News Kannada
Wednesday, October 05 2022

ಮಂಗಳೂರು

ಕನ್ನಡ ಮತ್ತು ಸಂಸ್ಕೃತಿ ಸಚಿವರಿಂದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಭವನಕ್ಕೆ ಶಿಲಾನ್ಯಾಸ - 1 min read

Photo Credit : News Kannada

ಮಂಗಳೂರು: ನಗರದ ಉರ್ವ ಸ್ಟೋರ್ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಭವನಕ್ಕೆ  ಶನಿವಾರ ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಶಿಲಾನ್ಯಾಸ ನೆರವೇರಿಸಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವರು ಅಭಿವೃದ್ಧಿಗೆ ಕೊನೆ ಎಂಬುದು ಇಲ್ಲ. ಭಾಷೆ ಹಾಗೂ ಸಂಸ್ಕೃತಿಗೆ ಒಂದಕ್ಕೊಂದು ಕೊಂಡಿಯಾಗಿ ಕೆಲಸ ಮಾಡುತ್ತದೆ. ಒಂದು ನಾಗರಿಕ ಸಂಸ್ಕೃತಿ ಚೆನ್ನಾಗಿರಬೇಕೆಂದರೆ ಅಲ್ಲಿನ ಸಂಸ್ಕೃತಿಗೆ ಚೆನ್ನಾಗಿರಬೇಕು ಅದೇ ರೀತಿ ಸಂಸ್ಕೃತಿ ಚೆನ್ನಾಗಿರಬೇಕು ಎಂದರೆ ಅಲ್ಲಿನ ನಡವಳಿಕೆ ಚೆನ್ನಾಗಿರಬೇಕು ಹಾಗೂ ನಡವಳಿಕೆ ಚೆನ್ನಾಗಿರಬೇಕೆಂದರೆ ಮುಖ್ಯವಾಗಿ ಭಾಷೆ ಚೆನ್ನಾಗಿರಬೇಕು ‌ಎಂದು ನುಡಿದರು.

 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ. ಜಗದೀಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕರಾದ ವೇದವ್ಯಾಸ ವೇದವ್ಯಾಸ ಕಾಮತ್, ಶಿಲಾನ್ಯಾಸದ ವಿಚಾರದಲ್ಲಿ ನಿರಂತರವಾದ ಪರಿಶ್ರಮಕ್ಕೆ ದೊರಕಿದ ಫಲ ಇದು ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಂಗಳೂರು ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತೀನ್ ಕುಮಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್‍ಸಾರ್, ಮಹಾನಗರ ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಜಯಶ್ರೀ ಹಾಗೂ ಇತರೆ ಗಣ್ಯರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.

See also  ವೃತ್ತಿಪರತೆ ಜೊತೆಗೆ ಮಾನವೀಯತೆ ಬಹು ಮುಖ್ಯ:ವಿಕ್ಟರ್ ರಾಜ್ ಮೆನೆಜೆಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12795
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು