ಬೆಳ್ತಂಗಡಿ : ದತ್ತ ಜಯಂತಿ ಅಂಗವಾಗಿ ಧರ್ಮಸ್ಥಳ ಸನಿಹದ ನಿತ್ಯಾನಂದ ನಗರದ ಶ್ರೀ ರಾಮಕ್ಷೇತ್ರದಲ್ಲಿ ಡಿ.18 ರಂದು ಬೆಳಿಗ್ಗೆ 10-00 ಗಂಟೆಯಿಂದ 12.30 ಗಂಟೆಯವರೆಗೆ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ದತ್ತ ಯಜ್ಞ ಹಾಗೂ ಪೂಜಾದಿಗಳು ಜರಗಲಿರುವುದು.
ಈ ಪರಮಪವಿತ್ರ ಯಜ್ಞದಲ್ಲಿ ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ.