News Kannada
Wednesday, October 05 2022

ಮಂಗಳೂರು

ವೀರ ಸಾವರ್ಕರ್ ದೇಶ ದ್ರೋಹಿ ಅಲ್ಲ, ದುರಾದೃಷ್ಟ ಅವರನ್ನು ದೇಶ ದ್ರೋಹಿ ಎಂದು ಬಿಂಬಿಸುತ್ತಾರೆ : ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ - 1 min read

Photo Credit :

ಮಂಗಳೂರು : ಸುರತ್ಕಲ್ ಪರಿಸರಕ್ಕೆ ವೀರಾ ಸಾವರ್ಕರ್ ಹೆಸರಿಡುವ ವಿಚಾರ, ಕಾಂಗ್ರೆಸ್ ಇತರ ಪಕ್ಷಗಳಿಂದ ವಿರೋಧ ಪ್ರತಿಭಟನೆ ನಡೆಯುತಿದ್ದು, ಈ ಹಿನ್ನೆಲೆ ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿಕೆ ನೀಡಿದ್ದಾರೆ. ವೀರ ಸಾವರ್ಕರ್ ಹೆಸರು ಇಡುವುದರಲ್ಲಿ ತಪ್ಪೇನಿದೆ. ಅವ್ರೇನು ದೇಶ ದ್ರೋಹಿ ಅಲ್ಲ …ದುರಾದೃಷ್ಟ ಅವರನ್ನು ದೇಶ ದ್ರೋಹಿ ಎಂದು ಬಿಂಬಿಸುತ್ತಾರೆ.

ದೇಶದಲ್ಲಿ ಅನೇಕ ಕಡೆ ವಿದೇಶಿಯರ ಹೆಸರಿದೆ ಅದಕ್ಕೆ ಯಾರೂ ವಿರೋಧ ವ್ಯಕ್ತ ಪಡಿಸಿಲ್ಲ. ದೇಶವನ್ನು ಆಳ್ವಿಕೆ ಮಾಡಿ ಲೂಟಿ ಮಾಡಿದವರ ಹೆಸರಿಗೆ ವಿರೋಧ ಇಲ್ಲ. ಆದ್ರೆ ದೇಶದ ರಾಷ್ಟ್ರೀಯ ಮಟ್ಟದಲ್ಲಿ ಸ್ವಾತಂತ್ರ್ಯ ಹೋರಾಟ ಮಾಡಿದವರ ಹೆಸರಿಗೆ ವಿರೋಧ. ರಾಷ್ಟ್ರೀಯ ಹೋರಾಟಗಾರ ಹೋರಾಟವನ್ನು ಸ್ಥಳೀಯ ಹೋರಾಟಗಾರರಿಗೆ ಹೋಳಿಕೆ ಮಾಡಲು ಸಾಧ್ಯವಿಲ್ಲ.

ನಳೀನ್ ಕುಮಾರ್ ಕಟೀಲ್ ಗೆ ಜಿಲ್ಲಾ ಹೋರಾಟಗಾರರ ಹೆಸರಿಡುವ ಉದ್ದೇಶ ಇದೆ. ಈಗಾಗಲೇ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಹೆಸರಿಡಲಾಗಿದೆ. ಅದಕ್ಕೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಮುಂದಿನ ದಿನಗಳಲ್ಲಿ ರಾಣಿ ಅಬ್ಬಕ್ಕ, ಜಾರ್ಜ್ ಫರ್ನಾಂಡೀಸ್, ಶ್ರೀನಿವಾಸ್ ಮಲ್ಯರ ಹೆಸರಿಡುವ ಉದ್ದೇಶ ಇದೆ.

ಸಾವರ್ಕರ್ ಸಾಮರ್ಥ್ಯ ಬ್ರಿಟಿಷರಿಗೆ ಮಾತ್ರ ತಿಳಿದಿತ್ತು ಕಾಂಗ್ರೆಸ್, ಕಮ್ಯುನಿಸ್ಟಿಗರಿಗೆ ತಿಳಿದಿಲ್ಲ. ಅದಕ್ಕಾಗಿ ಬ್ರಿಟಿಷರು ಸಾವರ್ಕರ್ಗೆ ಎರಡು ಬಾರಿ ಕಾಳಾಪಾಣಿ ಕಠಿಣ ಶಿಕ್ಷೆ ನೀಡಿದ್ರು. ಭಾರತ ಯಾವುದೇ ಸ್ವಾತಂತ್ರ್ಯ ಹೋರಾಟಗಾರಿಗೂ ಅಂಡಮಾನ್ ಜೈಲಿನ ಶಿಕ್ಷೆ ನೀಡಿಲ್ಲ.ಸಾವರ್ಕರ್ ಗೆ ಮಾತ್ರ ಅಂಡಮಾನ್ ಜೈಲ್ ನಲ್ಲಿ ಕಠಿಣ ಕಾಳಾಪಾಣಿ ಶಿಕ್ಷೆ ನೀಡಿದ್ರು‌.

ಮಾತು ಮುಂದುವರಿಸಿದ ಅವರು ದೇಶದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಕಾಂಗ್ರೆಸ್ ಅಪಪ್ರಚಾರ ಮಾಡಿದೆ. ಬಿಜೆಪಿ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಲ್ಲೂ ಕೇಂದ್ರ ಆದೇಶದಂತೆ ಬೆಲೆ ಇಳಿಕೆ ಆಗಿದೆ. ಆದ್ರೆ ಕಾಂಗ್ರೆಸ್ ಅಧಿಕಾರದಲ್ಲಿ ಇರುವ ೬ ಕಡೆಗಳಲ್ಲಿ ಇನ್ನೂ ಬೆಲೆ ಇಳಿಕೆ ಮಾಡಿಲ್ಲ. ಉಪ ಚುನಾವಣೆ ಸೋತ ಹಿನ್ನೆಲೆ ಬೆಲೆ ಇಳಿಕೆ ಮಾಡಲಾಗಿದೆ ಎಂದು ಕಾಂಗ್ರೆಸಿಗ್ಗರು ಹೇಳ್ತಾರೆ.ಆದ್ರೆ ಉಪ ಚುನಾವಣೆಗೂ ಬೆಲೆ ಇಳಿಕೆಗೂ ಸಂಬಂಧ ಇಲ್ಲ.

ರಾಜ್ಯದಲ್ಲಿ ಬೆಲೆ ಇಳಿಕೆ ಬಗ್ಗೆ ಮುಖ್ಯ ಮಂತ್ರಿಗಳು ಚುನಾವಣೆಗೂ ಮೊದಲ ಮುನ್ಸೂಚನೆ ನೀಡಿದ್ರು. ಬಿಜೆಪಿ ಕಾರ್ಯಕರ್ತರು ಜನ್ರ ಸೇವೆಗಾಗಿ ಬೀದಿಗಿಳಿದಿದೆ ಆದ್ರೆ ಕಾಂಗ್ರೆಸ್ ಪ್ರತಿಭಟನೆಗಾಗಿ ಬೀದಿಗೆ ಇಳಿದಿದೆ. ಈಗಾಗಲೇ ವನಸ್ಪತಿ ಬೆಲೆ ಇಳಿಕೆ ಯಾಗುತ್ತಿದ್ದೆ. ಕ್ರಮೇಣ ಎಲ್ಲಾ ವಸ್ತುಗಳ ಬೆಲೆ ಇಳಿಕೆ ಆಗಲಿದೆ.ಪಕ್ಕದ ರಾಜ್ಯದ ಕೇರಳದಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಆಗಿಲ್ಲ.ಇನ್ನೂ ಪಕ್ಕದ ರಾಜ್ಯದ ಕಾಸರಗೋಡಿನಿಂದ ಜನ್ರು ಜಿಲ್ಲೆಗೆ ಕಡಿಮೆ ಬೆಲೆ ಪೆಟ್ರೋಲ್ ಹಾಕಲು ಬರುದು ಗಮನಿಸಿದ್ದೇವೆ ಎಂದು ಹೇಳಿದರು.

See also  ಸಮರೋಪಾದಿಯಲ್ಲಿ ಕೋವಿಡ್ ನಿರ್ಮೂಲನೆಗೆ ತೊಡಗಿಸಿ: ಸಚಿವ ಎಸ್.ಅಂಗಾರ ಅಧಿಕಾರಿಗಳಿಗೆ ಸೂಚನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

44
News Kannada

The most exciting, trusted and preferred news websites of Karnataka and Kannadigas around the world.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು