News Kannada
Wednesday, February 08 2023

ಮಂಗಳೂರು

ಸುಳ್ಳಮಲೆ ಗುಹಾತೀರ್ಥ ಉಳಿಸಲು ಬೃಹತ್ ಪ್ರತಿಭಟನೆ

Photo Credit :

ಬಂಟ್ವಾಳ :  ಬಿಜೆಪಿಯವರು ರಾಜಕೀಯದ ದೃಷ್ಟಿಯಿಂದ ಮಾತ್ರ ಧರ್ಮದ ವಿಚಾರ ಮಾತನಾಡುತ್ತಾರೆಂಬುದಕ್ಕೆ ಸುಳ್ಳಮಲೆ ನಿದರ್ಶನವಾಗಿದೆ. ಜಲಸನ್ನಿಧಿ ಹಾಗೂ ನಾಗಸಾನಿಧ್ಯ ಇರುವಲ್ಲಿ ಯಾವುದೇ ಸ್ಪೋಟಕಗಳನ್ನು ಬಳಸಬಾರದು. ಸಾನಿಧ್ಯ ಉಳಿಸುವ ನಿಟ್ಟಿನಲ್ಲಿ ಯಾವ ಅಷ್ಟಮಂಗಲದ ಅವಶ್ಯಕತೆಯೂ ಇಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಅವರು ಬುಧವಾರ ಅನಂತಾಡಿ ಗೋಳಿಕಟ್ಟೆಯಲ್ಲಿ ತುಂಬೆಕೋಡಿ ಗಣಿಗಾರಿಕೆಯ ವಿರುದ್ಧ ಮಾಣಿ ಮತ್ತು ಅನಂತಾಡಿ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ನಡೆದ “ಗಣಿಗಾರಿಕೆ ನಿಲ್ಲಿಸಿ, ಸುಳ್ಳಮಲೆ ಗುಹಾತೀರ್ಥ ಉಳಿಸಿ” ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.

ಸುಳ್ಳಮಲೆಯಲ್ಲಿ ಬಿಟ್ಟ ವೀಳ್ಯದೇಲೆ ಅಡಿಕೆ ಮೇಲೆ ಬರುವ ತುಂಬೆದಕೋಡಿಯಲ್ಲಿ ಗಣಿಗಾರಿಕೆಯಿಂದಾಗಿ  ಆ ಜಾಗ ಮುಚ್ಚಿಹೋಗುವ ಹಂತಕ್ಕೆ ತಲುಪಿದೆ. ಜಿಲ್ಲಾ ಪಂಚಾಯಿತಿಯ ರಸ್ತೆಯಲ್ಲಿ ನಿಗದಿಗಿಂತ ಅಧಿಕ ಭಾರವನ್ನು ಹೇರಿಕೊಂಡು ಲಾರಿಗಳು ಸಂಚರಿಸುತ್ತಿದೆ. ಕೊಡಾಜೆಯಲ್ಲಿರು ರೈಲ್ವೇ ಮೇಲ್ಸೇತುವೆಗೆ ಅಪಾಯ ಎದುರಾಗುವ ಸ್ಥಿತಿಗೆ ತಲುಪಿದೆ. ಸರ್ಕಾರ ಈ ಭಾಗದಲ್ಲಿ ನಡೆಯುವ ಗಣಿಗಾರಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು ಮತ್ತು ಸಮಾಜಕ್ಕೆ ಸಮಸ್ಯೆಯಾಗದಂತೆ ನೋಡಬೇಕು ಎಂದು ಆಗ್ರಹಿಸಿದರು.

ಪುತ್ತೂರು ಯುವಕಾಂಗ್ರೇಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಮುಖಂಡರಾದ  ಕಾವು ಹೇಮನಾಥ ಶೆಟ್ಟಿ, ಪದ್ಮನಾಭ ಕೋಟ್ಯಾನ್, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಎಂ. ಎಸ್. ಮಹಮ್ಮದ್, ಉಮಾನಾಥ ಶೆಟ್ಟಿ ಪೆರ್ನೆ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪಿಯೂಸ್ ಎಲ್ ರೋಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

ಮಾಣಿ ಗ್ರಾಮ ಪಂಚಾಯಿತಿ ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್ ವಂದಿಸಿದರು. ಮಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರೂಪಿಸಿದರು.

See also  ಕಾಂಗ್ರೆಸ್‌ ಕಟ್ಟಿ ಬೆಳೆಸಿರುವುದನ್ನು ಮಾರುವುದೇ ಬಿಜೆಪಿ ಕೆಲಸ: ಮಲ್ಲಿಕಾರ್ಜುನ ಖರ್ಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು