News Kannada

ಮಂಗಳೂರು

ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತದ ವಾರ್ಷಿಕ ಮಹಾಸಭೆ - 1 min read

Photo Credit : By Author

ಬಂಟ್ವಾಳ:  ತಾಲೂಕು  ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತವು 2021-2022ನೇ ಸಾಲಿನಲ್ಲಿ  8.33 ಕೋಟಿ ರೂ. ವ್ಯವಹಾರ ನಡೆಸಿ, 21 ಲಕ್ಷ  ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ. ರವೀಂದ್ರ ಕಂಬಳಿ ತಿಳಿಸಿದ್ದಾರೆ.

ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  ಮಂಗಳವಾರ ನಡೆದ ನಿಯಮಿತದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಶೇ.15  ಡಿವಿಡೆಂಟ್ ನ್ನು ಘೋಷಿಸಿದರು.

ಸಂಘವು ಪ್ರಸ್ತುತ 21.45 ಕೋಟಿ ಠೇವಣಿ ಹೊಂದಿದ್ದು,23.05 ಕೋಟಿ ಪಾಲು ಬಂಡವಾಳವಿದೆ, ಯಾವುದೇ ಬ್ಯಾಂಕಿನಲ್ಲಿ ಸಾಲವನ್ನು ಹೊಂದಿರುವುದಿಲ್ಲ ,ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ ಸಹಕಾರಿ ಸಂಘದಲ್ಲಿ 18.47ಕೋಟಿ ರೂ ಠೇವಣಿ ಹೂಡಿದೆ ಎಂದು ವಿವರಿಸಿದರು.

ಸಂಘವು 2021-2022ನೇ ಸಾಲಿನಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲು ‘ಎ’ ವರ್ಗವನ್ನು ಪಡೆದುಕೊಂಡಿದ್ದು,ತಾಲೂಕಿನ 60℅ ಪಡಿತರ ಸಾಮಾಗ್ರಿಗಳನ್ನು ನ್ಯಾಯಬೆಲೆ ಅಂಗಡಿಗಳಿಗೆ ವಿತರಿಸುತ್ತಿದೆ, ಬಂಟ್ವಾಳ ಶಾಖೆಯಲ್ಲಿ ರೈತರ ಅನುಕೂಲಕ್ಕಾಗಿ ಕ್ರಿಮಿನಾಶಕ ,ಕೃಷಿ ಉಪಕರಣ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ಮಾರಾಟ ಮಾಡುವ ವ್ಯವಸ್ಥೆಯನ್ನು ಹೊಂದಿರುತ್ತದೆ.

ಬಂಟ್ವಾಳದಲ್ಲಿ ಬ್ಯಾಂಕಿಂಗ್‌ ವ್ಯವಹಾರ ಹಾಗೂ ನ್ಯಾಯಬೆಲೆ ಅಂಗಡಿಯ ಮುಖಾಂತರ ಜನರಿಗೆ ಪಡಿತರ ವಿತರಣಾ ವ್ಯವಸ್ಥೆಯನ್ನು ಹೊಂದಿದೆ ಎಂದು ಅಧ್ಯಕ್ಷ ರವೀಂದ್ರ ಕಂಬಳಿ‌ ತಿಳಿಸಿದರು.ಬಿ.ಸಿ.ರೋಡ್ ಮತ್ತು ತುಂಬೆಯಲ್ಲಿ ಸ್ವಂತ ಕಟ್ಟಡ ಖರೀದಿಸಿ ಬಾಡಿಗೆಗೆ ನೀಡಲಾಗಿದೆ.ಫರಂಗಿಪೇಟೆ ಶಾಖೆಯಲ್ಲಿ ವಿವಿಧ ಸಾಲಸೌಲಭ್ಯ,ಇ-ಸ್ಟಾಂಪಿಂಗ್ ಹಾಗೂ ನ್ಯಾಯಬೆಲೆ  ಅಂಗಡಿ ಮೂಲಕ ಪಡಿತರ ವಿತರಣಾ ವ್ಯವಸ್ಥೆಯು ಹೊಂದಿದೆ ಎಂದು ಅವರು ಹೇಳಿದರು.

ಸಂಘದ ಉಪಾಧ್ಯಕ್ಷೆ ಶಶಿಕಲಾ ಉಡುಪ,ನಿರ್ದೇಶಕರಾದ ಉಮೇಶ್ ಪೂಜಾರಿ,ರಾಜೇಶ್ ಶೆಟ್ಟಿ,ಜ್ಞಾನೇಶ್ವರ ಪ್ರಭು,ಮನೋರಾಜ್ ಎ. ,ಪಿ.ವೆಂಕಟೇಶ್ ನಾವಡ,ರೋಹಿನಾಥ್ ಕೆ.,ಬಿ.ಟಿ.ನಾರಾಯಣ ಭಟ್, ಸುಂದರ ಭಂಡಾರಿ, ಪದ್ಮನಾಭ ಕಿದೆಬೆಟ್ಟು, ರತ್ನ, ಪೂವಪ್ಪ, ರಾಮನಾಯ್ಕ ವೇದಿಕೆಯಲ್ಲಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು.ಧರ್ಮಪಾಲ ಭಂಡಾರಿ ಗತವರ್ಷದ ವರದಿ ವಾಚಿಸಿ,ಕಾರ್ಯಕ್ರಮ ನಿರೂಪಿಸಿದರು.ನಿರ್ದೇಶಕ ವೆಂಕಟ್ರಾಯ ಪ್ರಭು ವಂದಿಸಿದರು.

See also  ಬಂಟ ಸಮುದಾಯವನ್ನು 2ಎ ಮೀಸಲಾತಿಗೆ ಸೇರಿಸಲು   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ   ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು