News Kannada
Tuesday, December 06 2022

ಮಂಗಳೂರು

ಬೆಳ್ತಂಗಡಿಯಲ್ಲಿ ‘ಮುನ್ನೆಚ್ಚರಿಕಾ ಡೋಸ್’ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

Photo Credit : News Kannada

ಬೆಳ್ತಂಗಡಿ : ಕೊರೊನಾ ರೋಗದಿಂದ ಕತ್ತಲೆಯ ಬದುಕು ಆವರಿಸಿಕೊಂಡ ಸಂದರ್ಭದಲ್ಲಿ ದೇಶದ ಜನಸಂಖ್ಯೆಯ ಆಧಾರವನ್ನು ಗಮನಿಸಿ ತಜ್ಞರೇ ಆತಂಕಗೊಂಡಿದ್ದರು ಆದರೆ ಕೇಂದ್ರದ ದಿಟ್ಟ ನಿರ್ಧಾರ ವೈದ್ಯರ, ಸಿಬ್ಬಂದಿಗಳ ಶ್ರಮದಿಂದ ಕೊರೊನಾ ಲಸಿಕೆ ನೀಡುವ ಮೂಲಕ ನಿರ್ಭಯದಿಂದ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದರು.

ಅವರು ಸೋಮವಾರ ಬೆಳ್ತಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ತಾ.ಪಂ ಬೆಳ್ತಂಗಡಿ, ನ.ಪಂ ಬೆಳ್ತಂಗಡಿ, ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ, ತಾಲೂಕು ವೈದ್ಯಾಧಿಕಾರಿ ಕಛೇರಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಅಸ್ವಸ್ಥತೆ ಹೊಂದಿರುವ 60ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಹಳ್ಳಿಯ ಸಾಮಾನ್ಯ ವ್ಯಕ್ತಿಯಿಂದ ಹಿಡಿದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ದುರ್ಗಮ ಪ್ರದೇಶದಲ್ಲೂ ವೈದ್ಯರು, ಸಿಬ್ಬಂದಿಗಳು ಲಸಿಕೆ ನೀಡಿದ ಹಾಗೂ ಕೊರೊನಾ ನಿಯಂತ್ರಿಸಲು ಶ್ರಮಪಟ್ಟ ಪ್ರತಿಯೊಬ್ಬ ಕೊರೊನಾ ವಾರಿಯರ್ಸ್ ಕೃತಜ್ಞತೆ ಸಲ್ಲಬೇಕು.

ಮೊದಲನೇ ಅಲೆಯ ಸಂದರ್ಭದಲ್ಲಿ ಲಸಿಕೆಯನ್ನು ಕಡೆಗಣಿಸಿದವರು ಎರಡನೇ ಅಲೆ ಸಂದರ್ಭ ಅದರ ಮಹತ್ವವನ್ನು ತಿಳಿದಿದ್ದಾರೆ. ಇದರಿಂದಾಗಿ 150ಕೋಟಿ ಲಸಿಕೆಯನ್ನು ನೀಡಲು ಸಹಕಾರಿಯಾಯಿತು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಅಧ್ಯಕ್ಷ ಡಾ| ಶ್ರೀನಿವಾಸ ಡೋಂಗ್ರೆ, ತಾಲೂಕು ವೈದ್ಯಾಧಿಕಾರಿ ಡಾ| ಕಲಾಮಧು, ಆಡಳಿತ ವೈದ್ಯಾಧಿಕಾರಿ ಚಂದ್ರಕಾಂತ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಸಿಸ್ಟರ್, ಉಪಸ್ಥಿತರಿದ್ದರು.

ಆಪ್ತ ಸಮಾಲೋಚಕಿ ಕಾರ್ಯಕ್ರಮ ನಿರೂಪಿಸಿದರು. ಶುಶ್ರೂಷಕ ಅಧಿಕಾರಿಗಳಾದ ಆಶಾ, ರತ್ನಾವತಿ ಸಹಕರಿಸಿದರು.

See also  ಬೆಂಗಳೂರು: ಹತ್ತು ವಾರ್ಡ್‌ಗಳು ಕಳೆದ 10 ದಿನಗಳಲ್ಲಿ ಯಾವುದೇ ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು