News Kannada
Thursday, August 18 2022

ಮಂಗಳೂರು

ಬಂಟ್ವಾಳ: ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯ ಫಲಾನುಭವಿಗಳಿಗೆ ಅನುದಾನ ಮಂಜೂರು - 1 min read

Bantwal: Funds sanctioned to beneficiaries of National Family Subsidy Scheme

ಬಂಟ್ವಾಳ: ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯ ಮೂಲಕ ಬಂಟ್ವಾಳ ತಾಲೂಕಿನ ಫಲಾನುಭವಿಗಳಿಗೆ ಪ್ರಥಮ ಕಂತಿನಲ್ಲಿ 307 ಮಂದಿಗೆ 61.40 ಲಕ್ಷ ರೂ. ಹಾಗೂ 1ನೇ ಕಂತಿನಲ್ಲಿ 644 ಜನರಿಗೆ 1.28 ಕೋ.ರೂ.ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ತಲಾ 20 ಸಾವಿರ ರೂ. ಜಮೆಯಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.

ಅವರು ಶಾಸಕರ ಕಚೇರಿಯಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದರು. ತಾಲೂಕಿನ ಒಟ್ಟು 951 ಮಂದಿಗೆ 1.90 ಕೋ.ರೂ. ಮಂಜೂರಾಗಿರುತ್ತದೆ. ಹಿಂದೆ ಚೆಕ್‌ಗಳ ಮೂಲಕ ಮೊತ್ತವನ್ನು ನೀಡಲಾಗುತ್ತಿದ್ದು, ಪ್ರಸ್ತುತ ಅದನ್ನು ನೇರವಾಗಿ ಬ್ಯಾಂಕಿಗೆ ಜಮೆ ಮಾಡಲಾಗುತ್ತದೆ. ಬಹಳ ಸಮಯದಿಂದ ಬಾಕಿ ಇದ್ದ ಅಂತ್ಯಸಂಸ್ಕಾರ ಸಹಾಯಧನ ಮೊತ್ತ ಕೂಡ ಬಿಡುಗಡೆಯಾಗಿದ್ದು, ಒಟ್ಟು 379 ತಲಾ 5 ಸಾವಿರ ರೂ.ಗಳಂತೆ 18.95 ಲಕ್ಷ ರೂ. ನೀಡಲಾಗುತ್ತದೆ ಎಂದರು.

ತಹಶೀಲ್ದಾರ್ ಡಾ| ಸ್ಮಿತಾ ರಾಮು, ಬುಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯೆ ಕಮಲಾಕ್ಷಿ ಕೆ.ಪೂಜಾರಿ, ಅನಂತಾಡಿ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ, ಮಾಜಿ ಅಧ್ಯಕ್ಷ ಸನತ್‌ಕುಮಾರ್ ರೈ, ಬರಿಮಾರು ಪಂಚಾಯತ್ ಉಪಾಧ್ಯಕ್ಷ ಸದಾಶಿವ ಬರಿಮಾರು, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಪ್ರಮುಖರಾದ ರವೀಶ್ ಶೆಟ್ಟಿ ಕರ್ಕಳ, ಗಣೇಶ್ ರೈ ಮಾಣಿ, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ನಾಗೇಶ್ ಭಂಡಾರಿ ಕರಿಂಕ, ಸದಾನಂದ ನಾವೂರು, ಸುರೇಶ್ ಕೋಟ್ಯಾನ್ ಮೊದಲಾದವರಿದ್ದರು.

ತಾಲೂಕು ಕೇಂದ್ರ ಸ್ಥಾನೀಯ ಶಿರಸ್ತೆದಾರ್ ನರೇಂದ್ರನಾಥ ಮಿತ್ತೂರು ಫಲಾನುಭವಿಗಳ ವಿವರ ನೀಡಿದರು. ಕಂದಾಯ ನಿರೀಕ್ಷಕರಾದ ವಿಜಯ ಆರ್, ಸಂತೋಷ್, ಪ್ರಶಾಂತ್ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿಗಳಾದ ವಂದನಾ, ಅಶ್ವಿನಿ, ಸ್ವಾತಿ, ಚೆನ್ನಬಸವ ಅಲ್ಲವಗೋಲ, ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿದ್ದರು.

See also  ಸುಲ್ಕೇರಿ ಅನುದಾನಿತ ಸರಕಾರಿ ಹಿರಿಯ ಪ್ರಾಥಮಿಕ‌ ಶಾಲೆಗೆ ನೂತನ ಶಾಲಾ ಬಸ್ ಕೊಡುಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು