News Kannada
Friday, July 01 2022

ಮಂಗಳೂರು

ಬೆಳ್ತಂಗಡಿ: ನೂತನ ನ್ಯಾಯಾಧೀಶರುಗಳಿಗೆ ಸ್ವಾಗತ ಕಾರ್ಯಕ್ರಮ - 1 min read

Photo Credit :

ಬೆಳ್ತಂಗಡಿ: ಇಲ್ಲಿನ ಹಿರಿಯ ವಿಭಾಗದ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾಗಿ ವರ್ಗಾವಣೆಗೊಂಡು ಆಗಮಿಸಿದ ದೇವರಾಜು ಹೆಚ್.ಎಮ್. ಮತ್ತು ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶರಾಗಿ ವರ್ಗಾವಣೆಗೊಂಡು ಆಗಮಿಸಿದ ಸಂದೇಶ್, ಕೆ ರವರುಗಳಿಗೆ ಬೆಳ್ತಂಗಡಿ ವಕೀಲರ ಸಂಘದ ಪರವಾಗಿ ಸ್ವಾಗತ ಕಾರ್ಯಕ್ರಮವು ಇತ್ತೀಚೆಗೆ ವಕೀಲರ ಭವನದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಪ್ರಸಾದ್, ಕೆ.ಎಸ್‌ರವರು ನೂತನ ನ್ಯಾಯಾಧೀಶರುಗಳಿಗೆ ಸಂಘದ ಪರವಾಗಿ ಹೂಗುಚ್ಚ ನೀಡಿ ಸ್ವಾಗತಿಸಿ ಬರಮಾಡಿಕೊಂಡರು.

ಸ್ವಾಗತ ಸ್ವೀಕರಿಸಿ ಮಾತನಾಡಿದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ದೇವರಾಜು ಹೆಚ್. ಎಮ್‌.ರವರು ನ್ಯಾಯಾದಾನದ ಪ್ರಕ್ರಿಯೆಯಲ್ಲಿ ವಕೀಲರು ಮತ್ತು ನ್ಯಾಯಾಧೀಶರುಗಳು ಒಂದು ಗಾಡಿಯ ಎರಡು ಚಕ್ರಗಳಿದ್ದಂತೆ, ಪರಸ್ಪರ ಸಹಕಾರದಿಂದ ನ್ಯಾಯ ಒದಗಿಸಲು ಪ್ರಯತ್ನಿಸೋಣ ಎಂದು ಎಲ್ಲರ ಸಹಕಾರ ಕೋರಿದರು.

ನೂತನ ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಸಂದೇಶ್, ಕೆ. ರವರು ಸಹ ಎಲ್ಲರ ಸಹಕಾರಕೋರಿದರು. ಹಿರಿಯ ನ್ಯಾಯಾವಾದಿ ರಾಧಾಕೃಷ್ಣ, ವೈ, ಸಂಘದ ಪರವಾಗಿ ಸ್ವಾಗತ ಭಾಷಣಗೈದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಗಣೇಶ್ ಗೌಡ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶೈಲೇಶ್‌ ಆರ್. ಟೋಸರ್ ಸ್ವಾಗತಿಸಿ, ಕೋಶಾದಿಕಾರಿ ಹರಿಪ್ರಸಾದ್ ಪಿ.ಎನ್ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಮನೋಹರ್‌ಕುಮಾರ್, ಇಳಂತಿಲ ಕಾರ್ಯಕ್ರಮ ನಿರೂಪಿಸಿದರು.

See also  ತಪೋವನ' ಆರೋಗ್ಯ ಕೇಂದ್ರ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು