿ ಕೊಂಡು ಹೋಗಿದೆ. ತಕ್ಷಣ ಎ. ಜೆ ಹಾಸ್ಪಿಟಲ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಡೀ ಮನೆಗೆ ಆಧಾರ ವಾಗಿದ್ದ ಮನೆ ಮಗನ ಈ ಅಪಘಾತ ಬರಸಿಡಿಲಿನಂತೆ ಬಂದೆರಗಿದೆ, ಚಿಕಿತ್ಸೆಗಾಗಿ ಸುಮಾರು 18ಲಕ್ಷ ರೂ ಗಳ ಅಗತ್ಯವಿದ್ದು ಎಲ್ಲಾ ಸಂಘ ಸಂಸ್ಥೆಗಳ ಬಳಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗೆ ನೀಡಿರುವ ಮಾಹಿತಿಗೆ ಹಣ ಕಳುಹಿಸಬಹುದು.
Account details:- ASHALATHA
Ac number -20320493729
IFSC CODE- SBIN0015314
State bank of India.
Google pay 9108769904