News Kannada
Thursday, October 06 2022

ಮಂಗಳೂರು

ಬಿಜೆಪಿ ಸಂವಿಧಾನ ವಿರೋಧಿ ಧೋರಣೆಯಿಂದ ಕಲಾಪಕ್ಕೆ ಅಡ್ಡಿ-ಯು.ಟಿ.ಖಾದರ್ - 1 min read

Bellare Praveen Kumar murder case: Culprits to be arrested soon : U.T. Khader
Photo Credit :

ಮಂಗಳೂರು : ವಿಧಾನ ಸಭಾ ಕಲಾಪ ಸಮರ್ಪಕವಾಗಿ ನಡೆಯದಿರಲು ಬಿಜೆಪಿಯ ಸಂವಿಧಾನ ವಿರೋಧಿ ಧೋರಣೆ ಕಾರಣ ಎಂದು ವಿಧಾನ ಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಚಿವ ಈಶ್ವರಪ್ಪ ರ ಹೇಳಿಕೆಗೆ ಎಂದಿದ್ದಾರೆ. ಆದರೆ ಇಲ್ಲಿನ ಬಿಜೆಪಿ ಮುಖಂಡರು ರಾಷ್ಟ್ರ ಧ್ವಜಕ್ಕೆ ,ದೇಶಕ್ಕೆ ಮಾಡಿರುವ ಅವಮಾನ.ಈಶ್ವರಪ್ಪ ನವರನ್ನು ಬೆಂಬಲಿಸುತ್ತಿರುವುದು ವಿಷಾದನೀಯ. ಇದರಿಂದ ಬಿಜೆಪಿ ಯ ಮುಖವಾಡ ಕಳಚಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸದನ ನಡೆಸಲು ಕಾಂಗ್ರೆಸ್ ಅಡ್ಡಿ ಪಡಿಸಿದೆ ಎನ್ನುವ ಬಿಜೆಪಿ ಮುಖಂಡ ರ ಹೇಳಿಕೆ ಸರಿಯಲ್ಲ. ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಸಾಕಷ್ಟು ಸಮಸ್ಯೆ ಗಳ ಬಗ್ಗೆ ಚರ್ಚೆ ಆಗಿದೆ. ಆದರೆ ಯಾವುದೂ ಅನುಷ್ಠಾನ ಆಗ್ತಾ ಇಲ್ಲಾ. ಬಡವರಿಗೆ, ಮನೆ, ನಿವೇಶನ, ಪಡಿತರ ಚೀಟಿ ದೊರೆಯುತ್ತಿಲ್ಲ. ಸರಕಾರ ತನ್ನ ಹೊಣೆಗಾರಿಕೆ ಯನ್ನು ನಿರ್ವಹಿಸುತ್ತಿಲ್ಲ ಎಂದು ಖಾದರ್ ತಿಳಿಸಿದ್ದಾರೆ.

ಉಳ್ಳಾಲ ದ ರಾಣಿ ಅಬ್ಬಕ್ಕ ನ ಬಗ್ಗೆ ಗೌರವ ವಿದ್ದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಿಡುಗಡೆ ಮಾಡಲಾದ 8ಕೋಟಿ ರೂ ಭವನದ ಯೋಜನೆ ಯನ್ನು ಕೈ ಗೆತ್ತಿಕೊಳ್ಳಲಿ. ಲೇಡಿಗೋಶನ್ ಆಸ್ಪತ್ರೆಯ ಹೆಸರು ಬದಲಾಯಿಸುವ ಬದಲು ಅಲ್ಲಿ ಗೆ ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಲಿ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಬ್ಯಾರಿ ಭವನದ ನಿರ್ಮಾಣ ದ ವಿಚಾರದಲ್ಲಿ ಬಿಜೆಪಿ ಪ್ರೇರೀತ ಪ್ರತಿಭಟನೆ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್ ನ ಪಾತ್ರ ಇಲ್ಲ ಎಂದು ಖಾದರ್ ತಿಳಿಸಿದ್ದಾರೆ. ಬೆಳ್ತಂಗಡಿ ಯಲ್ಲಿ ದಲಿತ ಯುವಕನ ಹತ್ಯೆ ಯ ಬಗ್ಗೆ ಯು.ಟಿ.ಖಾದರ್ ಖಂಡನೆ ವ್ಯಕ್ತ ಪಡಿಸಿದ್ದಾರೆ.

ರಷ್ಯಾ-ಉಕ್ರೇನ್ ನಲ್ಲಿ ಯುದ್ಧ ದ ವಾತವರಣ ಉಂಟಾದ ಸಂದರ್ಭದಲ್ಲಿ ಭಾರತ ಸರಕಾರ ಸಕಾಲದಲ್ಲಿ ಎಚ್ಚೆತ್ತುಕೊ ಳ್ಳದೆ ಇರುವ ಕಾರಣ ಅಲ್ಲಿ ಕೆಲವು ಭಾರತೀಯರು ಆತಂಕದ ಲ್ಲಿ ರುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಾಹುಲ್ ಹಮೀದ್, ಸಂತೋಷ್ ಕುಮಾರ್ ಶೆಟ್ಟಿ, ಜಕ್ರೀಯ, ಮುರಳಿ ನರಿಂಗಾನ,ಮನಪಾ ಸದಸ್ಯ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

See also  ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಗುರಿಯೊಂದಿಗೆ ಅಧಿಕಾರಕ್ಕೆ: ಬಿ.ವೈ.ವಿಜಯೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು