ಬೆಳ್ತಂಗಡಿ: ಕೆಲಸ ಮುಗಿಸಿ ಬರುವ ವೇಳೆ ಬೈಕ್ ಸ್ಕಿಡ್ ಆಗಿ ಮಗುಚಿಬಿದ್ದು ಅವಿವಾಹಿತ ಯುವಕ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ದಿಡುಪೆ ರಸ್ತೆಯ ಶಾರದಾ ನಗರದ ದೇವಿ ಗುಡಿ ಸಮೀಪ ತಡರಾತ್ರಿ 11:30 ರ ಸುಮಾರಿಗೆ ಅಪಘಾತವಾಗಿದ್ದು, ಕಡಿರುದ್ಯಾವರ ಗ್ರಾಮದ ಹೇಡ್ಯ ಎನ್ಕುಡೆ ನಾರಾಯಣ ದೇವಾಡಿಗ ಎಂಬವರ ಪುತ್ರ ಯಶೋಧರ ದೇವಾಡಿಗ(30) ಮೃತಪಟ್ಟ ಯುವಕ.
ಸಹಸವಾರ ನೆರೆಕರೆಯ ಅಶೋಕ(35) ಅವರಿಗು ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಗಾರೆ ವೃತ್ತಿಯ ಮೃತ ಯುವಕನಿಗೆ ತಂದೆ,ತಾಯಿ ಹಾಗೂ ಸಹೋದರ ಇದ್ದಾರೆ.