ಮಂಗಳೂರು: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಮಳಲಿ ದರ್ಗಾದಲ್ಲಿ ಹಿಂದು ದೇವಾಲಯದ ಶೈಲಿಯ ಕೆತ್ತನೆಗಳು ಪತ್ತೆಯಾಗಿದ್ದ ವಿಚಾರದ ಹಿನ್ನೆಲೆಯಲ್ಲಿ ಇದೀಗ ವಿ.ಎಚ್ .ಪಿ ಹಾಗು ಬಜರಂಗದಳ ಅಷ್ಟಮಂಗಲ ಪ್ರಶ್ನೆಗೆ ಚಿಂತನೆ ನಡೆಸಲು ಚಿಂತನೆ ನಡೆಸಿವೆ.
ಇತ್ತೀಚೆಗೆ ನಗರದ ಹೊರವಲಯದ ಗಂಜಿಮಠದಲ್ಲಿರುವ ಅಸೈಯದ್ ಅಬ್ದುಲ್ಲಾ ಮದನಿ ದರ್ಗಾ ಒಂದನ್ನು ನವೀಕರಣಗೊಳಿಸಲು ಕೆಡವಿ ಹಾಕಿದ ಸಂದರ್ಭ ಹಿಂದೂ ದೇವಾಲಯ ಶೈಲಿಯ ಕೆತ್ತನೆ ಪತ್ತೆಯಾಗಿತ್ತು .ಇದೀಗ ಇಲ್ಲಿರೋದು ಹಿಂದೂ ದೇವಾಲ ಯವೇ ದರ್ಗಾವೇ ಅಥವ ಬಸದಿಯ ಎಂಬ ಬಗ್ಗೆ ದೀರ್ಘವಾದ ಚರ್ಚೆಗಳು ನಡೆಯುತ್ತಿವೆ.
ತಕ್ಷಣ ಮಧ್ಯಪ್ರವೇಶಿಸುವ ದಕ್ಷಿಣ ಕನ್ನಡ ಜಿಲ್ಲಾಡಳಿತವೂ ಮಂಗಳೂರು ತಹಶೀಲ್ದಾರ್ ರವರ ಮೂಲಕ ದರ್ಗಾ ನವೀಕರಣ ಕಾಮಗಾರಿಯನ್ನು ಸ್ಥಗಿತಗೊಳಿಸಲು ಸೂಚನೆ ನೀಡಿತ್ತು ಆ ಬಳಿಕ ಕೋರ್ಟ್ ನಿಂದಲೂ ದರ್ಗಾ ನವೀಕರಣ ಕಾಮಗಾರಿಗೆ ತಡೆಯಾಜ್ಞೆ ಬಂದಿತ್ತು .ಈ ಹಿನ್ನೆಲೆಯಲ್ಲಿ ಈಗಿನ ದರ್ಗದ ಕಾಮಗಾರಿ ಸ್ಥಗಿತಗೊಂಡಿದ್ದು ದರ್ಗಾ ಇರುವ ಪ್ರದೇಶದ ಮೂಲ ಭೂ ದಾಖಲೆಗಳನ್ನು ಪರಿಶೀಲನೆ ನಡೆಸುವ ಕಾರ್ಯ ನಡೆಯುತ್ತಿದೆ.
ಈ ನಡುವೆ ವಿಎಚ್ ಪಿ ಹಾಗು ಬಜರಂಗದಳ ಈ ವಿಚಾರದಲ್ಲಿ ಪ್ರವೇಶಮಾಡಿ ದರ್ಗಾ ಇರುವ ಜಾಗದಲ್ಲಿ ಈ ಹಿಂದೆ ಧ್ಯೇಯ ದೇವಾಲಯವಿತ್ತು ಎಂಬ ವಾದಿಸಿತ್ತು ಅಲ್ಲದೆ ಪುರಾತತ್ತ್ವ ಇಲಾಖೆಯ ಮುಖಾಂತರ ಶೋಧ ಕಾರ್ಯ ನಡೆಸಬೇಕೆಂದು ಸರಕಾರಕ್ಕೆ ಒತ್ತಾಯ ಮಾಡಿತ್ತು ಇದೀಗ ದರ್ಗದ ಭೂಮಿ ವಿವರಗಳನ್ನು ತಿಳಿಯಲು ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಲು ವಿ .ಎಚ್. ಪಿ ಬಜರಂಗದಳ ನಿರ್ಧಾರ ಕೈಗೊಂಡಿದೆ ,ಆದರೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಈ ಮೂಲಕ ಅಲ್ಲಿರೋದು ದರ್ಗಾವೇ ಅಥವಾ ದೇವಾಲಯವೇ ಎಂಬುದಕ್ಕೆ ಗೊಂದಲ ತೆರೆ ಬೀಳುವ ಸಾಧ್ಯತೆಯಿದೆ.