News Kannada
Friday, January 27 2023

ಮಂಗಳೂರು

ಮಳಲಿ ಮಸೀದಿಯ ಸರ್ವೇ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ: ಶಾಸಕ ಭರತ್ ರಾಜ್ ಶೆಟ್ಟಿ

Photo Credit :

ಮಂಗಳೂರು:  ಮಳಲಿಯ ಮಸೀದಿ ನವೀಕರಣದ ವೇಳೆ ಪತ್ತೆಯಾದ ದೇಗುಲ ಶೈಲಿಯ ವಿಚಾರದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ದೈವ ಶಕ್ತಿ ಇತ್ತು ಎಂದು ಗೋಚರವಾಗಿದೆ ಈ ಪ್ರದೇಶದ ಬಗ್ಗೆ ಸರ್ವೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಶಾಸಕ ಭರತ್ ರಾಜ್ ಶೆಟ್ಟಿ ಹೇಳಿದರು

ಮಾಜಿ ಸಿಎಂ ಕುಮಾರಸ್ವಾಮಿಯವರು ಜವಾಬ್ದಾರಿಯುತವಾಗಿ ನಡೆದು ಕೊಂಡರೆ ಒಳ್ಳೆಯದು ತಾಂಬೂಲ ಪ್ರಶ್ನೆಯ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅವರಿಗೆ ದೊಡ್ಡ ದೊಡ್ಡ ಯಾಗಗಳನ್ನು ಮಾಡಿದ್ದಾರೆ , ಅವರು ಕೇರಳಕ್ಕೆ ಹೋಗಿ ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಎಂಬುದು ಗೊತ್ತಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು .

ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು ಮಸೀದಿಯ ನವೀಕರಣದ ವೇಳೆ ಪತ್ತೆಯಾದ ದೇಗುಲ ಶೈಲಿಯ ವಿಚಾರದಲ್ಲಿ ನಡೆದ ತಾಂಬೂಲ ಪ್ರಶ್ನೆಯಲ್ಲಿ ದೈವ ಶಕ್ತಿ ಇತ್ತು ಎಂದು ಗೋಚರವಾಗಿದೆ .

ಈ ಪ್ರದೇಶದ ಬಗ್ಗೆ ಸರ್ವೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ , ಇತಿಹಾಸ ಪುಸ್ತಕಗಳಲ್ಲೂ ಇಲ್ಲಿ ಸಾಕಷ್ಟು ದೈವದೇವರುಗಳ ಸಾನಿಧ್ಯ ಎಂಬುದಿದೆ ಆದರೆ ಅವುಗಳು ಗೋಚರವಾಗುತ್ತಿಲ್ಲ ಇದು ಸತ್ಯಾಸತ್ಯತೆ ತಿಳಿಯುವ ಪ್ರಯತ್ನವಾಗಿದ್ದು ಯಾರ ವಿರುದ್ಧ ಹೋರಾಟವಲ್ಲ ಎಂದು ಹೇಳಿದರು .

ಈ ವಿಚಾರದಲ್ಲಿ ರಾಜಕೀಯ ಬಣ್ಣ ಬಳಿಯುವುದು ಬೇಡ ಎರಡು ತಿಂಗಳ ಹಿಂದೆ ಈ ವಿಚಾರ ಬೆಳಕಿಗೆ ಬಂದಿದ್ದು ಆಗ ಯಾವುದೇ ರೀತಿಯ ತೊಂದರೆ ಇರಲಿಲ್ಲ ಇದೀಗ ಈ ವಿಚಾರದಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿರುವುದರಿಂದ ಒಂದು ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಗಿದೆ ,ಚುನಾವಣೆಗಾಗಿ ಈ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಹೇಳುತ್ತಿರುವುದು ಸರಿಯಲ್ಲ ಮಸೀದಿಯ ನವೀಕರಣದ ಮಾಡುವಾಗ ದೈವದ ದೇವಳದ ಶೈಲಿ ಕಟ್ಟಡ ಕಂಡುಬಂದ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳು ಬಂದೇ ಬರುತ್ತದೆ ಎಂದರು.

ಮಳಲಿಯಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ಯಾವುದೇ ಸಮಸ್ಯೆಗಳಿಲ್ಲ ಈ ಗೊಂದಲದ ಬಗ್ಗೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದರು.

ಮಳಲಿ ಮಸೀದಿಯ ಸರ್ವೇ ನಡೆಯಬೇಕು , ಜನರು ಸತ್ಯ ತಿಳಿಯಲಿ: ಡಾಕ್ಟರ್ ಸುರೇಂದ್ರ ಕುಮಾರ್ ಜೈನ್

ಮಳಲಿಯಲ್ಲಿ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ . ಅದಕ್ಕೆ ಈಗ ಪುರಾವೆಗಳು ಸಿಕ್ಕಿವೆ ಹೀಗಾಗಿ ಮಂಗಳೂರಿನ ಜಮಾ ಮಸೀದಿಯಲ್ಲಿ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ಸರ್ವೆ ನಡೆಯಬೇಕು.

ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಯಬೇಕು ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ಸುರೇಂದ್ರಕುಮಾರ್ ಜೈನ್ ಒತ್ತಾಯಿಸಿದ್ದಾರೆ .

ಈ ಬಗ್ಗೆ ಮಾತನಾಡಿದ ಅವರು ಮಂಗಳೂರಿನ ಮಸೀದಿ ಜಾಗದಲ್ಲಿ ಮಂದಿರ ಬಗ್ಗೆ ಇದೀಗ ತಿಳಿದುಬಂತು .ಅಲ್ಲಿ ಮೊದಲಿದ್ದ ಮಂದಿರವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎನ್ನುವುದಕ್ಕೆ ಸಾಕ್ಷಿ ದೊರೆತಿದೆ ಎಂದಿದ್ದಾರೆ.

See also  ವಿಟ್ಲ: 'ಪದ್ಮಶ್ರೀ' ವಿಜೇತ ಮಹಾಲಿಂಗ ನಾಯ್ಕ ಮನೆಗೆ ತಹಶೀಲ್ದಾರ್ ಭೇಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು