ಮಂಗಳೂರು : ದೇಶಕ್ಕೆ ಅಚ್ಚೇದಿನ್ ಬರಲು ಇನ್ನೂ ಎಷ್ಟು ವರ್ಷ ಬೇಕು ಎಂದು ಮಾಜಿ ಸಚಿವ ಯುಟಿ ಖಾದರ್ ಪ್ರಶ್ನಿಸಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಚ್ಚೇದಿನ್ ಗಾಗಿ ಸರ್ಕಾರ ಇನ್ನೂ ಎಷ್ಟು ಜನರಿOದ ಸುಲಿಗೆ ಮಾಡುತ್ತೆ..? ಜನರಿಗೆ ಅಚ್ಚೇದಿನ್ ಯಾವಾಗ ಬರುತ್ತೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ. ಈ ಸರ್ಕಾರ ಜನಸಾಮಾನ್ಯರ ಜೇಬು ಕಳ್ಳತನ ಮಾಡುವ ಸರ್ಕಾರ. ರಾತ್ರಿ ಬೆಳಗಾಗುವುರದಲ್ಲಿ ಬೆಲೆ ಏರಿಕೆ ಮಾಡೋ ಮೂಲಕ ಜನರ ಜೇಬಿಗೆ ಕತ್ತರಿ ಹಾಕ್ತಿದೆ ಎಂದು ಕಿಡಿಕಾರಿದರು.
ಇನ್ನು ಜನಸಾಮಾನ್ಯರ ಬಗ್ಗೆ ಸಂಸದರು, ಸಚಿವರಿಗೆ ಯಾವುದೇ ಒಂದು ಕಾಳಜಿ ಇಲ್ಲ. ಪೆಟ್ರೋಲಿಯಂ ಬೆಲೆ ಜಾಸ್ತಿಯಾದರೆ ನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಒಂದು ವಿಚಾರ ಸರ್ಕಾರ ಮನದಟ್ಟು ಮಾಡಿಕೊಳ್ಳಲಿ. ದೇಶದ ಏಳು ಎಂಟು ಮಂದಿ ಮಾತ್ರ ವಿಶ್ವದಲ್ಲೇ ಶ್ರೀಮಂತರ ಪಟ್ಟಿಯ ಒಂದನೇ ಸ್ಥಾನಕ್ಕೆ ಬರ್ತಾರೆ. ಇವರು ಏಳು ವರ್ಷಗಳ ಅವಧಿಯಲ್ಲಿ ಶ್ರೀಮಂತರಾಗಲು ಸರ್ಕಾರ ಸಹಕಾರ ಮಾಡ್ತಾ ಇದೆ. ಆದರೆ ಇಲ್ಲಿನ ಜನರು ಬಡವರಾಗಿಯೇ ಬಿಡ್ತಾ ಇದ್ದಾರೆ. ಆದರೆ ಇವರು ಏಳು ವರ್ಷಗಳ ಅವಧಿಯಲ್ಲಿ ಶ್ರೀಮಂತರಾಗಲು ಕಾರಣ ಏನು ಎಂದು ಪ್ರಶ್ನಿಸಿದ ಅವರು, ಸರ್ಕಾರ ಇವರಿಗೆ ಬೆನ್ನೆಲುಬಾಗಿ ಸಹಾಯ ಮಾಡ್ತಾ ಇದೆ. ಇನ್ನು ಸರ್ಕಾರ ಯಾವುದೇ ಹೊರೆಯನ್ನು ಜನರ ಮೇಲೆ ಹಾಕಬಾರದು.
ಈ ಹಿಂದೆ ನಮ್ಮ ಸರ್ಕಾರ ಯಾವುದೇ ಬೆಲೆ ಏರಿಕೆಯ ಹೊರೆಯನ್ನು ಜನರ ಮೇಲೆ ಹಾಕಿಲ್ಲ. ಈ ಸರ್ಕಾರ ಜನರಿಗೆ ಮಾರಕವಾಗುವ ಸರ್ಕಾರವಾಗಿದೆ. ಕೇಂದ್ರದ ವಿರುದ್ದ ಮುಂದಿನ ದಿನಗಳಲ್ಲಿ ಜನ್ರು ದಂಗೆಗೆ ಮುಂದಾಗಬಹುದು ಅಂದರು. ಇನ್ನು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸರ್ಕಾರದಲ್ಲಿ ಯಾವುದೇ ಯೋಜನೆ ಯೋಚನೆ ಇಲ್ಲ, ಆನ್ ಲೈನ್, ಆಫ್ ಲೈನ್ ಹತ್ತು ಹಲವು ಗೊಂದಲ ಇದೆ ಎಂದರು.