News Kannada
Sunday, September 25 2022

ಮಂಗಳೂರು

ರೋಟರಿ ಕ್ಲಬ್ ಪ್ರಸ್ತುತ ಪಡಿಸುತ್ತಿದೆ ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್ - 1 min read

Photo Credit :

ರೋಟರಿ ಕ್ಲಬ್ ಮಂಗಳೂರು ಪ್ರಸ್ತುತ ಪಡಿಸುತ್ತಿದೆ – “ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್ – ಕ್ಯಾನ್ಸರ್ ಪತ್ರ ಮಾಡುವ ಮೊಬೈಲ್ ಬಸ್ ವಾಹನ – ರೂ. 1.25 ಕೋಟಿ ವೆಚ್ಚದಲ್ಲಿ.

ರೋಟರಿ ಕ್ಲಬ್, ಮಂಗಳೂರು ದಕ್ಷಿಣ ಕನ್ನಡ ಜನತೆಯ ಸೇವೆಗಾಗಿ ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್ – ಕ್ಯಾನ್ಸರ್ ವ್ಯಾಧಿಯನ್ನು ಅಂಭಿಕ ಪತ್ತೆಗೆ ಮತ್ತು ಸಂವಹನ ಇಲ್ಲದಿರುವ ಮಹಿಳೆಯರ ಕಾಯಿಲೆಗಳಾದ ಸ್ತನ ಕ್ಯಾನ್ಸರ್, ಸೆರ್ವಿಕಲ್, ಕ್ಯಾನ್ಸರ್, ಇದನ್ನು ಪತ್ತೆ ಹಚ್ಚುವುದು.

ರೋಟರಿ ಕ್ಲಬ್ ಸಿಲಿಕಾನ್ ವ್ಯಾಲಿ (ಅಮೇರಿಕ), ರೋಟರಿ ಡಿಸ್ಟ್ರಿಕ್ಟ್ 6540 (ಅಮೆರಿಕ) ಮತ್ತು ರೋಟರಿ ಡಿಸ್ಟ್ರಿಕ್ಟ್ 3181 ಇವುಗಳ ಕೊಡುಗೆ ದೇಣಿಗೆಯೊಂದಿಗೆ, “ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್” ವಾಹನವನ್ನು ಮಂಗಳೂರಿನ ಪ್ರತಿಷ್ಠಿತ ಯನೆಪೋಯ ಹಾಸ್ಪಿಟಲ್ ಇವರಿಗೆ ಮಾನವ ಕುಲದ ಸೇವೆಗಾಗಿ ಕೊಟ್ಟಿರುತ್ತಾರೆ. ಇದರ ಸಂಪೂರ್ಣ ವೆಚ್ಚವಾದ ರೂ. 1.25 ಕೋಟಿಯನ್ನು ರೋಟರಿ ಕ್ಲಬ್ ಭರಿಸುತ್ತದೆ.

ಬಾಯಿ ಕ್ಯಾನರ್, ಸ್ತನ ಕ್ಯಾನ್ಸರ್ ಮತ್ತು ಸೆರ್ವಿಕಲ್ ಕ್ಯಾನ್ಸರ್‌ಗಳು ಭಾರತದ ಕ್ಯಾನ್ಸರ್ ವ್ಯಾಧಿಯ 55% ಆಗಿರುತ್ತವೆ. ಇವುಗಳ ಆರಂಭಿಕ ಪತ್ತೆ ಮತ್ತು ಸೂಕ್ತ ಚಿಕಿತ್ಸೆಯಿಂದ ನಮ್ಮ ಜಿಲ್ಲೆಯ ಮಹಿಳೆಯರ ಜೀವಗಳನ್ನು ಉಳಿಸಬಹುದಾಗಿದೆ. ಸಮುದಾಯವು, ಸರಪಂಚರು, ಅಶಾ ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವ-ಸಹಾಯ ಸಂಘಗಳು ಮತ್ತು ಸ್ಥಳೀಯ ಸಮಾಜ ಮುಖಂಡರೊಂದಿಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಸರ್ವಿಕಲ್ ಕ್ಯಾನ್ಸರ್ ಮತ್ತು ಇತರ ಸಂವನಹ ಇಲ್ಲದ ರೋಗಗಳನ್ನು “ಮೊಬೈಲ್ ಸ್ವಾಸ್ಥ್ಯ ಕ್ಲಿನಿಕ್” ವಾಹನದಲ್ಲಿ ಪರೀಕ್ಷಿಸಬಹುದು. ಈ ಎಲ್ಲಾ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ಉಚಿವಾಗಿ ಮಾಡಲಾಗುವುದು.

ಈ ವಾಹನದಲ್ಲಿ ಸ್ತನ ಕ್ಯಾನ್ಸರ್‌ ಪತ್ತೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮ್ಯಾಮೊಗ್ರಾಫಿ: ಮೆಷಿನ್ ಮತ್ತು ಸೆರ್ವಿಕಲ್ ಕ್ಯಾನ್ಸರ್ ಪತ್ತೆಗಾಗಿ ಕೊಲ್ಪೊಸ್ಕೋಪಿ ಮೆಷಿನ್‌ಗಳು ಇರುತ್ತವೆ. ಬಡತನ ರೇಖೆಯ ಕೆಳಗಿರುವ ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆ ಮಾಡುವುದು ಮತ್ತು ಉಚಿತ ಚಿಕಿತ್ಸೆಯನ್ನು ಮಂಗಳೂರಿನ ಯೆನೆಪೊಯ ಆಸ್ಪತ್ರೆಯಲ್ಲಿ ಮಾಡಲಾಗುವುದು. ಈ ಯೋಜನೆಯ ಉದ್ದೇಶವು ಕಡಿಮೆ ಆದಾಯದ ಗುಂಪುಗಳ ಸಹಾಯ
ಮಾಡುವುದಾಗಿದೆ.

ರೋಟರಿ ಕ್ಲಬ್, ಮಂಗಳೂರು ಇದು ಮಾನವೀಯತೆಯ ಸೇವೆಗಾಗಿ ಹೆಸರುವಾಸಿಯಾಗಿದೆ. ವಿವಿಧ ಯೋಜನೆಗಳಾದ ಫಿಸಿಯೋಥೆರಪಿ ಕೇಂದ್ರ (ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ), ವೆನ್‌ಲಾಕ್ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರದ ಕೊಡುಗೆ, ಮೊಬೈಲ್ ರಕ್ತದಾನ ಕೇಂದ್ರ – ರೆಡ್ ಕ್ರಾಸ್ ಗಾಗಿ – ರೋಟರಿ ಫೌಂಡೇಶನ್ ಜಾಗತಿಕ ಅನುದಾನ ಯೋಜನೆಯ ಮೂಲಕ ಹಮ್ಮಿಕೊಳ್ಳಲಾಗಿದೆ.

ಪೋಲಿಯೋ ನಿರ್ಮೂಲನೆಗಾಗಿ ರೋಟರಿ ಫೌಂಡೇಶನ್ ಲಕ್ಷಾಂತರ ಡಾಲರ್‌ಗಳನ್ನು ಖರ್ಚು ಮಾಡಲಾಗಿದೆ. ಮಹಿಳಾ ಸ್ವಾಸ್ಥ್ಯ ಮಹಿಳಾ ಕ್ಲಿನಿಕ್” – ಇದೊಂದು ವಿಶೇಷ ಯೋಜನೆಯಾಗಿದ್ದು ನಮ್ಮ ಜಿಲ್ಲೆಯ ಮಹಿಳೆಯರಲ್ಲಿ ಬರುವ ಕ್ಯಾನ್ಸರ್ ಮತ್ತು ಇತರ ಸಂವಹನ ಇಲ್ಲದ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಸಲುವಾಗಿ ಮತ್ತು ಬಡತನ ರೇಖೆಯ ಕೆಳಗಿರುವ ಮಹಿಳೆಯರ ಸಹಾಯಕ್ಕಾಗಿ ಇರುವುದು.

See also  ಮತಾಂತರ ನಿಷೇಧ ಕಾಯ್ದೆ, ಮದುವೆ ವಯಸ್ಸು 21ಕ್ಕೆ ಏರಿಕೆ ಗೊಂದಲಕಾರಿಯಾಗಿದೆ: ಖಾದರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು