News Kannada
Sunday, December 04 2022

ಮಂಗಳೂರು

ಮತ್ಸ್ಯಗಳ ಸಾವಿಗೆ ಖಾಸಗಿಯವರು ಬಿಡುತ್ತಿದ್ದ ಮಲೀನ ನೀರು ಕಾರಣ: ಪರೀಕ್ಷೆಯಿಂದ ಬಹಿರಂಗ

Photo Credit :

ಬೆಳ್ತಂಗಡಿ: ಗುರುವಾಯನಕೆರೆ ಐತಿಹಾಸಿಕ ಕೆರೆಯಲ್ಲಿ ಮಾ.೧೪ರಂದು ಸಂಭವಿಸಿದ ಸಾವಿರಾರು ಮತ್ಸ್ಯಗಳ ಮಾರಣಹೋಮಕ್ಕೆ ಖಾಸಗಿಯವರು ಬಿಡುತ್ತಿದ್ದ ಮಲೀನ ನೀರೆ ಕಾರಣ ಹೊರತು ಏಕಾಏಕಿ ವಿಷಪ್ರಾಶನ ನಡೆದಿಲ್ಲ ಎಂಬ ವಿಚಾರ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯ ನಡೆಸಿದ ಪರೀಕ್ಷೆಯಿಂದ ಬಹಿರಂಗವಾಗಿದೆ.

ಕುವೆಟ್ಟು ಗ್ರಾ.ಪಂ.ಗೆ ಒಳಪಟ್ಟಂತೆ ಸರ್ವೇ ನಂ. ೧೫/ ೧ ರಲ್ಲಿ ೧೪.೭೧ ಎಕ್ರೆ ವಿಸ್ತೀರ್ಣದ ಗುರುವಾಯನಕೆರೆಯಲ್ಲಿ ಕಾಟ್ಲ, ಥಿಲಾಪಿಯಾ, ರೋಹು ಸಾಕು ಮೀನುಗಳು ಸೇರಿದಂತೆ ಅನೇಕ ಬಗೆಯ ಕೆರೆ ಮೀನುಗಳು ಮಾ.೧೪ರಂದು ಮುಂಜಾನೆ ಇದ್ದಕ್ಕಿದ್ದಂತೆ ಸತ್ತು ದಡ ಸೇರಿದ್ದವು. ಸತತ ಐದು ದಿನಗಳ ವರೆಗೆ ತೆರವುಕಾರ್ಯ ನಡೆದ ಬಳಿಕ ಸುಮಾರು ೨ ಟನ್ ಮೀನುಗಳ ಮಾರಣಹೋಮಕ್ಕೆ ಕಾರಣವಾಗಿತ್ತು. ಈ ಕುರಿತು ಕೆರೆ ನೀರು, ಸತ್ತ ಮೀನು ಹಾಗೂ ಮಣ್ಣಿನ ಮಾದರಿಯನ್ನು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯಕ್ಕೆ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿತ್ತು. ಇದೀಗ ಎಲ್ಲ ವರದಿಗಳು ಸೋಮವಾರ ತಾಲೂಕು ಆಡಳಿತ ಕೈಸೇರಿದ್ದು ವರದಿಯಲ್ಲಿ ಮಲಿನ ನೀರು ಕೆರೆ ಸೇರಿದ್ದರಿಂದಲೇ ಮೀನುಗಳು ಸಾವನ್ನಪ್ಪಿವೆ ಎಂಬುದು ವರದಿಯಲ್ಲಿ ದೃಢಪಟ್ಟಿದೆ.

ವರದಿಯಲ್ಲಿ ಏನೇನಿದೆ

ನೀರಿನಲ್ಲಿ ಆಮ್ಲಜನಕ ಪ್ರಮಾಣವು ಪ್ರತಿ ಲೀಟರ್ಗೆ ೫ ರಿಂದ ೯ ಪ್ರಮಾಣ ಇರುವಲ್ಲಿ ಶೇ. ೩.೮೪ರಷ್ಟಿದೆ. ಇದಕ್ಕೆ ಕಾರಣ ಸೋಪು, ಡಿಟರ್ಜೆಂಟ್ ಸಹಿತ, ಬಳಕೆ ಮಾಡಿದ ಇತರ ಮಲಿನ ನೀರು ಕೆರೆ ನೀರಿಗೆ ಸೇರಿರುವ ಪರಿಣಾಮ ನೀರು ಕಲುಷಿತಗೊಂಡು ಮೀನುಗಳ ಸಾವಿಗೆ ಕಾರಣವಾಗಿದೆ. ಮಾತ್ರಲ್ಲದೆ ಸತ್ತ ಮೀನಿನ ವರದಿಯಲ್ಲೂ ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ ಎಂಬುದನ್ನು ಉಲ್ಲೇಖಿಸಿದೆ.
ಮಲಿನ ನೀರು ಹೆಚ್ಚಾದ್ದರಿಂದ ಪಾಚಿಯಂತ ಸಸ್ಯರಾಶಿಗಳು ಪದರದಂತೆ ಬೆಳೆದು ಸೂರ್ಯನ ಬೆಳಕು ತಳಮಟ್ಟಕ್ಕೆ ತಲುಪದೇ ಇದ್ದಾಗ ಆಮ್ಲಜನಕ ಕೊರತೆಯಾಗಿ ಮೀನುಗಳು ಕಾಲಕ್ರಮೇಣ ಸಾವನ್ನಪ್ಪುತ್ತದೆ. ಇದು ಏಕಾಏಕಿ ನಡೆದ ಘಟನೆಯಲ್ಲ, ಕಲುಷಿತ ನೀರು ಬಹಳ ದಿನಗಳಿಂದ ಕೆರೆನೀರಿಗೆ ಸೇರಿ ಈ ಘಟನೆಗೆ ಕಾರಣವಾಗಿರಬಹುದಾಗಿದೆ ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಉಸ್ತುವಾರಿ ಡೀನ್ ಅಂಜನಪ್ಪ ತಿಳಿಸಿದ್ದಾರೆ.
* ಮಲಿನ ನೀರೆ ಕಾರಣ ಎಂದಿದ್ದ ಸ್ಥಳೀಯರು
ಮೀನುಗಳು ಸಾಯುವ ಒಂದೆರಡು ವಾರಗಳ ಹಿಂದೆಯೇ ಕೆರೆ ನೀರಿನ ಬಣ್ಣ ಬದಲಾಗಿರುವ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಆ ಕುರಿತು ಪತ್ರಿಕೆಯೂ ಖಾಸಗಿ ಶಿಕ್ಷಣ ಇಲಾಖೆ ಸಹಿತ ಸುತ್ತಮುತ್ತ ಖಾಸಗಿ ಸಂಸ್ಥೆಗಳ ಕಲುಷಿತ ನೀರು ಕೆರೆ ಸೇರುತ್ತಿರುವ ಬಗ್ಗೆಯೂ ಉಲ್ಲೇಖಿಸಿತ್ತು. ಕೆರೆ ಮೀನುಗಳ ಏಲಂ ಪಡೆದಿದ್ದ ಪುತ್ಯೆ ನಿವಾಸಿ ಅಶೋಕ್ ಗೋವಿಯಸ್ ಹಾಗು ಸುಭಾಷ್ ಅವರು ಮಲಿನ ನೀರಿಂದಲೇ ಮೀನುಗಳು ಸಾವನ್ನಪ್ಪಿರುವ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇಷ್ಟು ದಿನ ವರದಿಗಾಗಿ ಕಾಯುತ್ತಿದ್ದ ತಾಲೂಕು ಆಡಳಿತ, ಇದೀಗ ವರದಿ ಕೈಸೇರಿ ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಕಾದುನೋಡಬೇಕಿದೆ.

ಮಲಿನ ನೀರಿನಂದಲೇ ಮೀನುಗಳು ಮೃತಪಟ್ಟಿರುವ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಹಶೀಲ್ದಾರ್ ಅವರಿಗೆ ವರದಿ ನೀಡಿದ್ದು ಕೆರೆ ಸುತ್ತಮುತ್ತ ಪರಿಶೀಲಿಸಿ ಇದಕ್ಕೆ ಕಾರಣವಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು..
* ಕುಸುಮಾಧರ್ ಬಿ. ತಾ.ಪಂ. ಇ.ಒ.

See also  ವಾರದ ಕಲಾಕೃತಿ-ಸರಣಿ 14: ರಮೇಶ್ ರಾವ್ ಅವರ ಅಕ್ರಿಲಿಕ್ ಆನ್ ಕ್ಯಾನ್ವಾಸ್ ವರ್ಣಚಿತ್ರಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು