News Kannada
Friday, September 30 2022

ಮಂಗಳೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: 17350 ವಿದ್ಯಾರ್ಥಿಗಳಿಗೆ ‘ಸುಜ್ಞಾನನಿಧಿ ಶಿಷ್ಯವೇತನ - 1 min read

Photo Credit : News Kannada

ಬೆಳ್ತಂಗಡಿ: ಶ್ರೀ ಕೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪ್ರಗತಿಬಂಧು-ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕಾಗಿ ‘ಸುಜ್ಞಾನನಿಧಿ ಶಿಷ್ಯವೇತನ’ ಕಾರ್ಯಕ್ರಮದ ಮೂಲಕ ಪ್ರಸ್ತುತ ವರ್ಷ 17350 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಪಾವತಿಸಲಾಗುತ್ತಿದೆಯೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‌ರವರು ತಿಳಿಸಿದರು.

ಹೆಗ್ಗಡೆಯವರಿಂದ ಸುಜ್ಞಾನನಿಧಿ ಶಿಷ್ಯವೇತನ ವಿತರಣೆ ಹೆಗ್ಗಡೆ ದಂಪತಿಗಳಿAದ ಸುಜ್ಞಾನನಿಧಿ ಶಿಷ್ಯವೇತನ ವಿತರಣೆ
ಶಿಕ್ಷಣದಲ್ಲಿಂದು ವಿವಿಧ ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣಕ್ಕೆ ಅಪಾರವಾದ ಅವಕಾಶಗಳಿವೆ. ಆದರೆ ಈಗಿನ ಸ್ಥಿತಿಯಲ್ಲಿ ಬಡವರ, ಕೂಲಿಕಾರ್ಮಿಕರ ಮಕ್ಕಳು ಇಂತಹ ಶಿಕ್ಷಣ ಪಡೆಯುವುದು ಕಷ್ಟದ ಮಾತು. ಬಡತನ, ಸೂಕ್ತ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಕೊರತೆ, ದೂರದೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳು ಮೊದಲಾದ ಕಾರಣಗಳಿಂದ ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳು ವೃತ್ತಿಪರ ಹಾಗೂ ತಾಂತ್ರಿಕ ಶಿಕ್ಷಣದಿಂದ ಹೊರಗುಳಿಯುವಂತಾಗಿದೆ. ಇದನ್ನರಿತ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಬಡ ವಿದ್ಯಾರ್ಥಿಗಳಿಗಾಗಿಯೇ ‘ಸುಜ್ಞಾನನಿಧಿ ಶಿಷ್ಯವೇತನ’ ಕಾರ್ಯಕ್ರಮ ಜಾರಿಗೆ ತಂದರು.

ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮದಂತೆ ಪ್ರಗತಿಬಂಧು ಸ್ವ-ಸಹಾಯ ಸಂಘದ ಕುಟುಂಬಗಳ ಪ್ರತಿಭಾನ್ವಿತ ಮಕ್ಕಳ ತಾಂತ್ರಿಕ ಹಾಗೂ ವೃತ್ತಿಪರ ಕೋರ್ಸ್ಗಳಿಗೆ ಶಿಷ್ಯವೇತನ ನೀಡಲಾಗುತ್ತಿದೆ. ಇದರಂತೆ 3 ವರ್ಷದವರೆಗಿನ ಕೋರ್ಸ್ಗಳಿಗಾಗಿ ವಿದ್ಯಾರ್ಥಿಗಳಿಗೆ ಪ್ರತೀ ತಿಂಗಳು ತಲಾ ರೂ. 400/-ರಂತೆ ಹಾಗೂ ಅದರಿಂದ ಮೇಲ್ಪಟ್ಟ 5 ವರ್ಷದವರೆಗಿನ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ತಲಾ ರೂ. 1000/- ದಂತೆ ಸಂಬAಧಿಸಿದ ಕೋರ್ಸ್ ಮುಗಿಯುವವರೆಗೆ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಶಿಷ್ಯವೇತನ ಪಾವತಿಸಲಾಗುತ್ತಿದೆ.

ಶಿಕ್ಷಕನಾಗಬೇಕೆಂಬ ಕನಸುಕಂಡು ಬಡತನದಲ್ಲೇ ತನ್ನ ಬಿ.ಎಡ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಪ್ರಸ್ತುತ ಗದಗದಲ್ಲಿ ಶಿಕ್ಷಕನಾಗಿರುವ ಹಾನಗಲ್ ತಾಲೂಕಿನ ನವೀನ್ ಪಿಶೆ, ಬಾಲ್ಯದ ಆಸೆಯಂತೆ ಸಾಫ್ಟ್ವೇರ್ ಇಂಜಿನಿಯರ್ ಆದ ಉಡುಪಿ ಹಿರಿಯಡ್ಕದ ಸಂದೀಪ್, ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬದಲ್ಲಿ ಬೆಳೆದು ಎಲ್.ಎಲ್.ಬಿ. ಮುಗಿಸಿ ವಕೀಲರಾದ ಬಂಟ್ವಾಳ ತಾಲೂಕಿನ ವಿಮಲೇಶ್ ಕುಮಾರ್ ಕೆ.ಎಸ್., 4 ಚಿನ್ನದ ಪದಕದೊಂದಿಗೆ ತನ್ನ ಕೃಷಿ ಪದವಿ ಪೂರ್ಣಗೊಳಿಸಿದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಕ್ಷತಾ ಊ.ಐ ಹೀಗೆ ಅದೆಷ್ಟೋ ವಿದ್ಯಾರ್ಥಿಗಳು ಕಷ್ಟಕಾಲದಲ್ಲಿ ತಮ್ಮ ಶಿಕ್ಷಣಕ್ಕೆ ನೆರವಾದ ಸುಜ್ಞಾನನಿಧಿ ಶಿಷ್ಯವೇತನದ ಸಹಾಯವನ್ನು ಸ್ಮರಿಸುತ್ತಾರೆ.

ಸುಜ್ಞಾನನಿಧಿ ಶಿಷ್ಯವೇತನದ ಮಂಜೂರಾತಿ ಪತ್ರಗಳೊಂದಿಗೆ ವಿದ್ಯಾರ್ಥಿಗಳು ಸುಜ್ಞಾನನಿಧಿ ಶಿಷ್ಯವೇತನವನ್ನು ಪಡೆದು ಶಿಕ್ಷಣವನ್ನು ಮುಗಿಸಿದ ಸಾವಿರಾರು ಮಂದಿ ಇಂದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿರುತ್ತಾರೆ. ಇಂತಹ ವಿದ್ಯಾರ್ಥಿಗಳು ತಮ್ಮಂತೆಯೇ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬೇಕೆAಬ ಉದ್ದೇಶದದಿಂದ ಫಲಾನುಭವಿ ವಿದ್ಯಾರ್ಥಿಗಳು ಸೇರಿಕೊಂಡು ‘ಸುಜ್ಞಾನನಿಧಿ ವೃದ್ಧಿ ಸಂಘ’ವನ್ನು ರಚಿಸಿ ತಮ್ಮ ಕೈಯಲ್ಲಾದ ದೇಣಿಗೆಯನ್ನು ಸುಜ್ಞಾನನಿಧಿ ಶಿಷ್ಯವೇತನಕ್ಕೆ ನೀಡಿದ್ದಾರೆ. ಇದರಂತೆ ಇದುವರೆಗೆ ಸುಮಾರು 140 ವಿದ್ಯಾರ್ಥಿಗಳು ರೂ. 7.50 ಲಕ್ಷ ಮೊತ್ತದ ದೇಣಿಗೆಯನ್ನು ನೀಡಿ ತಮ್ಮ ಔದಾರ್ಯತೆ ಮೆರೆದಿರುತ್ತಾರೆ.

ಸಂಸ್ಥೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ 2007ರಲ್ಲಿ ಪ್ರಾರಂಭಿಸಲಾದ ಈ ಕಾರ್ಯಕ್ರಮದಂತೆ ಇದುವರೆಗೆ ರಾಜ್ಯದ 47000 ವಿದ್ಯಾರ್ಥಿಗಳಿಗಾಗಿ ರೂ. 59.50 ಕೋಟಿ ಮೊತ್ತದ ವಿದಾರ್ಥಿವೇತನ ನೀಡಲಾಗಿದೆ. ಇದರಿಂದ ಓರ್ವ ಸಾಮಾನ್ಯ ಬಡಕುಟುಂಬದ ವಿದ್ಯಾರ್ಥಿಯೂ ಕೂಡ ಡಾಕ್ಟರ್, ಇಂಜಿನಿಯರ್‌ರAತಹ ಉನ್ನತ ಶಿಕ್ಷಣ ಪಡೆಯಬಹುದೆಂಬುದನ್ನು ಈ ಕಾರ್ಯಕ್ರಮ ನಿರೂಪಿಸಿದೆಯೆಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‌ರವರು ತಿಳಿಸಿದರು.

See also  ಬಂಟ್ವಾಳ: ಸಿಡಿಲಿನ ಅಬ್ಬರಕ್ಕೆ ಮನೆ ಗೋಡೆ ಹಾಗೂ ಹಂಚು ಹಾನಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು