NewsKarnataka
Sunday, October 24 2021

ಮಂಗಳೂರು

ಮಂಗಳೂರಿನ ಕಂಕನಾಡಿಯಲ್ಲಿರುವ ಫಾ| ಮುಲ್ಲರ್ ಆಸ್ಪತ್ರೆಯ ವತಿಯಿಂದ ಕಂಕನಾಡಿ ಹೊಸ ತಂಗುದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ

ಮಂಗಳೂರು:  ಮಂಗಳೂರಿನ ಕಂಕನಾಡಿಯಲ್ಲಿರುವ ಫಾ| ಮುಲ್ಲರ್ ಆಸ್ಪತ್ರೆಯ ವತಿಯಿಂದ ಕಂಕನಾಡಿ, ವಲೆನ್ಸಿಯಾ ರಸ್ತೆಯಲ್ಲಿ ಫಾ| ಮುಲ್ಲರ್ ಆಸ್ಪತ್ರೆಯ ಎದುರು ಗಡೆ ಪ್ರಯಾಣಿಕರಿಗಾಗಿ ಹೊಸ ಬಸ್ಸು ತಂಗುದಾಣವನ್ನು ನಿರ್ಮಿಸಲು ಕೆಸರು ಕಲ್ಲನ್ನು ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾ| ರಿಚಾರ್ಡ್ ಕೊಯಿಲ್ಲೊ ಅವರು ನೆರವೇರಿಸಿದರು. ಅವರು ಮಾತನಾಡಿ ಹಳೆಬಸ್ಸು ತಂಗುದಾಣದ ತೆರವಿನಿಂದಾಗಿ ಜನರು ಕಷ್ಟಪಡುತ್ತಿದ್ದು, ಅವರ ಪ್ರಯಾಣ ಸುಗಮವಾಗಲೆಂದು ಈ ಕಾರ್ಯವನ್ನು ಕೈಗೆತ್ತಿದ್ದೇವೆ. ಫಾ| ಮುಲ್ಲರ್ ಜನಪರ ಸೇವೆಯೊಂದಿಗೆ ಸಮಾಜಕ್ಕೆ ಇಂತಹ ಕೊಡುಗೆಯನ್ನು ಸದಾ ನೀಡುತ್ತಾ ಬಂದಿದೆ ಇದಕ್ಕೆ ಅನುವತಿ ನೀಡಿದ ಮಂಗಳೂರು ಮಹಾನಗರ ಪಾಲಿಕೆೆಗೆ ಕೃತಜ್ಞತೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಫಾ| ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ವಂ| ಫಾ| ರೂಡಾಲ್ಫ್ ಡೆಸಾ, ವೈದ್ಯಕೀಯ ಕಾಲೇಜಿನ ಆಡಳಿತಾಧಿಕಾರಿ ವಂ| ಅಜಿತ್ ಮೆನೆಜಸ್, ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂ| ನೆಲ್ಸನ್ ಪಾಯಸ್, ಚಾಪ್ಲಿನ್ ವಂ| ರೊನಾಲ್ಡ್, ಚೀಪ್ ನರ್ಸಿಂಗ್ ಅಫೀಸರ್ ಸಿ| ಜಾನೆಟ್, ವೈದ್ಯಕೀಯ ಕಾಲೇಜಿನ ಡೀನ್ ಡಾ| ಜಯಪ್ರಕಾಶ್ ಆಳ್ವ, ಎಲೈಡ್ ಸಯನ್ಸ್ ವಿಭಾಗದ ಡೀನ್ ಡಾ| ಆಂಟನಿ ಸೈಲ್ಯಾನ್ ಹಾಗೂ ಕಾಮಗಾರಿಯನ್ನು ನಡೆಸಿ ಕೊಡುವ ಸಂದೇಶ ಎಂ. ಉಪಸ್ಥಿತರಿದ್ದರು. ಇದೇ ವೇಳೆ ಫಾ| ಮುಲ್ಲರ್ ಎನ್.ಎಸ್.ಎಸ್ ಇದರ ಸಹಯೋಗದಿಂದ ಸುಮಾರು ಮೂರು ಕಿ.ಮೀ ವರೆಗೆ ಸಚ್ಛತಾ ಕಾರ್ಯ ನಡೆಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!