ಮಂಗಳೂರು: ಕೇರಳದಲ್ಲಿ ಎರಡನೇ ಮಂಕಿ ಪಾಕ್ಸ್ ಸೋಂಕು ಪ್ರಕರಣ ದೃಢಪಟ್ಟಿದೆ. ಈ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣ ಮೂಲಕ ಆಗಮಿಸಿರುವ ಕಾರಣ ಕರಾವಳಿ ಜಿಲ್ಲೆಗಳಲ್ಲಿನ ಒಟ್ಟು ಮೂವತ್ತೈದು ಮಂದಿ ಸಹಪ್ರಯಾಣಿಕರನ್ನು ಐಸಿಯುನಲ್ಲಿ ಇರಿಸಲಾಗಿದೆ.
ಜುಲೈ 16ರಂದು ಯುಎಇನಿಂದ ವಿಮಾನ ಮೂಲಕ ಆಗಮಿಸಿದ ಮೂವತ್ತೈದು ಹರಯದ ಯುವಕ ಕಣ್ಣೂರಿಗೆ ತೆರಳಿದ ಯುವಕನಲ್ಲಿ ಮಂಕಿ ಪಾಕ್ಸ್ ಲಕ್ಷಣ ಕಂಡುಬಂದ ಕಾರಣ ಸ್ವತಃ ಆತನೇ ಬಂದು ಆಸ್ಪತ್ರೆಗೆ ದಾಖಲಾಗಿದ್ದ ಆತನ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು ಸೋಮವಾರ ಆತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರಲ್ಲಿ ಆತನ ಮುಂದಿನ 3 ಹಾಗೂ ಹಿಂದಿನ 3 ಸಾಲಿನ ಆಸನಗಳಲ್ಲಿ ಕುಳಿತಿದ್ದ ಎಲ್ಲಾ ಪ್ರಯಾಣಿಕರನ್ನು ಗುರುತಿಸಿ ಸಂಪರ್ಕಿಸಲಾಗಿದೆ ಅವರೆಲ್ಲರನ್ನು ಐಸೋಲೇಶನ್ ಇರುವಂತೆ ಸೂಚನೆ ನೀಡಲಾಗಿದೆ. ಅವರಿಗೆ ಇದುವರೆಗೆ ಯಾವುದೇ ಲಕ್ಷಣಗಳಿಲ್ಲ ಎಂದು ಜಿಲ್ಲಾ ಕೋ ಬಿಡ್ ನೋಡಲ್ ಅಧಿಕಾರಿ ತಿಳಿಸಿದ್ದಾರೆ .
ಪ್ರಯಾಣಿಕರಲ್ಲಿ ಕಾಸರಗೋಡಿನ 15 ದಕ್ಷಿಣ ಕನ್ನಡ ಜಿಲ್ಲೆ 10 ಹಾಗೂ ಉಡುಪಿ ಜಿಲ್ಲೆಯ 8ಮಂದಿ ಸೇರಿದ್ದಾರೆ . ಜುಲೈ ಹದಿಮೂರ ರಂದು ಆಗಮಿಸಿದ ಇವರೆಲ್ಲರೂ ಇಪ್ಪತ್ತೊಂದು ದಿನಗಳ ಐಸೋಲೇಶನಲ್ಲಿ ಇರಬೇಕಾಗುತ್ತದೆ . ಅದುವರೆಗೆ ಕೋವಿಡ್ ರೀತಿಯಲ್ಲಿಯೇ ಸಮಯ ವ್ಯಯಿಸಬೇಕಾಗುತ್ತದೆ ಆಯಾ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಯಾಣಿಕರ ಮೇಲೆ ಆಯಾ ಸರಕಾರಿ ವೈದ್ಯಾಧಿಕಾರಿಗಳು ನಿಗಾ ಇರಿಸಲಿದ್ದಾರೆ ವಿಮಾನನಿಲ್ದಾಣದಲ್ಲಿ ಮಂಕಿ ಪಾಸಿಟಿವ್ ವ್ಯಕ್ತಿಯ ಇಮಿಗ್ರೇಷನ್ ಪ್ರಕ್ರಿಯೆ ನೆರೆವೇರಿಸಿದ ಅಧಿಕಾರಿ, ವಿಮಾನದಲ್ಲಿನ ಓರ್ವ ಪೈಲೆಟ್ ಅಟೆಂಡೆಂಟ್ ಅವರನ್ನು ಕೂಡ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಐಸೋಲೇಶನಲ್ಲಿ ಇರುವಂತೆ ಸೂಚಿಸಲಾಗಿದೆ ವಿಮಾನದಲ್ಲಿ ಒಟ್ಟು 119 ಮಂದಿ ಪ್ರಯಾಣಿಕರಿದ್ದರು.