News Kannada
Tuesday, October 04 2022

ಮಂಗಳೂರು

ಕತ್ತಿಯಿಂದ ಕಡಿದು ಕೂಲಿ ಕಾರ್ಮಿಕನ ಕೊಲೆ, ಆರೋಪಿ ಬಂಧನ - 1 min read

Photo Credit :
ಬೆಳ್ತಂಗಡಿ; ಕತ್ತಿಯಿಂದ ಕಡಿದು ಕೂಲಿ ಕಾರ್ಮಿಕನೊಬ್ಬನ್ನು ಕೊಲೆಮಾಡಿದ ಘಟನೆ ವೇಣೂರು ಗ್ರಾಮದ ಕರಿಮಣೇಲು ನೂಜಿ ಎಂಬಲ್ಲಿ ನಡೆದಿದ್ದು ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.
ಮೃತ ವ್ಯಕ್ತಿ ಸಂಜೀವಶೆಟ್ಟಿ(60)ಎಂಬವರಾಗಿದ್ದಾರೆ. ಇವರ ಹತ್ತಿರದ ಸಂಬಂಧಿಯಾಗಿರುವ ಶ್ರೀಶ ಶೆಟ್ಟಿ (36) ಎಂಬಾತನೆ ಕೊಲೆ ನಡೆಸಿದ ಆರೋಪಿಯಾಗಿದ್ದಾನೆ. ಹತ್ಯೆ ನಡೆಸಿ ಪರಾರಿಯಾಗಿದ್ದ ಈತನನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೋಲೀಸರು ಬಂಧಿಸಿದ್ದಾರೆ.
ಸಂಜೀವ ಶೆಟ್ಟಿ ಅವರು ವೇಣೂರು ಕರಿಮಣೇಲುವಿನಲ್ಲಿ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು ಕೂಲಿ ಕೆಲಸಕ್ಕೆ ಹೋಗಿ ಬದುಕುತಗತಿದ್ದರು. ಇವರು ಶುಕ್ರವಾರ ಕೆಲಸಕ್ಕೆ ಬಾರದ ಹಿನ್ನಲೆಯಲ್ಲಿ ಇವರೊಂದಿಗೆ ಕೆಲಸ ಮಾಡುವವರು ಇವರ ಮನೆಗೆ ಬಂದು ನೋಡಿದಾಗ ಅವರ ಹತ್ಯೆಯಾಗಿರುವುದು ಪತ್ತೆಯಾಗಿದೆ.
ಸಂಜೀವ ಶೆಟ್ಟಿ ಅವರ ಕುತ್ತಿಗೆ ಹಾಗೂ ಬೆನ್ನಿಗೆ ಕತ್ತಿಯಿಂದ ಕಡಿದಿದ್ದು ಗಂಭೀರ ಗಾಯಗಳಾಗಿದ್ದು ಅವರು ಅಲ್ಲಿಯೇ ಮೃತಪಟ್ಟಿದ್ದಾರೆ.
ಆರೋಪಿ ಶ್ರೀಶ ಸಂಜೀವಶೆಟ್ಟಿ ಅವರ ಮಾವನ ಮಗನಾಗಿದ್ದು ಇವರ ಮನೆಯ ಸಮೀಪವೇ ಬೇರೆ ಮನೆಯಲ್ಲಿ ವಾಸಿಸುತ್ತಿದ್ದ ಇವರಿಬ್ಬರಿಗೂ ಜಾಗದ ವಿಚಾರದಲ್ಲಿ ವೈಮನಸ್ಯವಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಶ್ರೀಶ ರಾತ್ರಿಯ ವೇಳೆ ಸಂಜೀವಶೆಟ್ಟಿಯವರ ಮನೆಗೆ ನುಗ್ಗಿ ಜಗಳ ತೆಗೆದು ಅವರ ಮೇಲೆ ಕತ್ತಿಯಿಂದ ಹಲ್ಲೆಮಾಡಿ ಕೊಲೆಮಾಡಿರವುದಾಗಿ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ವೃತ್ತನಿರೀಕ್ಷಕರು, ವೇಣೂರು ಠಾಣಾಧಿಕಾರಿ ಹಾಗೂ ತಂಡದವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಶ್ರೀಶನನ್ನು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪೋಲೀಸರು ಬಂಧಿಸಿದ್ದಾರೆ.

See also  ಮಂಗಳೂರು ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು