News Kannada
Thursday, March 30 2023

ಮಂಗಳೂರು

ವೇಣೂರು: ಕೊನೆಗೂ ಮೌಢ್ಯಕ್ಕೆ ಬಲಿಯಾದ ಶ್ರೀತಾಳೆ!

Photo Credit :

ಬೆಳ್ತಂಗಡಿ: ಭಾರೀ ಚರ್ಚೆಗೆ ಎಡೆಮಾಡಿದ್ದ ವೇಣೂರು ಸನಿಹದ ಕರಿಮಣೇಲು ಗ್ರಾಮದಲ್ಲಿನ ಬಹು ಅಪೂರ್ವ ಸಸ್ಯಸಂಕುಲ ಶ್ರೀತಾಳೆಯ ಸಂರಕ್ಷಣೆ ಕೊನಗೂ ಸಾಧ್ಯವಾಗಲಿಲ್ಲ. ಗುರುವಾರ ದುರುಳರು ಈ ಮರ ಧರೆಗುರುಳಿಸಿದ್ದು, ಮೌಢ್ಯಕ್ಕೆ ಬಲಿಯಾಯಿತೇ ಎಂಬ ಪ್ರಶ್ನೆ ವ್ಯಾಪಕವಾಗಿ ಜನರನ್ನು ಕಾಡತೊಡಗಿದೆ.

ಶ್ರೀತಾಳೆ ಮರ ಹೂ ಬಿಟ್ಟರೆ ಮನೆ ಯಜಮಾನನಿಗೆ ಹಾಗೂ ಊರಿಗೆ ಹಾನಿಯಾಗುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ನ.೨೧ರಂದು ವಿವಿಧ ಪೂಜಾವಿಧಿಗಳನ್ನು ನೆರವೇರಿಸಿ ಶ್ರೀತಾಳೆಯನ್ನು ಕಡಿಯಲು ನಿರ್ಧರಿಸಲಾಗಿತ್ತು. ಈ ವಿಷಯ ವ್ಯಾಪಕ ಚರ್ಚೆಯಾಗಿ ಆಕ್ಷೇಪ ವ್ಯಕ್ತವಾಗಿತ್ತು. ಮರ ಪ್ರಬೇಧಗಳಲ್ಲಿ ಪಾವಿತ್ರ್ಯದ ಸಂಕೇತ ಎಂದು ನಂಬಲಾಗಿದ್ದ ಈ ಶ್ರೀತಾಳೆ ಮರವನ್ನು ರಕ್ಷಿಸುವಂತೆ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ನಿರ್ದೇಶಕ ಪ್ರೊ| ಎಸ್.ಎ. ಕೃಷ್ಣಯ್ಯ ಅವರು ಮೂಡಬಿದಿರೆ ಜೈನಮಠದ ಸ್ವಾಮೀಜಿಯವರನ್ನು ಭೇಟಿಯಾಗಿ ಜನರಲ್ಲಿ ಅರಿವು ಮೂಡಿಸಬೇಕು ಎಂದಿದ್ದರು. ಕರಿಮಣೇಲು ಜಾಗದ ಮಾಲಿಕರ ಜತೆಯೂ ದೂರವಾಣಿಯಲ್ಲಿ ಮಾತನಾಡಿದ್ದ ಅವರು ಮರವನ್ನು ಕಡಿಯದಿರುವಂತೆ ವಿನಂತಿಸಿದ್ದರು. ಅಲ್ಲದೇ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯನ್ನೂ ಕರೆದು ಮರವನ್ನು ಸಂರಕ್ಷಿಸುವಂತೆ ಆಗ್ರಹಿಸಿದ್ದರು.

See also  ಮಂಗಳೂರು:ಸಾಂಸ್ಕೃತಿಕ ರಂಗಚಿತ್ತಾರ ಸಮಾರೋಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು