ಪುತ್ತೂರು: ಪುತ್ತೂರು ನವತೇಜ ಮತ್ತು ಜೇಸಿ ಸಂಸ್ಥೆಗಳು ಜಂಟಿಯಾಗಿ ಜೂ.25 ಮತ್ತು 26ರಂದು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾದ ಬಳಿಯ ಸುಕೃತೀಂದ್ರ ಸಭಾಭವನದಲ್ಲಿ ‘ಹಲಸು ಮತ್ತು ಹಣ್ಣು ಮೇಳ’ ನಡೆಯಲಿದೆ.
ಮೇಳದಲ್ಲಿ ಹಲಸು ಮಾತ್ರವಲ್ಲದೆ ಇತರ ಹಣ್ಣುಗಳ ಪ್ರದರ್ಶನಗಳಿವೆ. ತಿಪಟೂರಿನ ಪ್ರಸಿದ್ಧ ಕೆಂಪು ಹಲಸು ಮೇಳದಲ್ಲಿ ಕಾಣಸಿಗಲಿದೆ. ವಿವಿಧ ವಿಶೇಷ ಜಾತಿಯ ಹಲಸಿನ ಗಿಡ ಕೊಳ್ಳಬಹುದು ಜೊತೆಗೆ ಹಲಸು ತುಂಡರಿಸುವ ಸಾಧನವು ಇಲ್ಲಿ ಲಭ್ಯ ಇರುತ್ತದೆ.
ಹಲಸಿನ ಮೇಳದಲ್ಲಿ ಸಿಗುವ ವಿವಿಧ ಖಾದ್ಯಗಳು:
ಹಲಸಿನ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಯ, ಜ್ಯೂಸ್, ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್‌ಕ್ರೀಂ, ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆ ಖಾದ್ಯಗಳಲ್ಲಿ ಹೈಲೈಟ್ ಸೇರಿದಂತೆ ಹತ್ತಾರು ಬಗೆಯನ್ನು ಸವಿಯಲು ಅವಕಾಶವಿದೆ.