ಬಂಟ್ವಾಳ : ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯ ಕೇರಳ-ಕರ್ನಾಟಕ ಗಡಿಪ್ರದೇಶವಾದ ಸಾರಡ್ಕ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ರಸ್ತೆ ಬ್ಲಾಕ್ , ಇದೇ ವೇಳೆ ಇಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರನೋರ್ವ ಸ್ವಲ್ಪದರಲ್ಲೇ ಪಾರಾಗಿದ್ದು, ಬೈಕ್ ಮಣ್ಣಿನಡಿಯಲ್ಲಿ ಸಿಲುಕಿತ್ತು.
ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಗೆ ಗುಡ್ಡ ಕುಸಿದು ಬಿದ್ದ ಪರಿಣಾಮ ಕಾಸರಗೋಡು – ವಿಟ್ಲ ಮದ್ಯೆ ಸಂಪರ್ಕ ಕಡಿತಗೊಂಡಿದೆ.
ಸ್ಥಳದಲ್ಲಿ ಮಣ್ಣು ತೆರವು ಕಾರ್ಯಚರಣೆ ರಾತ್ರಿವರೆಗೂ ನಡೆಯುತ್ತಿತ್ತು.