ಬಂಟ್ವಾಳ : ಕೊಳ್ನಾಡು ಬಸ್ ನಿಲ್ದಾಣದ ಬಳಿಯಲ್ಲಿ ೨೦೦೬ ಅಕ್ಟೋಬರ್ ೩೧ರಂದು ನಡೆದ ಹಲ್ಲೆ ಪ್ರಕರಣದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ 8 ವರ್ಷದಿಂದ ತಲೆ ಮರೆಸಿಕೊಂಡಿದ್ದು, ವಿಟ್ಲ ಪೊಲೀಸರ ತಂಡ ಆರೋಪಿಯನ್ನು ಬದಿಯಡ್ಕ ಸಮೀಪದ ಪಳ್ಳತಡ್ಕದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೋಕಳ ನಿವಾಸಿ ಮಹಮ್ಮದ್ ಫಾರೂಕ್(೪೩) ಬಂಧಿತ. ಮಂಚಿ ನಿವಾಸಿ ದೇವಪ್ಪನಾಯ್ಕ ಎಂಬವರಿಗೆ ಹಣದ ವಿಚಾರದಲ್ಲಿ ಮಾತು ಆರಂಭಿಸಿ, ಅವಾಚ್ಯವಾಗಿ ನಿಂಧಿಸಿ, ದೂಡಿ ಹಾಕಿ ಹಲ್ಲೆ ನಡೆಸಿದ್ದೂ ಅಲ್ಲದೆ ಕಾಲಿನಿಂದ ತುಳಿದು ಕೊಲೆ ಬೆದರಿಕೆ ಹಾಕಿದ್ದ. ನ್ಯಾಯಾಲಯಕ್ಕೆ 2013 ರಿಂದ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಹಿನ್ನಲೆಯಲ್ಲಿ ವಾರೆಂಟ್ ಹೊರಡಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.