ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವಿ ಚಕ್ರ ವಾಹನ ಸವಾರರಿಗೆ ಎಡಿಜಿಪಿ ಅಲೋಕ್ ಕುಮಾರ್ ಹೊಸ ನಿಯಮವೊಂದನ್ನು ಜಾರಿ ಮಾಡಿದ್ದು, ಈ ನಿಯಮದನ್ವಯ ಜಿಲ್ಲೆಯಾದ್ಯಂತ ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ. ಈ ನಿಯಮದಲ್ಲಿ 18ವರ್ಷದ ಕೆಳಗಿನ ಮಕ್ಕಳು,ಹಿರಿಯ ನಾಗರಿಕರು, ಮತ್ತು ಮಹಿಳೆಯರಿಗೆ ರಿಯಾಯಿತಿ ನೀಡಲಾಗಿದೆ.
ಈ ನಿಯಮಕ್ಕೆ ಜನಸಾಮನ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೋಲಿಸ್ ಇಲಾಖೆಯು ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಟೀಕೆಗೆ ಒಳಗಾಗಿದೆ.
ಮುಂಬೈನಲ್ಲಿ ದಯಾ ನಾಯಕ್ ಮಾಡಿದ ಹಾಗೆ ಇಲ್ಲಿ ಮಾಡಿದ್ರೆ ಸರಿ ಹೋಗುತ್ತೆಎಲ್ಲ. ಇಲ್ಲಿನವರು ಒಳ್ಳೆ ಮಕ್ಕಳ ಕಳ್ಳ ಪೊಲೀಸ್ ಆಟ ಆಡ್ತಾ ಅವರೇ.
ಶೀತ ಆಗುತ್ತೆ ಅಂತ ಮೂಗು ಕಟ್ ಮಾಡಿದ ಹಾಗಾಯ್ತು.
ಇದು ಎಂಥ ಮಾರಾಯ್ರೆ ಮಂಗಳೂರಿಗರು ಉಪ್ಪು ಖಾರ ಕಡಿಮೆ ಊಟ ಮಾಡುತ್ತಾರೆ ಅವರಿಗೆ ಸಿಟ್ಟು ಇರುವುದಿಲ್ಲ ಎಂದು ಇಂತ ಮಾಡುವುದಾ? ಇದ ನಾ ಖಂಡಿಸ್ತಿನಿ ಮಾರಾಯ್ರೆ, ಅಲ್ಲಿನ ಸಧ್ಯ ಪರಿಸ್ಥಿತಿ ನಿಭಾಯಿಸಲು ನಮ್ಮ ಕಡೆ ರೋಡ್ ರೋಡ್ನಲ್ಲಿ ಬೈಕ್ ದುಡಿಯೋ ಗಾಡಿಗಳಿಗೆ ಕೈ ತೋರಿಸಿ ದುಡ್ಡು ಕೀಳುವ ಖಾಲಿ ಪೊಲೀಸರುಂಟು ಕರೆದುಕೊಂಡು ಹೋಗಿ ಕೀಳಲಿಕ್ಕೆ ಕಳಿಸಿ ಶ್ಯಾನೆ ಮಂಡೆ ಬಿಸಿ ಮಾರಾಯ್ರೆ ಅವರಿಂದ ಆದರೆ ಇಂತಹ ರೂಲ್ಸ್ ಬೇಡ, ಜೀವ ಭಯ ಇರುವವರಿಗೆ ಹಿಂದುಗಡೆ ಸೀಟಿಗೆ ಪೊಲೀಸ್ ಕಳಸ್ತಾರ ಎಂಥ.
18 ವರ್ಷ ಮೇಲ್ಪಟ್ಟ ಅಣ್ಣ ತಮ್ಮನನ್ನೋ ಕುಳ್ಳಿರಿಸಿಕೊಂಡು ದೇವಸ್ಥಾನಕ್ಕೆ ಕೆಲಸಕ್ಕೆ ಹೋಗುವಂತಿಲ್ಲ. 50/50 ಶೇರಿನಲ್ಲಿ ಗೆಳೆಯರಿಬ್ಬರು ಕೆಲಸಕ್ಕೆ ಹೋಗುವಂತಿಲ್ಲ ಕರ್ಮ.