News Kannada
Tuesday, January 31 2023

ಮಂಗಳೂರು

ಲೈಂಗಿಕ ಕಿರುಕುಳ ಪ್ರಕರಣ: ತಲೆಮರೆಸಿಕೊಂಡಿದ್ದ ವಕೀಲ ಕೋರ್ಟ್ ಗೆ ಶರಣು

Photo Credit :

ಮಂಗಳೂರು : ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನ ಭೀತಿ ಯಿಂದ 2ತಿಂಗಳ ಕಾಲ ತಲೆಮರೆಸಿಕೊಂಡಿದ್ದ ವಕೀಲ ಕೆ ಎಸ್ ಎನ್ ರಾಜೇಶ್ ಮಂಗಳೂರು ಕೋರ್ಟ್ ಗೆ ಹಾಜರಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ . 2ತಿಂಗಳಿನಿಂದ ಪೊಲೀಸರ ಕಣ್ತಪ್ಪಿಸಿ ಓಡಾಡಿದ್ದ ವಕೀಲ ಇಂದು ಮಧ್ಯಾಹ್ನ 3ಗಂಟೆಗೆ ದಿಢೀರ್ ಆಗಿ ಮಂಗಳೂರಿನ ಮೂರನೇ ಜೆಎಂಎಫ್ಸಿ ಕೋರ್ಟ್ಗೆ ಹಾಜರಾಗಿದ್ದರು ಹಿರಿಯ ವಕೀಲ ಎಸ್ ಪಿ ಚೆಂಗಪ್ಪ ಅವರು ರಾಜೇಶ್ ಅವರನ್ನು ನ್ಯಾಯಾಲಯಕ್ಕೆ ಶರಣಾಗಿಸಿ ಮಧ್ಯಂತರ ಜಾಮೀನಿಗೆ ಅರ್ಜಿ ಹಾಕಿದರೂ ಈ ವಿಚಾರ ತಿಳಿದ ಪೊಲೀಸರು ಕೋರ್ಟಿನತ್ತ ಧಾವಿಸಿ ಬಂದಿದ್ದರು.

ಸಂಜೆ 5ಗಂಟೆ ವೇಳೆಗೆ ಮಧ್ಯಂತರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ ಅಲ್ಲದೆ ಆರೋಪಿಗೆ ವಕೀಲನಿಗೆ 14ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ . ಇದೇ ವೇಳೆ ವಕೀಲರು ತನ್ನ ಕಕ್ಷೀದಾರ ರಾಜೇಶ್ ಗೆ ಅನಾರೋಗ್ಯ ಇರುವುದರಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ ಅದರಂತೆ ವಕೀಲ ಜೈಲೂಟ ದಿಂದ ಸದ್ಯಕ್ಕೆ ತಪ್ಪಿಸಿಕೊಂಡಿದ್ದಾರೆ . ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಕೀಲ ಎಸ್ ಪಿ ಚೆಂಗಪ್ಪ ಕೋರ್ಟ್ ಸದ್ಯಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಆದರೆ ನಾಳೆ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು ಮುಂದಿನದ್ದು ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ

ಲೋಕಾಯುಕ್ತದ ಪರವಾಗಿ ಸರಕಾರಿ ವಕೀಲರೂ ಆಗಿದ್ದ ರಾಜೇಶ್ ಕರಂಗಲ್ಪಾಡಿಯಲ್ಲಿ ಕಚೇರಿಯಲ್ಲಿ ಅಲ್ಲಿಗೆ ಇಂಟರ್ನ್ ಶಿಪ್ ಮಾಡುವುದಕ್ಕಾಗಿ ಎಸ್ ಡಿಎಂ ಕಾನೂನು ಕಾಲೇಜಿನ ವಿದ್ಯಾರ್ಥಿಯೊಬ್ಬಳು ಬರುತ್ತಿದ್ದು ಆಕೆಯ ಮೇಲೆ ಸೆಪ್ಟೆಂಬರ್ ತಿಂಗಳಲ್ಲಿ ವಕೀಲ ರಾಜೇಶ ಲೈಂಗಿಕ ಕಿರುಕುಳ ನೀಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು . ಈ ಬಗ್ಗೆ ವಿದ್ಯಾರ್ಥಿನಿ ಮತ್ತು ವಕೀಲ ಮಾತನಾಡಿದ್ದು ಎನ್ನಲಾದ ಆಡಿಯೋ ಕೂಡ ವೈರಲ್ ಆಗಿತ್ತು ವಕೀಲ ತನ್ನ ತಪ್ಪೊಪ್ಪಿಗೆ ಮಾಡೋ ರೀತಿಲಿ ಆಡಿಯೋ ಇತ್ತು . ಆ ನಂತರ ಮಂಗಳೂರಿನ ಮಹಿಳಾ ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ದಾಖಲಿಸಿದ್ದು ಅತ್ಯಾಚಾರ ಯತ್ನ ಸೇರಿದಂತೆ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದ್ದು ಎಫ್ಐಆರ್ ದಾಖಲಾಗುತ್ತಿದ್ದಂತೆ ವಕೀಲ ರಾಜೇಶ್ ನಾಪತ್ತೆಯಾಗಿದ್ದು ಮಾಧ್ಯಮದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿತ್ತು

ಇದಕ್ಕೂ ಮುನ್ನ ಪ್ರಕರಣ ಮುಚ್ಚಿಹಾಕಲು ವಿದ್ಯಾರ್ಥಿಯನ್ನು ಉರ್ವ ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದು ಸಂತ್ರಸ್ತೆಯ ಬಳಿ ಕ್ಷಮಾಪಣೆ ಪತ್ರ ಬರೆಯುವಂತೆ ಒತ್ತಡ ಹೇರಲಾಗಿತ್ತು ಅನ್ನೋ ಆರೋಪ ಕೇಳಿ ಬಂದಿತ್ತು .ಉರ್ವಾ ಪೊಲೀಸರು ವಕೀಲರ ಜತೆ ಸೇರಿ ಈ ಕೃತ್ಯ ನಡೆಸಿದ್ದರು ಎನ್ನುವ ಆರೋಪ ಸುದ್ದಿಯಾಗುತ್ತಿದ್ದಂತೆ ಪೊಲೀಸ್ ಕಮಿಷನರ್ ಉರ್ವಾ ಠಾಣೆಯ ಇಬ್ಬರು ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದರೂ ಇವೆಲ್ಲ ಬೆಳವಣಿಗೆ ಸಾಮಾನ್ಯ ಅತ್ಯಾಚಾರ ಕೇಸ್ ಸಾಗುತ್ತಿದ್ದ ವಕೀಲ ರಾಜೇಶ್ ಪ್ರಕರಣ ಹೈ ಪ್ರೊಫೈಲ್ ಆಗಿ ಮಾರ್ಪಟ್ಟಿತ್ತು ಅನಂತರ ಬೆಂಗಳೂರು ಹೈದ್ರಾಬಾದ್ ನಲ್ಲಿ ತಲೆಮರೆಸಿಕೊಂಡಿದ್ದಾನೆ ಅನ್ನುವ ಮಾಹಿತಿಗಳಿದ್ದವು . ಆತನಿಗೆ ತಪ್ಪಿಸಿಕೊಳ್ಳಲು ಮತ್ತು ಹಣಕಾಸು ಸಹಕಾರ ನೀಡಿದ್ದಾರೆ ಎಂಬ ಆರೋಪದಲ್ಲಿ ಪತ್ನಿ ಸೇರಿದಂತೆ 3ಮಂದಿ ಸಂಬಂಧಿಕರನ್ನು ಬಂಧಿಸಲಾಗಿತ್ತು.

See also  ಕೊರಗಜ್ಜನ ಕ್ಷೇತ್ರ ಅಪವಿತ್ರಗೊಳಿಸಿದ ಆರೋಪಿಯ ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಬಜರಂಗದಳ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು