News Kannada
Monday, February 06 2023

ಮಂಗಳೂರು

ನವಮಂಗಳೂರು ಬಂದರಿಗೆ ಕಬ್ಬಿಣದ ಅದಿರು ಹರಿದು ಬರುವ ಬಗ್ಗೆ ಲೆಕ್ಕಾಚಾರ ಆರಂಭ

Photo Credit :

ಮಂಗಳೂರು: ರಾಜ್ಯದ ಕಬ್ಬಿಣದ ಅದಿರನ್ನು ರಫ್ತು ಮಾಡುವುದಕ್ಕೆ ಇದ್ದ ನಿರ್ಬಂಧಗಳನ್ನು ಸುಪ್ರೀಂಕೋರ್ಟ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ನವಮಂಗಳೂರು ಬಂದರಿಗೆ ಅದಿರು ಹರಿದು ಬರುವ ಬಗ್ಗೆ ಲೆಕ್ಕಾಚಾರ ಆರಂಭವಾಗಿದೆ .

ಇದೇ ವೇಳೆ ಕಬ್ಬಿಣದ ಅದಿರು ಖರೀದಿಗೆ ಈಗಿನ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಗ್ರಾಹಕರು ಸಿಗಬಹುದು ಎಂಬ ಸಂಶಯ ಕಾಡತೊಡಗಿದೆ . ಮುಖ್ಯ ಆಮದುದಾರ ದೇಶವಾಗಿರುವ ಚೀನಾ ದೊಂದಿಗೆ ಸಂಬಂಧ ಹದಗೆಡಲು ಇದಕ್ಕೆ ಕಾರಣ , ಹಿಂದೆ ಕಬ್ಬಿಣದ ಅದಿರನ್ನು ರಾಜ್ಯದ ನವಮಂಗಳೂರು ಬಂದರು ಬೇಲೆಕೇರಿ ಮತ್ತು ಕಾರವಾರ ಈ ಮೂರೂ ಬಂದರುಗಳಿಂದ ಚೀನಾ ಮತ್ತಿತರ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು .ಆಗ ಕರಾವಳಿಗೆ ಸಾವಿರಾರು ಕಬ್ಬಿಣದ ಅದಿರು ಸಾಗಣೆಯ ಟ್ರಕ್ಕುಗಳು ಬಳ್ಳಾರಿ ಹೊಸಪೇಟೆ ಕಡೆಯಿಂದ ಬರುತ್ತಿದ್ದವು ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಕೇಂದ್ರ ಸರಕಾರಗಳು ಕಬ್ಬಿಣದ ಅದಿರು ಗಣಿಗಾರಿಕೆಗೆ ನಿಷೇಧ ಹೇರಿದೆ ಅಷ್ಟೇ ಅಲ್ಲದೆ ಗಣಿಗಾರಿಕೆ ನಡೆಸಲಾಗಿದ್ದ ಅದಿರನ್ನು ರಫ್ತು ಮಾಡುವಂತಿಲ್ಲ ಎಂಬ ಆದೇಶಿಸಲಾಗಿತ್ತು. ಲಕ್ಷಗಟ್ಟಲೆ ಟನ್ ಅದಿರು ಇನ್ನೂ ಬಳ್ಳಾರಿ ಚಿತ್ರದುರ್ಗ ತುಮಕೂರು ಜಿಲ್ಲೆಗಳಲ್ಲಿ ಸೂಕ್ತ ಮಾರುಕಟ್ಟೆ ಲಭ್ಯವಾದರೆ ರಫ್ತು ಆರಂಭವಾಗುವ ಸಾಧ್ಯತೆ ಇದೆ .

ಅದಕ್ಕಾಗಿ ನವಮಂಗಳೂರು ಬಂದರು ಪ್ರಾಧಿಕಾರದಿಂದ ಪ್ರಯತ್ನ ಕೈಗೊಳ್ಳಲಾಗುವುದು .ಬಳ್ಳಾರಿಯಿಂದ ರೈಲು ಮತ್ತು ರಸ್ತೆ ಮೂಲಕ ಸರಕು ಸ್ವೀಕರಿಸಬಹುದು ನವ ಮಂಗಳೂರು ಪಾಲಿಕೆ ಯಲ್ಲಿ ಬೃಹತ್ ಯಾರ್ಡ್ ಗಳಿದ್ದು ಅವುಗಳಲ್ಲಿ ಅದಿರು ಇರಿಸಿ ಬಳಿಕ ರಫ್ತು ಮಾಡುವುದಕ್ಕೆ ಅವಕಾಶಗಳಿವೆ ಎನ್ನುತ್ತಾರೆ ಅಧಿಕಾರಿಗಳು .

ಸುಪ್ರೀಂಕೋರ್ಟ್ ಆದೇಶದ ಸರಿಯಾದ ಅಧ್ಯಯನ ನಡೆಸಿದ ಬಳಿಕ ಬಂದರು ಪ್ರಾಧಿಕಾರದ ಆಡಳಿತ ಈ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ. ಈಗಿನ ಮಾಹಿತಿಯ ಅನ್ವಯ ಎಲ್ಲ ಪ್ರಕ್ರಿಯೆ ಮುಗಿದು ರಫ್ತು ಆರಂಭವಾಗಲು ಇನ್ನೂ 3ತಿಂಗಳ ಕಾಲಾವಕಾಶ ಬೇಕಾಗಬಹುದು.

See also  ಮಂಗಳೂರು ಪೊಲೀಸರ ಕಾರ್ಯಾಚರಣೆ : ಸರಗಳ್ಳತನ ರೊಂದಿಗೆ ಖರೀದಿದಾರರು ಅರೆಸ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು