News Kannada
Sunday, December 04 2022

ಮಂಗಳೂರು

ಬೆಂಗಳೂರಿನ ಟಿ ಸಿ ಎಸ್ ಮ್ಯಾರಥಾನ್ ನಲ್ಲಿ ಕನ್ಯಾಡಿಯ ಸೇವಾಭಾರತಿ ತಂಡ

Photo Credit : News Kannada

ಬೆಳ್ತಂಗಡಿ:  ಬೆಂಗಳೂರಿನ   ಟಿಸಿಎಸ್  ಇತ್ತೀಚಿಗೆ ಏರ್ಪಡಿಸಿದ  ಮಾರಥನ್ ನಲ್ಲಿ ಕನ್ಯಾಡಿಯ   ಸೇವಾಭಾರತಿಯ  ತಂಡ  ಭಾಗವಹಿಸಿ ಯಶಸ್ವಿಗೊಳಿಸಿತ್ತು.

6 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರೊಡನೆ ಇತರ  15 ಮಂದಿಯ ತಂಡವೂ  ಭಾಗವಹಿಸಿತ್ತು.  6 ವಿಭಾಗಗಳಲ್ಲಿ ಒಂದಾಗಿದ್ದ ವಿಶೇಷಚೇತನರಿಗಾಗಿ ಮೀಸಲಿದ್ದ ಸ್ಪರ್ದೆ ಯಲ್ಲಿ ಭಾಗವಹಿಸಿದ್ದ ತಂಡವು ಉತ್ತಮ ನಿರ್ವಹಣೆ ತೋರಿರುವುದು ಶ್ಲಾಘನೀಯ.

ಕನ್ಯಾಡಿಯ  ಸೇವಾಭಾರತಿ (ರಿ)ಅಧ್ಯಕ್ಷ  ವಿನಾಯಕ ರಾವ್  ನೇತೃತ್ವದಲ್ಲಿ ಉಡುಪಿಯ ರಾಯನ್  ಫೆ ರ್ನಾಂಡಿಸ್, ಕನ್ಯಾಡಿ ಯ ಜಗದೀಶ ನಾಯ್ಕ, ಹಾಸನದ ವರುಣ್, ಉಡುಪಿಯ ಮದ್ವ ಮೂರ್ತಿ, ಅರಸಿನಮಕ್ಕಿಯ ಪುನೀತ್ ರೊಂದಿಗೆ ಕಾರ್ಯಕರ್ತರು, ಸಿಬ್ಬಂದಿಗಳು, ಹಾಗೂ ಸಮಿತಿ ಯ ಸದಸ್ಯರು ಭಾಗವಹಿಸಿದ್ದರು.

ಇದರೊಂದಿಗೆ ಅಧ್ಯಯನ ಪ್ರವಾಸ ವನ್ನು  ಜೋಡಿಸಿಕೊಂಡಿದ್ದು ಖ್ಯಾತ ಸರಕಾರೇತರ ಸ್ವಯಂ ಸೇವಾ ಸಂಸ್ಥೆ ಗಳನ್ನು  ಭೇಟಿಮಾಡಲಾಗಿತ್ತು. ಬೆಂಗಳೂರಿನ ಎ ಪಿ ಡಿ   ಹಾಗು ಮಾಗಡಿಯ ಕೆ ಆರ್ ಬಿ ಎ ಎ ಎಸ್  ಸಂಸ್ಥೆಯಿಂದ  ಬೆನ್ನುಹುರಿ ಅಪಘಾತ ದ ದಿವ್ಯಾಂಗರಿಗಾಗಿ ನಡೆಸಲ್ಪಡುವ  ಪುನಶ್ಚೇತನ ಕೇಂದ್ರಗಳನ್ನು ಸಂದರ್ಶಿಸಿ,ಅಲ್ಲಿಯ ಕಾರ್ಯಚಟುವಟಿಕೆ  ಹಾಗು ಅಭಿವೃದ್ಧಿ ಪ್ರಗತಿಯ ಬಗೆಗೆ  ಮಾಹಿತಿ ವಿನಿಮಯ ಮಾಡಿಕೊಳ್ಳ ಲಾಯಿತು.

See also  ಮುಂಡಾಜೆಯಲ್ಲಿ "ಶಾಂತಿವನ- ಮಹಾತ್ಮಾ ಗಾಂಧಿ ಕಟ್ಟೆ" ನಾಮಫಲಕ ಅನಾವರಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು