ಮಂಗಳೂರು: ಜೆಪ್ಪು ಆಶ್ರಮದ ಪಾಲಕಾರಾದ ಸಂತ ಆಂತೋನಿಯವರ ವಾರ್ಷಿಕ ಮಹೋತ್ಸವ ಬಹು ಅದ್ದೂರಿಯಾಗಿ ಜೂ. 13ರಂದು ಜೆಪ್ಪು ಆಶ್ರಮದಲ್ಲಿ ಹಾಗೂ ಮಿಲಾಗ್ರಿಸ್ ಚರ್ಚಿನಲ್ಲಿ ಜರುಗಿತು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾರವರು, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಧ್ಯಕ್ಷರಾದ ಅತೀ ವಂದನೀಯ ಡಾಕ್ಟರ್ ಅಲೋಶಿಯಸ್ ಪಾವ್ಲ್ ಡಿ’ಸೋಜ ಹಾಗೂ ಬರೇಲಿ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಅತೀ ವಂದನೀಯ ಡಾಕ್ಟರ್ ಇಗ್ನೇಶಿಯಸ್ ಡಿ’ಸೋಜ ರವರು ಸಂಭ್ರಮದ ದಿವ್ಯಬಲಿಪೂಜೆಯನ್ನು ಅರ್ಪಿಸಿದರು.
ಸಂತ ಆಂತೋನಿ ಆಶ್ರಮ ಪ್ರಾರಂಭವಾಗಿ 124 ವರ್ಷಗಳು ಕಳೆದು, ಇದೀಗ ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ಹಣಿಯಾಗುತ್ತಿದೆ. ಇದರ ಸಲುವಾಗಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಅ|ವ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾರವರು ಜೆಪ್ಪು ಆಶ್ರಮದ ಶತಮಾನೋತ್ತರ ಬೆಳ್ಳಿ ಹಬ್ಬದ ಲಾಂಛನವನ್ನು ಅನಾವರಣಗೊಳಿಸಿದರು.
ಬಿಷಪರು ಮತಾನಾಡಿ ಸಂತ ಆಂತೋನಿಯವರು ಮುಖಾಂತರ ದೇವರು ಸುರಿಸಿದ ಎಲ್ಲಾ ಕೃಪವರಗಳಿಗಾಗಿ ದೇವರ ಮಹಿಮೆಯನ್ನು ಸಾರಿಸಿದರು. 124 ವರ್ಷಗಳಲ್ಲಿ ಜೆಪ್ಪು ಆಶ್ರಮವು ಅನೇಕ್ ನಿರ್ಗತಿಕ ಬಂಧುಗಳಿಗೆ ಆಶ್ರಯ ತಾಣವಾಗಿ ಬೆಳೆದಿದೆ. ಆಶ್ರಮದ ಎಲ್ಲಾ ದಾನಿಗಳ ಉಪಕಾರ ಸ್ಮರಿಸಿದರು. ಬಲಿಪೂಜೆಯಲ್ಲಿ ಅನೇಕ ಧರ್ಮಗುರುಗಳು ಸಹಸ್ರಾರು ಭಕ್ತಾಧಿಗಳು ಪಾಲ್ಗೊಂಡರು.
ಜೆಪ್ಪು ಆಶ್ರಮದ ನಿರ್ದೇಶಕರಾದ ವಂದನೀಯ ಗುರುಗಳು ಜೆ.ಬಿ. ಕ್ರಾಸ್ತ, ಸಹಾಯಕ ನಿರ್ದೇಶಕರಾದ ವಂದನೀಯ ಗುರು ರೂಪೇಶ್ ತಾವ್ರೊ ಹಾಗೂ ವಂದನೀಯ ಗುರು ಲ್ಯಾರಿ ಪಿಂಟೊ ಎಲ್ಲರನ್ನು ಸ್ಮರಿಸಿದರು. ಹಬ್ಬದ ಸಲುವಾಗಿ ಹಲವಾರು ಬಲಿಪೂಜೆಯನ್ನು ಹಮ್ಮಿಕೊಳ್ಳಲಾಗಿದೆ. ಜೆಪ್ಪು ಆಶ್ರಮದಲ್ಲಿ ಬೆಳಿಗ್ಗೆ 6 ಗಂಟೆಗೆ ಹಾಗೂ 11 ಗಂಟೆಗೆ ಹಾಗೂ ಸಾಯಾಂಕಾಲ 4ಗಂಟೆಗೆ ಮಾಲಯಾಳಂ ಭಾಷೆಯಲ್ಲಿ ಬಲಿಪೂಜೆಯನ್ನು ಅರ್ಪಿಸಲಾಯಿತು. ಎಲ್ಲಾ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಯಿತು.