ಮಂಗಳೂರು: ಸಾರ್ವಜನಿಕ ಸಂಪರ್ಕ ವಲಯ ತಂತ್ರಜ್ಞಾನ ದ ಬೆಳವಣಿಗೆ ಯೊಂದಿ ಗೆ ವೇಗವಾಗಿ ಬೆಳೆಯುತ್ತಿದೆ ಜೊತೆಗೆ ಸವಾಲು ಗಳನ್ನು ಹೊಂದಿದೆ ಎಂದು ಬೆಂಗ ಳೂರು ವಿಶ್ವ ವಿದ್ಯಾಲಯದ ಸಂವಹನ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಬಿ.ಕೆ.ರವಿ ತಿಳಿಸಿದ್ದಾರೆ.
ಅವರು ಇಂದು ಮಂಗಳೂರಿನ ಹೋಟೆಲ್ ಓಷಿಯನ್ ಪರ್ಲ್‌ನಲ್ಲಿ ಪಿ.ಆರ್.ಸಿ.ಐ ಸಂಸ್ಥೆಯು ವಿಶ್ವ ಸಾರ್ವಜನಿಕ ಸಂಪರ್ಕ ದಿನಾಚರಣೆಯ ಉದ್ಘಾಟನಾ ಸಮಾ ರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸಾರ್ವಜನಿಕ ಸಂವಹನದ ಇಂದಿನ ಪ್ರತಿನಿತ್ಯ ದ ಚಟುವಟಿಕೆ ಗಳಲ್ಲೂ ಹಾಸುಹೊಕ್ಕಾಗಿದೆ.ಈ ಹಿನ್ನೆಲೆಯಲ್ಲಿ ಪರಿಶ್ರಮ, ಪಾರದರ್ಶಕತೆ ಯೊಂದಿಗೆ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ಸವಾಲು ಗಳನ್ನು ಎದುರಿಸಬೇಕಾಗಿದೆ ಎಂದು ಸಾರ್ವಜನಿಕ ಸಂಪರ್ಕ ದಿನದ ಸಮಾರಂಭಕ್ಕೆ ಶುಭ ಹಾರೈಸಿದರು.
ದಕ್ಷಿಣ ಭಾರತದ ವಿವಿಧ ಸಂಸ್ಥೆಗಳಿಗೆ ಮತ್ತು ಸಾಧಕರಿಗೆ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ವಲಯ ಪಿ.ಅರ್. ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ಸಾಧಕರಿಗೆ ರಾಜ್ಯ ಪಿ.ಆರ್.ಪ್ರಶಸ್ತಿ ಪ್ರದಾನ ನಡೆಯಿತು.
ಚೇತನ,ನವೀನ್ ಶೆಟ್ಟಿ,ಸ್ವಸ್ತಿಕಾ ನ್ಯಾಷನಲ್ ಸ್ಕೂಲ್ ಸಂಸ್ಥೆ, ನಿತ್ಯಾ ಫುಡ್ ಪ್ರೊಡಕ್ಟ್,ಹೊಟೇಲ್ ಒಶಿಯನ್ ಪರ್ಲ್, ಮುರುಗೇಶ್ ಹಿರಿಯ ಪ್ರಬಂಧಕ ಮತ್ತು ಪಿಆರ್ ಒ ಕೆಐಒಸಿಎಲ್. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತ ಪಿ.ಆರ್ ಅವಾರ್ಡ್ ಪ್ರಶಸ್ತಿ ಯನ್ನು ಪಿ.ಜೆ.ದೇವಸ್ಸಿ ಕುಟ್ಟಿ,ಸ್ವಾಮಿ ಹರಿನಾರಾಯಣ, ರಜನಿ ಲಕ್ಕಾ, ಅಮ್ಮಂಜಿ ಸುಮತಾ ನಾಯಕ್, ಯು. ಸುಧೀರ್ ಲೋಧಾ, ಎಂಆರ್ ಪಿಎಲ್ ಸಂಸ್ಥೆಯ ಪರವಾಗಿ ಪಿಆರ್ ಒ ರುಡಾಲ್ಫ್ ನರೋನ್ಹಾ ಮತ್ತು ತಂಡದವರು ಪ್ರಶಸ್ತಿ ಸ್ವೀಕರಿಸಿದರು.
ಸುದ್ದಿ ಬಿಡುಗಡೆ ಪತ್ರಿಕೆ ಗೆ ಯ ನೀಡಲಾದ ಪ್ರಶಸ್ತಿಯನ್ನು ಸಂಪಾದಕ ಡಾ.ಯು.ಪಿ.ಶಿವಾನಂದ ಮತ್ತು ಬಳಗದವ ರು ಸ್ವೀಕರಿಸಿದರು.
ಸಮಾರಂಭದಲ್ಲಿ ಪಿ.ಆರ್.ಸಿ.ಐ ರಾಷ್ಟ್ರೀಯ ಅಧ್ಯಕ್ಷ ಡಾ|ಟಿ.ವಿನಯ ಕುಮಾರ್‌ರವರು ಮಾತನಾಡುತ್ತಾ ಸತ್ಯ, ನಂಬಿಕೆ, ಪಾರದರ್ಶಕ ತೆ ಸಾರ್ವಜನಿಕ ಸಂಪರ್ಕ ದ ಪ್ರಮುಖ ಧ್ಯೇಯ ವಾಗಿದೆ. ಪರಿಣಾಮ ಕಾರಿ ಸಂವಹನಕ್ಕೆ ಅಗತ್ಯ. ಡಿಜಿಟಲ್ ತಂತ್ರಜ್ಞಾನದ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಬದಲಾವಣೆ ಗೆ ಹೊಂದಿ ಕೊಂಡಂತೆ ಪರಿಣಾಮ ಕಾರಿ ಸಾರ್ವಜನಿಕ ಸಂಪರ್ಕ ಕ್ಷೇತ್ರದಲ್ಲಿ ಯೂ ಬದಲಾವಣೆ ಅಗತ್ಯವಿದೆ ಎಂದರು.
ನವೆಂಬರ್‌ನಲ್ಲಿ ಕೊಲ್ಕತ್ತದಲ್ಲಿ ನಡೆಯಲಿರುವ ಪಿ.ಆರ್.ಸಿ.ಐ 16ನೇ ಜಾಗತಿಕ ಸಂವಹನ ಸಮಾವೇಶದ ಥೀಮ್ ಲೋಗೊವನ್ನು ಬಿಡುಗಡೆ ಗೊಳಿಸಿದ್ದಾರೆ. ವೈ.ಸಿ.ಸಿ.ಅಧ್ಯಕ್ಷ ಯಂ. ಬಿ.ಜಯರಾಮ್ ಮಾತನಾಡುತ್ತಾ, ಸಾರ್ವಜನಿಕ ಸಂಪರ್ಕದ ಚಟುವಟಿಕೆ ನಮ್ಮ ಮನೆಯಿಂದ ಲೇ ಆರಂಭಗೊಂಡು ಎಲ್ಲಾ ಕ್ಷೇತ್ರ ವನ್ನು ಆವರಿಸಿದೆ.ಇಂತಹ ಮಹತ್ವದ ಕ್ಷೇತ್ರದ ಮೂಲಕ ಸಾರ್ವಜನಿಕ ಸೇವೆಯ ಮೂಲಕ ಸಮಾಜಕ್ಕೆ ಸಾರ್ವಜನಿಕ ಸಂಸ್ಥೆ ದೇಶ ವಿದೇಶದಲ್ಲಿ ಜನರಿಗೆ ನೆರವಾಗುತ್ತಿದೆ ಎಂದು ಶುಭ ಹಾರೈಸಿದರು.
ಯೆನಪೊಯ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಯಂ. ವಿಜಯ್ ಕುಮಾರ್ ಮಾತನಾಡುತ್ತಾ, ಆರೋಗ್ಯ ಕ್ಷೇತ್ರದಲ್ಲಿ ಪರಿಣಾಮ ಕಾರಿ ಸಂವಹನದ ಅಗತ್ಯವಿದೆ, ಆದರೆ ಸಮರ್ಪಕ ಸಂವಹನ ಕೊರತೆಯಿಂದ ಆಗುತ್ತಿರುವ ಸಮಸ್ಯೆ ಗಳ ಬಗ್ಗೆಯೂ ಎಚ್ಚರಿಕೆ ಅಗತ್ಯವಿದೆ ಎಂದು ಶುಭ ಹಾರೈಸಿದರು.
ವೈ.ಸಿ.ಸಿ. ರಾಷ್ಟ್ರೀಯ ಮುಖ್ಯಸ್ಥರಾದ ಚಿನ್ನಮಯಿ ಪ್ರವೀಣ್ ಪಿಆರ್ ಸಿ.ಐ ಚಟುವಟಿಕೆ ಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಪಿ.ಆರ್.ಸಿ.ಐ. ದಕ್ಷಿಣ ವಲಯ ಅಧ್ಯಕ್ಷೆ ಡಾ.ಟಿ.ಎಸ್.ಲತಾ, ಮಂಗಳೂರು ವಲಯ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಕಾರ್ಯದರ್ಶಿ ಕ್ಯಾನುಟ್ ಜೀವನ್ ಪಿಂಟೋ, ಪಿ.ಅರ್ ಸಿ.ಐ ಕರ್ನಾಟಕ ರಾಜ್ಯದ ಮುಖ್ಯಸ್ಥರಾದ ಪಶುಪತಿ ಶರ್ಮ ಉಪಸ್ಥಿತ ರಿದ್ದರು.
ಮಂಗಳೂರು ವಲಯ ಅಧ್ಯಕ್ಷ ರಾಘವೇಂದ್ರ ಹೊಳ್ಳ ಸ್ವಾಗತಿಸಿದರು. ಕಾರ್ಯದರ್ಶಿ ಕ್ಯಾನುಟ್ ಜೀವನ್ ಪಿಂಟೋ ವಂದಿಸಿದರು. ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.