News Kannada
Wednesday, November 29 2023
ಮಂಗಳೂರು

ಕಿನ್ನಿಗೋಳಿ: ದ್ವೀಪದಂತಾದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶುಂಠಿಪಾಡಿ

Shunthipadi under Aikala Grama Panchayath of The Island
Photo Credit : News Kannada

ಕಿನ್ನಿಗೋಳಿ: ನಿರಂತರ ಮಳೆಯಿಂದಾಗಿ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಶುಂಠಿಪಾಡಿಯಲ್ಲಿ ಶಾಂಭವಿ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ‌ ಈ ಭಾಗದ ಸುಮಾರು 50 ಕುಟುಂಬಗಳು ಹೊರಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುವಂತಾಗಿದೆ.

ಶುಂಠಿಪಾಡಿ ಸದ್ಯ ದ್ವೀಪದಂತಾಗಿದೆ. ಮಳೆಯಿಂದಾಗಿ ಇಲ್ಲಿಗೆ ಸಂಪರ್ಕ‌ ಕಲ್ಪಿಸುವ ರಸ್ತೆ ಪ್ರತೀ ವರ್ಷದ ಮಳೆಗಾಲದಲ್ಲಿ ಮುಳುಗುತ್ತಿರುತ್ತದೆ. ಈ ರಸ್ತೆ ಕುದ್ರಿಪದವು ಸಂಪರ್ಕಿಸುತ್ತದೆ. ಅಲ್ಲಿಂದ ಒಂದು ಬದಿಯ ರಸ್ತೆ ಕಿನ್ನಿಗೋಳಿ, ಮತ್ತೊಂದು ಬದಿಯ ರಸ್ತೆ ಕುದ್ರಿಪದವು ಮೂಲಕ ಮುಡಬಿದಿರೆಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಶುಂಠಿಪಾಡಿ/ಕುದ್ರಿ ಪದವು ಸಂಪರ್ಕಿಸುವ ರಸ್ತೆಯ ಎರಡೂ ಬದಿಯಲ್ಲಿ ರಸ್ತೆ ಹದಗೆಟ್ಟಿದ್ದು ಜನ ಓಡಾಡಕ್ಕೆ ತೊಂದರೆ ಉಂಟು ಮಾಡುತ್ತಿದೆ. ರಸ್ತೆಯ‌ ಅರ್ಧಕ್ಕೆ‌ ಡಾಂಬರೀಕರಣ ಮಾಡಿ ಬಿಡಲಾಗಿದೆ. ಇದರಿಂದಾಗಿ‌‌ ಮಳೆಗಾಲ‌ ಆರಂಭವಾಗುತ್ತಿದ್ದಂತೆಯೇ ರಸ್ತೆ ಕಂಬಳದ ಗದ್ದೆಯಂತಾಗುತ್ತದೆ‌ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಭಾಗದ ಮಕ್ಕಳು ಶಾಲೆಗಳಿಗೆ‌ ತೆರಳಬೇಕಾದರೆ, ಇದೇ ರಸ್ತೆಯನ್ನು ಬಳಸಬೇಕಿದೆ. ಆದರೆ, ಮಳೆಯ ನೀರಿಗೆ ರಸ್ತೆ ಮುಳುಗಡೆಯಾಗುತ್ತಿರುವುದರಿಂದ ಮಕ್ಕಳು ಶಾಲೆಗೆ ಹೋಗುವುದೂ ಅಸಾಧ್ಯವಾಗಿದೆ ಎಂದು ಸ್ಥಳಿಯರಾದ ನವೀನ್ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.

ಈ ಕುರಿತು ಐಕಳ ಗ್ರಾಮ ಪಂಚಾಯತ್ ಮತ್ತು ಜನಪ್ರತಿನಿಧಿಗಳು ಶುಂಠಿಪಾಡಿ ಗ್ರಾಮಸ್ಥರಿಗೆ ಶಾಶ್ವತ ಪರಿಹಾತ ಕಲ್ಪಿಸಬೇಕೆಂದು ಗ್ರಾಮಸ್ತರು ಆಗ್ರಹಿಸಿದ್ದಾರೆ.

See also  ಮೈಸೂರು: ಅಮೃತ ಭಾರತಿಗೆ ಕನ್ನಡ ಆರತಿ ಕಾರ್ಯಕ್ರಮ 
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು