ಬೆಳ್ತಂಗಡಿ: ಬೆಳ್ತಂಗಡಿ ಸೈಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮಧುಶ್ರೀ ಶೇ.100 ಅಂಕಗಳಿಸಿ ಟಾಪರ್ ಆಗಿದ್ದಾಳೆ.
ಈಕೆ ಕೊಯ್ಯೂರಿನ ರಾಮಣ್ಣ ಗೀತಾ ದಂಪತಿ ಪುತ್ರಿ. ಇಷ್ಟು ಅಂಕಗಳು ಬರುತ್ತವೆ ಎಂಬ ನಿರೀಕ್ಷೆಯೇ ಇರಲಿಲ್ಲ. ಅಮ್ಮನ ಪ್ರೋತ್ಸಾಹದಿಂದಾಗಿ ಪ್ರತಿ ದಿನ 4 ಗಂಟೆಗೆ ಎದ್ದು ಓದುತ್ತಿದ್ದೆ. ಶಾಲೆಯಲ್ಲಿ ಶಿಕ್ಷಕರು ಪಾಠದಲ್ಲಿ ಯಾವುದೇ ಸಂಶಯವಿದ್ದರೂ ವಿಳಂಬವಿಲ್ಲದೆ ಪರಿಹರಿಸುತ್ತಿದ್ದರು ಎನ್ನುವ ಈಕೆ. ಮುಂದೆ ವೈದ್ಯಳಾಗಬೇಕೆಂಬ ಆಸೆಯನ್ನಿಟ್ಟುಕೊಂಡಿದ್ದಾಳೆ.