News Kannada
Tuesday, July 05 2022

ಮಂಗಳೂರು

ಹಿಜಾಬ್ ವಿವಾದ: ಟಿ.ಸಿ ಪಡೆದ ಮಂಗಳೂರು ವಿವಿ ಕಾಲೇಜಿನ ಓರ್ವ ವಿದ್ಯಾರ್ಥಿನಿ - 1 min read

Photo Credit :

ಮಂಗಳೂರು: ಮಂಗಳೂರು ವಿವಿಯ ಅಧೀನಕ್ಕೊಳಪಟ್ಟ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿನಿ ಬೇರೆ ಕಾಲೇಜಿಗೆ ಹೋಗಲು ಟಿಸಿ ಪಡೆದಿದ್ದಾಳೆ.

ಕಳೆದೊಂದು ತಿಂಗಳಿನಿಂದ ಈ ಕಾಲೇಜಿನಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರು ಅವಕಾಶ ಕೋರಿದ್ದರು ಈ ಮೂಲಕ ಭಾರೀ ವಿವಾದ ಸೃಷ್ಟಿಯಾಗಿತ್ತು ಪ್ರತಿಭಟನೆಯೂ ನಡೆದಿತ್ತು.

ಆದರೆ ಕಾಲೇಜು ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಿರಲಿಲ್ಲ ಈ ನೆಲೆಯಲ್ಲಿ ಈ ವಿದ್ಯಾರ್ಥಿನಿಯರು ಕಾಲೇಜು ಗ್ರಂಥಾಲಯದಲ್ಲಿ ಉಳಿದು ಹೋಗುತ್ತಿದ್ದರು ,ಆದರೆ ಆ ಬಳಿಕ ಅಲ್ಲಿಯೂ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಡಿಸಿಯವರ ಮೊರೆ ಹೊಕ್ಕಿದ್ದರು ಆದರೂ ಯಾವುದೇ ಪ್ರಯೋಜನವಾಗಿಲ್ಲ ಈ ಹಿನ್ನೆಲೆಯಲ್ಲಿ ಐವರು ವಿದ್ಯಾರ್ಥಿನಿಯರು ಟಿಸಿ ಪಡೆದು ಬೇರೆಡೆ ಹೋಗುತ್ತಾರೆ ಎಂಬ ವಿಚಾರ ಕಳೆದ 2ದಿನಗಳ ಹಿಂದೆ ಕೇಳಿಬಂದಿತ್ತು ಇದೀಗ ಓರ್ವ ವಿದ್ಯಾರ್ಥಿನಿ ಬೇರೆ ಕಾಲೇಜಿಗೆ ತೆರಳಲು ಟಿಸಿ ಪಡೆದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ .ಆಕೆ ಹಿಜಾಬ್ ಸಮವಸ್ತ್ರದ ಭಾಗವಾಗಿರುವ ಕಾಲೇಜಿಗೆ ತೆರಳಲು ಮುಂದಾಗಿದ್ದಾಳೆ ಅದೇ ರೀತಿ ಮೂವರು ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ಹೋಗಲು ಎನ್ ಒಸಿ ಪಡೆದಿದ್ದಾರೆ.

See also  ತಾನು ಓದುತ್ತಿದ್ದ ಕಾಲೇಜೇ ಸರಿ ಇಲ್ಲ ಎಂದು ಆತ್ಮಹತ್ಯೆಗೆ ಶರಣಾದ ಯುವಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು