ಮಂಗಳೂರು: ಮುಸ್ಲಿಂ ಜಸ್ಟಿಸ್ ಫೋರಂ ಇದರ ಜುಲೈ ತಿಂಗಳ ಸಭೆಯ ನಿರ್ಣಯದಂತೆ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸಮಾಜಘಾತಕ ಶಕ್ತಿಗಳಿಗೆ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬಾರದಾಗಿ ಮನವಿ ಪತ್ರ ಸಲ್ಲಿಸಲಾಯಿತು.
ಸಮಾಜದ ಸ್ವಾಸ್ಥ್ಯ ಕಾಪಾಡಬೇಕೆಂಬ ದೃಷ್ಟಿಯಿಂದ ಮುಸ್ಲಿಂ ಜಸ್ಟಿಸ್ ಅಧ್ಯಕ್ಷರಾದ ಇರ್ಷಾದ್ ಯು ಟಿ ನಿರ್ದೇಶನದ ಪ್ರಕಾರ ಮುಸ್ಲಿಂ ಜಸ್ಟೀಸ್ ಫೋರಂ ಉಪಾಧ್ಯಕ್ಷರಾದ ಅಲಿ ಹಸನ್ ಮತ್ತು ಇಕ್ಬಾಲ್ ಸಾಮಾನಿಗೆ, ಪ್ರಧಾನ ಕಾರ್ಯದರ್ಶಿಗಳಾದ ವಹಾಬ್ ಕುದ್ರೋಳಿ, ಸದಸ್ಯರಾದ ಮುಸ್ತಫಾ ಹರೇಕಳ,ಇದ್ದಿಕುಂಙಿ, ಆಸೀಫ್ ಬೆಂಗ್ರೆ, ಇಮ್ರಾನ್ ಎ ಆರ್ ಸಮಕ್ಷಮದಲ್ಲಿ ಮನವಿಯನ್ನು ಸಮರ್ಪಿಸಲಾಯಿತು.