News Kannada
Sunday, October 02 2022

ಮಂಗಳೂರು

ಮಂಗಳೂರು: ಕೂಳೂರು ಸೇತುವೆ ದುರಸ್ತಿಗೆ ಸಾರ್ವಜನಿಕರ ಒತ್ತಾಯ - 1 min read

Public demands repair of Kuloor bridge
Photo Credit : By Author

ಮಂಗಳೂರು: ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 64ರ ಕೂಳೂರು ಸೇತುವೆ ಮೇಲೆ ದೊಡ್ಡ ಗಾತ್ರದ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು ಚಂದ್ರನಲ್ಲಿರುವ ಚಂದ್ರ ಕುಳಿಯಂತೆ ಕಾಣುತ್ತಿವೆ ವಾಹನ ಸಂಚಾರ ದುಸ್ತರವಾಗಿದೆ.

ಉಡುಪಿ ಭಾಗದಿಂದ ಮಂಗಳೂರು ಕಡೆಗೆ ಬರುವ ಕೂಳೂರು ಹಳೇ ಸೇತುವೆ ತೀರ ಹದಗೆಟ್ಟಿದೆ ಸೇತುವೆ ಉದ್ದಕ್ಕೂ ಅಲ್ಲಲ್ಲಿ ಡಾಂಬರು ಎದ್ದು ಹೋಗಿದ್ದು ಈ ಸೇತುವೆಯಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿ ಪರಿಣಮಿಸಿದೆ.

ಬೆಳಿಗ್ಗೆ ಮತ್ತು ಸಂಜೆ ವೇಳೆ ಪೀಕ್ ಅವರ್ ಗಳಲ್ಲಿ 150 ಮೀಟರ್ ಉದ್ದದ ಈ ಸೇತುವೆಯನ್ನು ದಾಟಲು ವಾಹನ ಸವಾರರಿಗೆ ಕನಿಷ್ಠ ಹತ್ತು ನಿಮಿಷ ತಗಲುತ್ತದೆ . ಒಂದೊಂದೇ ಹೊಂಡಗಳಿಂದ ಬಿದ್ದು ಎದ್ದು ಸರ್ಕಸ್ ಮಾಡಿಕೊಂಡು ವಾಹನ ಚಲಾಯಿಸುವ ಅಷ್ಟರಲ್ಲಿ ಚಾಲಕರ ಜೀವನ ಹೈರಾಣಾಗಿ ಹೋಗುತ್ತದೆ . ಇದರಲ್ಲಿರುವ ಡಾಂಬರು ಎದ್ದು ಕಬ್ಬಿಣದ ರಾಡುಗಳು ,ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು .ಆಂಬುಲೆನ್ಸ್ ಅಗ್ನಿಶಾಮಕ ದಳ ಮತ್ತಿತರ ತುರ್ತು ಸೇವೆಯ ವಾಹನಗಳಿಗೆ ತುರ್ತಾಗಿ ಸೇವೆಯನ್ನು ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

1952 ರಲ್ಲಿ ನಿರ್ಮಾಣವಾದ ಈ ಸೇತುವೆ ಇದೀಗ ಶಿಥಿಲವಾಗಿದ್ದು 2ಸಾವಿರದ ಇಪ್ಪತ್ತ ರಲ್ಲಿ 2ತಿಂಗಳ ಕಾಲ ಈ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ಮಾಡಿ ಪುನಶ್ಚೇತನಗೊಳಿಸಲಾಗಿತ್ತು . ಈಗ ಈ ಸೇತುವೆ ಸಂಪೂರ್ಣ ಹದಗೆಟ್ಟು ಹೋಗಿದೆ ಈ ಸೇತುವೆ ಮಾತ್ರವಲ್ಲದೇ ಇದೀಗಮಂಗಳೂರು ಭಾಗದಿಂದ ಉಡುಪಿ ಕಡೆಗೆ ಹೋಗುವ ರಸ್ತೆ ಕೂಡ ಹದಗೆಟ್ಟಿದೆ .ರಸ್ತೆಯ ಕಾಂಕ್ರೀಟಿಗೆ ಹಾಕಿದ್ದ ಕಬ್ಬಿಣದ ಸರಳುಗಳು ಕಳಚಲ್ಪಟ್ಟು ಮೇಲಕ್ಕೆ ಕಾಣುತ್ತಿವೆ ಸೇತುವೆಯನ್ನು ಕೂಡಲೇ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ

See also  ಕೊಚ್ಚಿ ಹೋದ ವಿದ್ಯಾರ್ಥಿಗಳು; ಇಬ್ಬರ ಮೃತದೇಹ ಪತ್ತೆ ಇನ್ನಿಬ್ಬರಿಗೆ ಶೋಧ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30359
ಶರಣ್‌ ರಾಜ್

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು