ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಮೃತ್ಯುಂಜಯ ಸೇತುವೆ ಸಮೀಪ ಲಾರಿ ಹಾಗೂ ಕಾರು ಡಿಕ್ಕಿಯಾದ ಘಟನೆ ನಡೆದಿದೆ.
ಗುರುವಾರ ಬೆಳಿಗ್ಗೆ ಚಾರ್ಮಾಡಿ ಕಡೆಯಿಂದ ಉಜಿರೆಯತ್ತ ಬರುತ್ತಿದ್ದ ಮಂಗಳೂರು ಕಡೆಯ ಪ್ರಯಾಣಿಕರಿದ್ದ ಕಾರಿಗೆ ಚಾರ್ಮಾಡಿ ಕಡೆ ಹೋಗುತ್ತಿದ್ದ ಲಾರಿ ಇಲ್ಲಿನ ಅಪಾಯಕಾರಿ ತಿರುವಿನಲ್ಲಿ ಡಿಕ್ಕಿ ಯಾಯಿತು.
ಡಿಕ್ಕಿಯ ರಭಸಕ್ಕೆ ಕಾರು ವಿರುದ್ಧ ದಿಕ್ಕಿಗೆ ತಿರುಗಿ ನಿಂತಿತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.