News Kannada
Friday, September 30 2022

ಮಂಗಳೂರು

ಪಚ್ಚನಾಡಿ ಕಸ ಕರಗಿಸಲು ಬಯೋಮೈನಿಂಗ್ ಸದ್ಯದಲ್ಲೇ ಟೆಂಡರ್ ಅಂತಿಮ ನಿರೀಕ್ಷೆ - 1 min read

Photo Credit : News Kannada

ಮಂಗಳೂರು :ಪಚ್ಚನಾಡಿಯ ಮಂದಾರ ಪ್ರದೇಶದಲ್ಲಿ 2ವರ್ಷಗಳಿಂದ ರಾಶಿ ಬಿದ್ದಿರುವ ಪಾರಂಪರಿಕ ತ್ಯಾಜ್ಯವನ್ನು ಬಯೋಮೈನಿಂಗ್ ತಂತ್ರಜ್ಞಾನದ ಮುಖೇನ ಕರಗಿಸಲು ತೀರ್ಮಾನಿಸಲಾಗಿದ್ದು ಕೆಲವೇ ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ 9ಲಕ್ಷ ಟನ್ ತಾಜ್ಯವನ್ನು ಕರಗಿಸಲು ಯೋಜನೆ ರೂಪಿಸಲಾಗಿದೆ .

ಸುಮಾರು  73.73 ಕೋಟಿ ವೆಚ್ಚದಲ್ಲಿ ಈ ಯೋಜನೆ ನಡೆಯಲಿದ್ದು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ 3ಸಂಸ್ಥೆಗಳು ಟೆಂಡರ್ ಗಾಗಿ ಸ್ಪರ್ಧಿಸಿದೆ . ಈ ಪಟ್ಟಿಯನ್ನು ತಾಂತ್ರಿಕ ಮೌಲ್ಯಮಾಪನಕ್ಕಾಗಿ ಸರಕಾರಕ್ಕೆ ಕಳುಹಿಸಲಾಗಿದ್ದು ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದೆ .ಸುಮಾರು 9ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ 73.73 ಕೋಟಿ ವೆಚ್ಚದಲ್ಲಿ ಈಗಾಗಲೇ ಅನುಮೋದನೆ ದೊರಕಿದೆ ಪ್ರೀಮಿಯಂ ಎಫ್ ಎಆರ್ ಬ್ಯಾಂಕಿನಿಂದ ಸಂದಾಯವಾದ  15.73  ಕೋಟಿ ಬಡ್ಡಿ ಮೊತ್ತವನ್ನು ಪಾಲಿಕೆಯು ಬಂಡವಾಳ ವೆಚ್ಚವನ್ನಾಗಿ ಬಳಸಲು ನಿರ್ಧರಿಸಲಾಗಿದೆ ಕರ್ನಾಟಕ ನೀರು ಮತ್ತು ನೈರ್ಮಲ್ಯ ಕ್ರೂಢೀಕರಿಸಿದ  35. 54ಕೋಟಿ ಸಾಲ ಪಡೆಯಲು ಪಾಲಿಕೆ ನಿರ್ಧರಿಸಿದೆ

ಗುಡ್ಡೆಯಂತೆ ಬೆಳೆದಿರುವ ಡಂಪಿಂಗ್ ಯಾರ್ಡ್ ಗಳ ತ್ಯಾಜ್ಯವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ ಬಯೋಮೈನಿಂಗ್ ಎನ್ನಲಾಗುತ್ತದೆ ಈ ವಿಧಾನದಲ್ಲಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತದೆ .ಪ್ರಕೃತಿಯಲ್ಲಿ ಕರಗುವ ಮತ್ತು ಕರಗದಿರುವ ತ್ಯಾಜ್ಯವನ್ನು ಬೇರ್ಪಡಿಸಿ ಉತ್ಪತ್ತಿಯಾಗುವ ಗೊಬ್ಬರವನ್ನು ರೈತರಿಗೆ ನೀಡಬಹುದು .ಅದೇ ರೀತಿ ಪ್ಲಾಸ್ಟಿಕ್ ,ರಬ್ಬರ್ ,ಗಾಜು ಮರುಬಳಕೆಗಾಗಿ ಸಿಮೆಂಟ್ ಕಾರ್ಖಾನೆಗೆ ನೀಡಬಹುದಾಗಿದೆ . ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತದೆ ಉಳಿದ ತ್ಯಾಜ್ಯ ನಾಶಪಡಿಸಲಾಗುತ್ತದೆ ಇನ್ನೂ ಮರಳನ್ನು ಸಂಸ್ಕರಿಸಿ ಮರಳು ಮರುಬಳಕೆ ಮಾಡಲು ಅವಕಾಶ ಇದೆ.

ತ್ಯಾಜ್ಯ ದುರಂತದಿಂದಾಗಿ ಪಚ್ಚನಾಡಿಯಲ್ಲಿ ರಾಶಿ ಬಿದ್ದಿರುವ ಕಸವನ್ನು ಬಯೋಮೈನಿಂಗ್ ವಿಧಾನದ ಮುಖೇನ ಕರಗಿಸಲಾಗುವುದು ಈಗಾಗಲೇ 73.73 ಕೋಟಿ  ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ ಮುಂಬರುವ ಸಚಿವ ಸಂಪುಟ ಈ ಸಭೆಯಲ್ಲಿ ಈ ಯೋಜನೆ ಆರಂಭಕ್ಕೆ ಸಮ್ಮತಿ ಸಿಗುವ ಸಾಧ್ಯತೆಯಿದೆ ಎಂದು ಶ್ರೀಧರ್ ಪಾಲಿಕೆ ಆಯುಕ್ತರು ಮಾಧ್ಯಮಕ್ಕೆ ತಿಳಿಸಿದರು

See also  ಬಯಲನ್ನೇ ಆಲಯವಾನ್ನಾಗಿಸಿದ ಸೌತಡ್ಕದ ಗಣಪ: ಏನಿವನ ವಿಶೇಷತೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು