ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಇದರ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಇದೀಗ ನಿರ್ದೇಶಕರಾಗಿ ಭಡ್ತಿ ಹೊಂದಿ ರಾಮನಗರ ಜಿಲ್ಲೆಗೆ ವರ್ಗಾವಣೆಗೊಂಡಿರುವ ಜಯಕರ ಶೆಟ್ಟಿ ಇವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ತಾಲೂಕು ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾೈಸ್, ವೇದಿಕೆಯ ತಾಲೂಕು ಅಧ್ಯಕ್ಷೆ ಶಾರದ ಆರ್. ರೈ., ಮಾಜಿ ಅಧ್ಯಕ್ಷರುಗಳಾದ ಕಿಶೋರ್ ಹೆಗ್ಡೆ, ಡಿ.ಎ. ರಹಿಮಾನ್, ಅಡೂರು ವೆಂಕಟ್ರಾಯ, ತಿಮ್ಮಪ್ಪ ಗೌಡ, ಪಿ.ಕೆ. ರಾಜು ಪೂಜಾರಿ, ನಿರ್ದೇಶಕರಾದ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳಾದ ಮೋಹನ್ ಕೆ. ಯಶವಂತ್, ಸುರೇಂದ್ರ, ಪ್ರಭಾಕರ ಪೊಸಂದೋಡಿ, ಸಂತೋಷ್ ಕುಮಾರ್, ರಾಜೀವ ರೈ. ವಲಯಾಧ್ತಕ್ಷರುಗಳು ಉಪಸ್ಥಿತರಿದ್ದರು.