News Kannada
Tuesday, January 31 2023

ಮಂಗಳೂರು

ಭಾರತ ಹಿಂದೂ ರಾಷ್ಟ್ರವಾಗಲು ಧರ್ಮ ಶಿಕ್ಷಣದ ಅಗತ್ಯವಿದೆ

Photo Credit :

ಬೆಳ್ತಂಗಡಿ : ಜಗತ್ತಿನಲ್ಲಿ ಶಾಂತಿ ,ನೆಮ್ಮದಿ ನೆಲೆಸಲು ಹಿಂದೂ ಧರ್ಮದಿಂದ ಮಾತ್ರ ಸಾಧ್ಯ . ಭಾರತ ವಿಶ್ವಗುರುವಾಗುವ ಸುದಿನದ ನಿರೀಕ್ಷೆಯಲ್ಲಿ  ಹಿಂದುಗಳಿಗೆ ಧರ್ಮ ಶಿಕ್ಷಣದ ಪ್ರೇರಣೆಯಾಗಬೇಕಾಗಿದೆ. ಧರ್ಮ ಶಿಕ್ಷಣದ ಕೊರತೆಯೇ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಭಾರತ ಹಿಂದೂ ರಾಷ್ಟ್ರವಾಗಲು ಧರ್ಮ ಶಿಕ್ಷಣದ ಅಗತ್ಯವಿದೆ. ವೈದ್ಯ,ಸಮಾಜ ಚಿಂತಕ ಡಾl ಆಠವಲೆಯವರ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳು ಅದಕ್ಕೆ ಪ್ರೇರಣೆಯಾಗಲಿ ಎಂದು ನ್ಯಾಯವಾದಿ ಉದಯಕುಮಾರ್ ನುಡಿದರು.

ಅವರು ಮೇ 12 ರಂದು ಉಜಿರೆಯ ಮುಖ್ಯ ವೃತ್ತದ ಬಳಿ ಸನಾತನ ಸಂಸ್ಥೆ ವತಿಯಿಂದ ನಡೆದ ಪರಾತ್ಪರ ಗುರು ಸಂಸ್ಥೆಯ ಸಂಸ್ಥಾಪಕ ಡಾ! ಜಯಂತ ಆಠವಲೆಯವರ 80 ನೇ ಜಯಂತ್ಯುತ್ಸವ ಪ್ರಯುಕ್ತ ಏರ್ಪಡಿಸಲಾದ ಹಿಂದೂ ಐಕ್ಯತಾ ಮೆರವಣಿಗೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸಮಾಜದಲ್ಲಿ ಹಿಂದುತ್ವದ ಆಚಾರ,ವಿಚಾರ ಗಳ ಬಗೆಗೆ ಜಾಗೃತಿ ಮೂಡಿಸಲು ಸನಾತನ ಸಂಸ್ಥೆ ಗ್ರಂಥಗಳು,ಪತ್ರಿಕೆ,            ಧರ್ಮ ಶಿಕ್ಷಣ,ಸಂತರಿಂದ ಪ್ರೇರಣೆ ನೀಡುತ್ತಿದೆ. ಹಿಂದೂ ಸಂಘಟನೆಗಳ ಮೇಲೆ ನಡೆಯುತ್ತಿರುವ ತುಳಿತ,ಆರೋಪಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.

ಹನುಮಾನ್ ಚಾಲೀಸ್ ಓದು ವವರನ್ನು ಭಯೋತ್ಪಾದಕರು,ಸಮಾಜದ್ರೋಹಿಗಳೆಂದು ಪಟ್ಟಿಕೊಡುತ್ತಿದ್ದಾ ರೆ. ಆ ಬಗೆಗೆ ದೇಶದಲ್ಲಿ ಐಕ್ಯತೆ ಮೂಡಿಸಲು ಜಾಗೃತಿ ಅಗತ್ಯವಿದೆ. 2025 ರ ವೇಳೆಗೆ ಭಾರತ ವಿಶ್ವಗುರುವಾಗುವ ಗುರುಗಳ ಚಿಂತನೆ ಬೆಂಬಲಿಸಿ ಸಹಕರಿಸೋಣ ಎಂದು ನುಡಿದರು.

ಇನ್ನೋರ್ವ ಮುಖ್ಯ ಅತಿಥಿ ಹಿಂದೂ ಜನಜಾಗೃತಿಯ ದ .ಕ .ಜಿಲ್ಲಾ ಸಮನ್ವಯಕಾರ ಚಂದ್ರ ಮೊಗೇರ ಅವರು, ನಿರಂತರ ಗೋಹತ್ಯೆ ,ಹಿಂದೂ ನೇತಾರರ ಹತ್ಯೆ,ಅನ್ಯಾಯ,ಅತ್ಯಾಚಾರ ಇತ್ಯಾದಿ ನಡೆಯುತ್ತಿದೆ.ಎಲ್ಲ ಸಮಸ್ಯೆಗಳ ಪರಿಹಾರ ಹಿಂದೂ ರಾಷ್ಟ್ರ ನಿರ್ಮಾಣದಿಂದ ಮಾತ್ರ ಸಾಧ್ಯ. ವಿಶ್ವದ ಕಲ್ಯಾಣವೇ ಹಿಂದೂ ಧರ್ಮದ ಸಾರ. ರಾತ್ರಿ 10 ರಿಂದ ಬೆಳಿಗ್ಗೆ 6 ರ ವರೆಗೆ ಧ್ವನಿವರ್ಧಕ ಬಳಸಬಾರದೆಂಬ ಕಾನೂನನ್ನು ಉಲ್ಲಂಘಿಸಿ ದೇಶಯ ಕಾನೂನಿಗೇ ಅಪಚಾರವೆಸಗುತ್ತಿದ್ದಾರೆ. ಅನುದಾನಿತ ಶಾಲೆಗಳಲ್ಲಿ ಕುರಾನ್,ಬೈಬಲ್ ಕಲಿಸಲು ಅವಕಾಶವಿರುವುದಾದರೆ ಹಿಂದೂ ಧರ್ಮ ಕಲಿಸಲು ಅವಕಾಶವೇಕಿಲ್ಲ ಎಂದವರು ಪ್ರಶ್ನಿಸಿದರು.

ಸನಾತನ ಸಂಸ್ಥೆಯ ಸಾಧಕ ಆನಂದ ಗೌಡ ದುರ್ಗುಣಗಳನ್ನು ನಾಶಮಾಡಿ ಸದ್ಗುಣಗಳನ್ನು ಬೆಳೆಸಿಕೊಳ್ಳುವವನೇ ನಿಜವಾದ ಹಿಂದೂ. ಸಮಾಜದಲ್ಲಿ ಪರಿವರ್ತನೆಗೆ ಸಂವಿಧಾನದಲ್ಲಿ ಅವಕಾಶವಿದೆ.

ನಾವು ಜಾಗೃತರಾಗಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದರು ಐಕ್ಯತಾ ಮೆರವ ಣಿಗೆ : ಉಜಿರೆಯ ಬೆಲಾಲ್ ಕ್ರಾಸ್ ನಿಂದ ಸನಾತನ ಸಂಸ್ಥೆಯ ಕಾರ್ಯಕರ್ತರಿಂದ ವಿಶೇಷ ಸ್ತಬ್ದಚಿತ್ರಗಳೊಂದಿಗೆ ಆಕರ್ಷಕ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ವೃತ್ತದ ಬಳಿ ಸಮಾಪನಗೊಂಡಿತು, ಮೆರವಣಿಗೆಯಲ್ಲಿ ಪೌರಾಣಿಕ ದೃಶ್ಯಾವಳಿಗಳು, ಶಿವಾಜಿಮಹಾರಾಜ್, ಕೊಲ್ಲಿಯ ಶ್ರೀ ದುರ್ಗಾ ಭಜನಾ ಮಂಡಳಿ ಸದಸ್ಯರಿಂದ ಕುಣಿತ ಭಜನೆ , ಕವಾಯತು, ಭಾಗವಾದ್ವಜಕ್ಕೆ ಪುಷ್ಪಾರ್ಚನೆ , ಭಾರತ್ ಮಾತಾಕಿ ಜೈ , ಜಯತು ಜಯತು ಹಿಂದೂ ರಾಷ್ಟ್ರ , ಶಿವಾಜಿ ಮಹಾರಾಜ್ ಕಿ ಜೈ ಘೋಷಣೆ ಆಕರ್ಷಣೆಯಾಗಿತ್ತು. ತಿಮ್ಮಪ್ಪ ಗೌಡ ಬೆಲಾಲ್ ,ಪದ್ಮನಾಭ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು. ಆನಂದ ಗೌಡ ವಂದಿಸಿದರು. 

See also  ಸುಳ್ಯ: ಡಿ ಕೆ ಶಿವಕುಮಾರ್ ಮೇಲೆ ವಾರಂಟ್ - ಅಕ್ಟೋಬರ್ 5 ರಂದು ನ್ಯಾಯಾಲಯಕ್ಕೆ ಹಾಜರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು