News Kannada
Thursday, July 07 2022

ಮಂಗಳೂರು

ಚಂದ್ರಹಾಸ ಬಳಂಜ ಅವರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯಿಂದ ಗೌರವ - 1 min read

Photo Credit :

ಬೆಳ್ತಂಗಡಿ: ಯುವ ಸಾಹಿತಿ, ಬಹುಮುಖ ಪ್ರತಿಭೆ ಚಂದ್ರಹಾಸ ಬಳಂಜರವರ ಅಂತ್ಯ-ಆರಂಭಕ್ಕೊಂದು ಮುನ್ನುಡಿ ಎಂಬ ಪುಸ್ತಕಕ್ಕೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆ ಗೌರವಿಸಿದೆ.

ಬಹುಮುಖ ಪ್ರತಿಭೆಯಾಗಿ ಗುರುತಿಸಿಕ್ಕೊಂಡಿರುವ ಚಂದ್ರಹಾಸ ಅವರು ಒಬ್ಬ ಯುವ ಸಾಹಿತಿ, ವಾಗ್ಮಿ, ನಿರೂಪಕ, ಹಾಡುಗಾರ, ನೃತ್ಯಪಟು, ನಟ ಮತ್ತು ತರಬೇತುದಾರ.
ಸಾಂಸ್ಕ್ರತಿಕ‌ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಇವರು ಹಲವಾರು ಕಾರ್ಯಕ್ರಮಗಳನ್ನ ಸಂಯೋಜಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಎರಡು ಪುಸ್ತಕಗಳನ್ನ ಬಿಡುಗಡೆ ಮಾಡಿದ್ದು, ಹಲವಾರು ಲೇಖನಗಳು ಪ್ರಕಟಗೊಂಡಿದೆ.

ವಿಶೇಷವಾಗಿ ಸಾಹಿತ್ಯ ಲೋಕದಲ್ಲಿ ಕನ್ನಡ ವರ್ಣಮಾಲೆಯನ್ನಿಟ್ಟುಕ್ಕೊಂಡು ಪ್ರತಿಯೊಂದು ವರ್ಣಮಾಲೆ ಅಕ್ಷರಕ್ಕು ಒಂದೊಂದು ಕವನ ರಚಿಸಿ, ಕವನದ ಎಲ್ಲ ಸಾಲುಗಳ ಪ್ರಥಮ ಅಕ್ಷರ ಒಂದೇ ಬರುವಂತೆ ಜೋಡಿಸಿ ಬಹಳ ವಿಭಿನ್ನವಾಗಿ ಬರೆದ ಅಂತ್ಯ-ಆರಂಭಕ್ಕೊಂದು ಮುನ್ನುಡಿ ಪುಸ್ತಕ ಸಾಹಿತ್ಯ ಲೋಕದ ಅತ್ಯಂತ ವಿಭಿನ್ನ ಪುಸ್ತಕವೆಂದು ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಇವರನ್ನು ಗುರುತಿಸಿದೆ.

ಇದೇ ಮೊದಲ ಬಾರಿಗೆ ಇಂತಹ ಪುಸ್ತಕ ಪ್ರಕಟವಾಗಿದ್ದು ಈ ಪುಸ್ತಕವನ್ನ ಯುವವಾಹಿನಿ‌ (ರಿ) ಬೆಳ್ತಂಗಡಿಯು ಪ್ರಕಟಿಸಿದೆ.

ಇವರ ಬಹುಮುಖ ಸಾಧನೆಗೆ ಈಗಾಗಲೇ ದ.ಕ ಜಿಲ್ಲಾ ಯುವ ಸಾಧಕ ಪ್ರಶಸ್ತಿ, ಪ್ರಭಾಕರ ನೀರುಮಾರ್ಗ ಯುವ ಸಾಹಿತಿ ಪ್ರಶಸ್ತಿ , ಎ.ಪಿ‌.ಜೆ ಅಬ್ದುಲ್ ಕಲಾಂ ಪುರಸ್ಕಾರ, ಜೆಸಿಐ ಸಾಧನಾ ಶ್ರೀ ಪ್ರಶಸ್ತಿ, ಸಾಂಸ್ಕೃತಿಕ ಚೇತನ ಪುರಸ್ಕಾರ ಮತ್ತು ರಾಜ್ಯ, ರಾಷ್ಟ್ರ ಮಟ್ಟದ ಹಲವು ಪ್ರಶಸ್ತಿಗಳು ಲಭಿಸಿವೆ.

ಕಲರ್ಸ್ ಕನ್ನಡದ ರೀಯಾಲಿಟಿ ಶೋಗಳಲ್ಲಿ ಕ್ರೀಯೆಟಿವ್ ಆಗಿ ಕರ್ತವ್ಯ ನಿರ್ವಹಿಸಿರುವ ಇವರು ಜೆಸಿಐ ಬೆಳ್ತಂಗಡಿ ಮಂಜುಶ್ರೀ, ಯುವವಾಹಿನಿ ಬೆಳ್ತಂಗಡಿಯ ನಿರ್ದೇಶಕರಾಗಿ, ಬಳಂಜ ಬಿಲ್ಲವ ಸಂಘದ ಸಕ್ರೀಯ ಸದಸ್ಯರಾಗಿದ್ದಾರೆ.

ಇವರು ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಮನೆಯ ಪ್ರಗತಿಪರ ಕೃಷಿಕರಾದ ಶ್ರೀಧರ ಪೂಜಾರಿ ಮತ್ತು ಸುಶೀಲ ದಂಪತಿ ಪುತ್ರ, ಸುದ್ದಿ ಬಿಡುಗಡೆ ವಾರಪತ್ರಿಕೆ ವರದಿಗಾರ ಸಂತೋಷ್ ಪಿ ಕೋಟ್ಯಾನ್ ಬಳಂಜ ಅವರ ಸಹೋದರ.

See also  ಕಾವೇರಿಗೆ ನಿತ್ಯ ಆರತಿ ಬೆಳಗುವಂತಾಗಬೇಕು: ಪ್ರೀತಮ್ ಶೆಟ್ಟಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು